ಐಪಿಎಲ್ : ರಾಜಸ್ಥಾನ ರಾಯಲ್ಸ್ ವಿರುದ್ದ ಮುಂಬೈಗೆ 7 ವಿಕೆಟ್ ಜಯ - Karavali Times ಐಪಿಎಲ್ : ರಾಜಸ್ಥಾನ ರಾಯಲ್ಸ್ ವಿರುದ್ದ ಮುಂಬೈಗೆ 7 ವಿಕೆಟ್ ಜಯ - Karavali Times

728x90

29 April 2021

ಐಪಿಎಲ್ : ರಾಜಸ್ಥಾನ ರಾಯಲ್ಸ್ ವಿರುದ್ದ ಮುಂಬೈಗೆ 7 ವಿಕೆಟ್ ಜಯ

 

ನವದೆಹಲಿ, ಎಪ್ರಿಲ್ 29, 2021 (ಕರಾವಳಿ ಟೈಮ್ಸ್) : ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಗುರುವಾರ ಸಂಜೆ ನಡೆದ ಐಪಿಎಲ್‌ ಕೂಟದ ಪಂದ್ಯದಲ್ಲಿ ಮುಂಬೈ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಮುಂಬೈ 7 ವಿಕೆಟ್‍ಗಳ ಗೆಲುವು ಪಡೆದುಕೊಂಡಿದೆ.

ರಾಜಸ್ಥಾನ ನಿಗದಿಪಡಿಸಿದ 172 ರನ್ ಗುರಿ ಬೆನ್ನಟ್ಟಿದ ಮುಂಬೈ ತಂಡ 18.3 ಓವರ್‍ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಇನ್ನೂ 9 ಎಸೆತ ಬಾಕಿ ಇರುವಂತೆ 172 ರನ್ ಸಿಡಿಸಿ ಜಯಭೇರಿ ಭಾರಿಸಿತು.

ಮುಂಬೈ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಕ್ವಿಂಟನ್ ಡಿಕಾಕ್ ಅಜೇಯ 70 ರನ್ (50 ಎಸೆತ, 6 ಬೌಂಡರಿ, 2 ಸಿಕ್ಸರ್), ಕೃನಾಲ್ ಪಾಂಡ್ಯ 39 ರನ್ (26 ಎಸೆತ, 2 ಬೌಂಡರಿ, 2 ಸಿಕ್ಸ್) ಭಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯಲ್ಲಿ ಕೀರನ್ ಪೊಲಾರ್ಡ್ 16 ರನ್ (8 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿದರು. 

ರಾಜಸ್ಥಾನ ಪರ ಕ್ರೀಸ್ ಮೋರಿಸ್ 2 ವಿಕೆಟ್ ಮತ್ತು ಮುಸ್ತುಫಿಜುರ್ ರೆಹಮಾನ್ 1 ವಿಕೆಟ್ ಪಡೆದರು.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್ 41ರನ್ (32 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ಯಶಸ್ವಿ ಜೈಸ್ವಾಲ್ 32 ರನ್ (20 ಎಸೆತ, 2 ಬೌಂಡರಿ, 2 ಸಿಕ್ಸರ್) ಜೋಡಿ 66 ರನ್ (47 ಎಸೆತ) ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿತು.  

ನಂತರ ಬಂದ ನಾಯಕ ಸಂಜು ಸ್ಯಾಮ್ಸನ್  42 ರನ್ ( 27 ಎಸೆತ, 5 ಬೌಂಡರಿ) ಸಿಡಿಸುವ ಮೂಲಕ ಶಿವಂ ದುಬೆ 35ರನ್ (31 ಎಸೆತ, 2 ಬೌಂಡರಿ, 2 ಸಿಕ್ಸ್) ಜೊತೆ ಮೂರನೇ ವಿಕೆಟ್‍ಗೆ 57 ರನ್ (49 ಎಸೆತ)ಗಳ ಜೊತೆಯಾಟವಾಡಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಚೇತರಿಕೆ ನೀಡಿದರು. ಅಂತಿಮವಾಗಿ ರಾಜಸ್ಥಾನ ತಂಡ ನಿಗದಿತ 20 ಓವರ್‍ ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು.

ಮುಂಬೈ ಪರ ರಾಹುಲ್ ಚಹರ್ ಎರಡು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಮತ್ತು ಬುಮ್ರಾ ತಲಾ 1 ವಿಕೆಟ್ ಪಡೆದರು.

  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ : ರಾಜಸ್ಥಾನ ರಾಯಲ್ಸ್ ವಿರುದ್ದ ಮುಂಬೈಗೆ 7 ವಿಕೆಟ್ ಜಯ Rating: 5 Reviewed By: karavali Times
Scroll to Top