ಸಿಡಿಲಾಘಾತಕ್ಕೆ ಕರಟಿದ ಚಿನ್ನಾಭರಣ, ಸುಟ್ಟು ಹೋದ ಕರೆನ್ಸಿಗಳು : ಕಂಗಾಲಾದ ಬಡ ಕುಟುಂಬ - Karavali Times ಸಿಡಿಲಾಘಾತಕ್ಕೆ ಕರಟಿದ ಚಿನ್ನಾಭರಣ, ಸುಟ್ಟು ಹೋದ ಕರೆನ್ಸಿಗಳು : ಕಂಗಾಲಾದ ಬಡ ಕುಟುಂಬ - Karavali Times

728x90

12 April 2021

ಸಿಡಿಲಾಘಾತಕ್ಕೆ ಕರಟಿದ ಚಿನ್ನಾಭರಣ, ಸುಟ್ಟು ಹೋದ ಕರೆನ್ಸಿಗಳು : ಕಂಗಾಲಾದ ಬಡ ಕುಟುಂಬ

ಶಾಸಕರ, ಅಧಿಕಾರಿಗಳ ಗರಿಷ್ಠ ಸ್ಪಂದನೆಯ ನಿರೀಕ್ಷೆಯಲ್ಲಿ ಕುಟುಂಬ


ಬಂಟ್ವಾಳ, ಎಪ್ರಿಲ್ 12, 2021 (ಕರಾವಳಿ ಟೈಮ್ಸ್) : ಭಾನುವಾರ ರಾತ್ರಿ ಭಾರೀ ಗುಡುಗು-ಸಿಡಿಲಿನಿಂದ ಕೂಡಿದ ಮಳೆ ಸಂದರ್ಭ ಸಜಿಪಮುನ್ನೂರು ಗ್ರಾಮದ ಮಿತ್ತಕಟ್ಟೆ ನಿವಾಸಿ ಲಲಿತ ಅವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿದೆ. 

ಮನೆಗೆ ಉಂಟಾದ ಸಿಡಿಲಾಘಾತದಿಂದ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳ ಸಹಿತ ಇತರ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಮನೆಯ ಕೋಣೆಯೊಳಗಿನ ಕಪಾಟಿಗೂ ಸಿಡಿಲು ಬಡಿದ ಪರಿಣಾಮ ಕಪಾಟಿನಲ್ಲಿದ್ದ ಚಿನ್ನಾಭರಣಗಳು ಸುಟ್ಟು ಕರಕಲಾಗಿದ್ದು, ಹಳದಿ ಚಿನ್ನ ಕಪ್ಪು ಬಣ್ಣಕ್ಕೆ ತಿರುಗಿದ್ದು ಭಾರೀ ಹಾನಿ ಸಂಭವಿಸಿದೆ. ಅಲ್ಲದೆ ಸಂಬಂಧಿಕರ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ನಗದು ಹಣ ಸಿಡಿಲಿನ ಬೆಂಕಿಗೆ ಸುಟ್ಟು ಹೋಗಿದೆ. ಒಟ್ಟಿನಲ್ಲಿ ಸಿಡಿಲಿನ ಆಘಾತದಿಂದಾಗಿ ಬಡ ಕುಟುಂಬ ತೀವ್ರ ನಷ್ಟಕ್ಕೆ ಗುರಿಯಾಗಿದ್ದು, ದಿಕ್ಕಿಲ್ಲದಂತಾಗಿದೆ. 

ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು, ಸಮಾಜ ಸೇವಕ ಸಂಘಟನೆಗಳು ಹಾಗೂ ಕಂದಾಯ ಅಧಿಕಾರಿಗಳು ಬಡ ಕುಟುಂಬಕ್ಕಾಗಿರುವ ಆಘಾತವನ್ನು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಕುಟುಂಬಕ್ಕೆ ಆಗಿರುವ ಅಪಾರ ಪ್ರಮಾಣದ ನಷ್ಟ ತುಂಬಿಸಿಕೊಡಲು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಿಡಿಲಾಘಾತಕ್ಕೆ ಕರಟಿದ ಚಿನ್ನಾಭರಣ, ಸುಟ್ಟು ಹೋದ ಕರೆನ್ಸಿಗಳು : ಕಂಗಾಲಾದ ಬಡ ಕುಟುಂಬ Rating: 5 Reviewed By: karavali Times
Scroll to Top