ಕೊರೋನಾಘಾತಕ್ಕೆ ನೀಟ್ ಪರೀಕ್ಷೆಯೂ ಮುಂದೂಡಿಕೆ : ಕೇಂದ್ರ ಆರೋಗ್ಯ ಸಚಿವರಿಂದ ಘೋಷಣೆ - Karavali Times ಕೊರೋನಾಘಾತಕ್ಕೆ ನೀಟ್ ಪರೀಕ್ಷೆಯೂ ಮುಂದೂಡಿಕೆ : ಕೇಂದ್ರ ಆರೋಗ್ಯ ಸಚಿವರಿಂದ ಘೋಷಣೆ - Karavali Times

728x90

15 April 2021

ಕೊರೋನಾಘಾತಕ್ಕೆ ನೀಟ್ ಪರೀಕ್ಷೆಯೂ ಮುಂದೂಡಿಕೆ : ಕೇಂದ್ರ ಆರೋಗ್ಯ ಸಚಿವರಿಂದ ಘೋಷಣೆ



ನವದೆಹಲಿ:, ಎಪ್ರಿಲ್ 16, 2021 (ಕರಾವಳಿ ಟೈಮ್ಸ್) :
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ನೀಟ್ ಪಿಜಿ ಪರೀಕ್ಷೆಯನ್ನು ಕೂಡಾ ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
    ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಸಿಬಿಎಸ್‍ಇ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ನೀಟ್ ಪಿಜಿ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಏಪ್ರಿಲ್ 18 ರಂದು ಪರೀಕ್ಷೆ ನಡೆಯಬೇಕಿತ್ತು. ಕೊರೊನಾ ಪರಿಸ್ಥಿತಿ ನೋಡಿಕೊಂಡು ಮುಂದಿನ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾಘಾತಕ್ಕೆ ನೀಟ್ ಪರೀಕ್ಷೆಯೂ ಮುಂದೂಡಿಕೆ : ಕೇಂದ್ರ ಆರೋಗ್ಯ ಸಚಿವರಿಂದ ಘೋಷಣೆ Rating: 5 Reviewed By: karavali Times
Scroll to Top