ಬಂಟ್ವಾಳದಲ್ಲಿ ಕೋವಿಡ್ ಕಫ್ರ್ಯೂ ನೆಪದಲ್ಲಿ ಅಧಿಕಾರಿಗಳ ದಿಢೀರ್ ದಾಳಿ: ಸಾರ್ವಜನಿಕರ ಆಕ್ರೋಶ - Karavali Times ಬಂಟ್ವಾಳದಲ್ಲಿ ಕೋವಿಡ್ ಕಫ್ರ್ಯೂ ನೆಪದಲ್ಲಿ ಅಧಿಕಾರಿಗಳ ದಿಢೀರ್ ದಾಳಿ: ಸಾರ್ವಜನಿಕರ ಆಕ್ರೋಶ - Karavali Times

728x90

23 April 2021

ಬಂಟ್ವಾಳದಲ್ಲಿ ಕೋವಿಡ್ ಕಫ್ರ್ಯೂ ನೆಪದಲ್ಲಿ ಅಧಿಕಾರಿಗಳ ದಿಢೀರ್ ದಾಳಿ: ಸಾರ್ವಜನಿಕರ ಆಕ್ರೋಶ

ಬಂಟ್ವಾಳ, ಎಪ್ರಿಲ್ 24, 2021 (ಕರಾವಳಿ ಟೈಮ್ಸ್) : ಕೋವಿಡ್ ಹೆಚ್ಚಳ ಹಿನ್ನಲೆಯಲ್ಲಿ ರಾಜ್ಯ ಸರಕಾರ ದಿಢೀರ್ ಹೊರಡಿಸಿದ ಆದೇಶ ಪಾಲನೆಯ ಭಾಗವಾಗಿ ಶುಕ್ರವಾರ ಬೆಳಿಗ್ಗೆಯಿಂದಲೇ ಬಂಟ್ವಾಳದಲ್ಲಿ ತಾಲೂಕು ತಹಶೀಲ್ದಾರ್, ಪುರಸಭಾ ಮುಖ್ಯಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಏಕಾಏಕಿ ಕಾರ್ಯಾಚರಣೆ ಕೈಗೊಂಡಿದ್ದು ಸಾರ್ವಜನಿಕರ ಪಾಲಿಗೆ ತೀವ್ರ ತೊಂದರೆಯಾದ ಹಿನ್ನಲೆಯಲ್ಲಿ ಸರಕಾರ ಹಾಗೂ ಅಧಿಕಾರಿಗಳ ಕ್ರಮದ ವಿರುದ್ದ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


    ಅಗತ್ಯ ಸೇವೆ ಹೊರತುಪಡಿಸಿದ ಅಂಗಡಿ-ಮುಂಗಟ್ಟುಗಳನ್ನು ಅಧಿಕಾರಿಗಳು ಬಲವಂತವಾಗಿ ಮುಚ್ಚಿಸಿದ್ದಲ್ಲದೆ ಕೋವಿಡ್ ನಿಯಮಾವಳಿ ಉಲ್ಲಂಘನೆ ಎಂಬ ನೆಪದಲ್ಲಿ ಅಗತ್ಯ ಸೇವೆಗಳ ಅಂಗಡಿ ಮಾಲಕರಿಗೆ ದಂಡ ವಿಧಿಸಿದ್ದಾರೆ. ಈ ಸಂದರ್ಭ ಅಧಿಕಾರಿಗಳು ಹಾಗೂ ಸಾರ್ವಜನಿಕರು, ಅಂಗಡಿ ಮಾಲಕರ ಮಧ್ಯೆ ತೀವ್ರ ಮಾತಿನ ವಿನಿಮಯ ನಡೆದಿರುವುದಲ್ಲದೆ ಅಧಿಕಾರಿಗಳ ಹಾಗೂ ಸರಕಾರದ ದಿಢೀರ್ ಕ್ರಮಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 


    ಒಂದೇ ದಿನದ ಅಂತರದಲ್ಲಿ ಕೋವಿಡ್ ನೆಪದಲ್ಲಿ ಮಾರ್ಗಸೂಚಿ ಹೊರಡಿಸಿರುವ ಸರಕಾರ ಎಲ್ಲಾ ವಹಿವಾಟು ಹಾಗೂ ಕಾರ್ಯಕ್ರಮಗಳನ್ನು ಏಕಾಏಕಿ ಬಂದ್ ಮಾಡಿಸುವಂತೆ ಅಧಿಕಾರಿಗಳು ಹಾಗೂ ಪೊಲೀಸರ ಮುಖಾಂತರ ಬಲವಂತದ ಕ್ರಮ ಜಾರಿಗೊಳಿಸಿದ ಪರಿಣಾಮ ಜನ ತಮ್ಮ ವ್ಯಾಪಾರ-ವಹಿವಾಟುಗಳಲ್ಲಿ ತೀವ್ರ ನಷ್ಟ ಹಾಗೂ ಏರು-ಪೇರು ಅನುಭವಿಸಿದ ಕಾರಣ ಹಾಗೂ ಹಲವು ನಿಗದಿತ ಕಾರ್ಯಕ್ರಮಗಳನ್ನೂ ಕೂಡಾ ಹಠಾತ್ ನಿಲ್ಲಿಸಬೇಕಾಗಿ ಬಂದಿರುವುದರಿಂದ ತೊಂದರೆ ಹಾಗೂ ನಷ್ಟ ಅನುಭವಿಸಿದ ಹಿನ್ನಲೆಯಲ್ಲಿ ಜನ ಸಹಜವಾಗಿ ಅಧಿಕಾರಿಗಳ ಜೊತೆ ಗರಂ ಆಗಿರುವುದು ಕಂಡು ಬಂತು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಕೋವಿಡ್ ಕಫ್ರ್ಯೂ ನೆಪದಲ್ಲಿ ಅಧಿಕಾರಿಗಳ ದಿಢೀರ್ ದಾಳಿ: ಸಾರ್ವಜನಿಕರ ಆಕ್ರೋಶ Rating: 5 Reviewed By: karavali Times
Scroll to Top