ಮಸೀದಿಗಳಲ್ಲಿ ಕೋವಿಡ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಿ : ಕೆ.ಸಿ.ರೋಡು ಸಅದಿ ಕರೆ - Karavali Times ಮಸೀದಿಗಳಲ್ಲಿ ಕೋವಿಡ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಿ : ಕೆ.ಸಿ.ರೋಡು ಸಅದಿ ಕರೆ - Karavali Times

728x90

20 April 2021

ಮಸೀದಿಗಳಲ್ಲಿ ಕೋವಿಡ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಿ : ಕೆ.ಸಿ.ರೋಡು ಸಅದಿ ಕರೆ

 
ಮಂಗಳೂರು, ಎಪ್ರಿಲ್ 21, 2021 (ಕರಾವಳಿ ಟೈಮ್ಸ್) : ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುಸ್ಲಿಮರು ಮಸೀದಿಗಳಲ್ಲಿ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಮುಖ ಸುನ್ನೀ ವಿದ್ವಾಂಸ ಹುಸೈನ್ ಸಅದಿ ಕೆ.ಸಿ.ರೋಡು ಅವರು ಸಮುದಾಯಕ್ಕೆ ಕರೆ ನೀಡಿದ್ದಾರೆ. 


    ಸೀಮಿತ ಸಂಖ್ಯೆಯಲ್ಲಿ ಮಾತ್ರ ವಿಶ್ವಾಸಿಗಳು ಮಸೀದಿಗೆ ಬರಬೇಕು. ಮಸೀದಿಗೆ ಬರುವರು ಅಂಗ ಶುದ್ದಿ, ಶೌಚಾಲಯ ಎಲ್ಲವನ್ನೂ ಮನೆಯಲ್ಲೇ ಮುಗಿಸಿ ಬರಬೇಕು. ಮಸೀದಿಯಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿ ಪಾಲಿಸಬೇಕು. ಪ್ರಾಯಸ್ಥರು, ರೋಗಿಗಳು ಹಾಗೂ ಸಣ್ಣ ಮಕ್ಕಳು ಮನೆಯಲ್ಲೇ ನಮಾಝ್ ನಿರ್ವಹಿಸಬೇಕು ಎಂದು ಹುಸೈನ್ ಸಅದಿ ಮನವಿ ಮಾಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಸೀದಿಗಳಲ್ಲಿ ಕೋವಿಡ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಿ : ಕೆ.ಸಿ.ರೋಡು ಸಅದಿ ಕರೆ Rating: 5 Reviewed By: karavali Times
Scroll to Top