ಸಿ.ಬಿ.ಎಸ್.ಇ. ಪರೀಕ್ಷೆ ರದ್ದು ಬಳಿಕ ರಾಜ್ಯ ಎಸ್ಸೆಸ್ಸೆಲ್ಸಿ ಬಗ್ಗೆಯೂ ಊಹಾಪೋಹ : ಈ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದು ಶಿಕ್ಷಣ ಸಚಿವರು - Karavali Times ಸಿ.ಬಿ.ಎಸ್.ಇ. ಪರೀಕ್ಷೆ ರದ್ದು ಬಳಿಕ ರಾಜ್ಯ ಎಸ್ಸೆಸ್ಸೆಲ್ಸಿ ಬಗ್ಗೆಯೂ ಊಹಾಪೋಹ : ಈ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದು ಶಿಕ್ಷಣ ಸಚಿವರು - Karavali Times

728x90

14 April 2021

ಸಿ.ಬಿ.ಎಸ್.ಇ. ಪರೀಕ್ಷೆ ರದ್ದು ಬಳಿಕ ರಾಜ್ಯ ಎಸ್ಸೆಸ್ಸೆಲ್ಸಿ ಬಗ್ಗೆಯೂ ಊಹಾಪೋಹ : ಈ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದು ಶಿಕ್ಷಣ ಸಚಿವರು


ಬೆಂಗಳೂರು, ಎಪ್ರಿಲ್ 14, 2021 (ಕರಾವಳಿ ಟೈಮ್ಸ್) : ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ ಆದೇಶದ ಬಳಿಕ ರಾಜ್ಯದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದತಿ ಬಗ್ಗೆ ಕೆಲ ಊಹಾಪೋಹದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಅಥವಾ ಮುಂದೂಡುವ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದವರು ತಿಳಿಸಿದ್ದಾರೆ. 

ಸಿಬಿಎಸ್‍ಇ ನಿರ್ಧಾರದ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ರದ್ದತಿಗೆ ಸಂಬಂಧಿಸಿದಂತೆ ರಾಜ್ಯವು ಏನನ್ನೂ ನಿರ್ಧರಿಸಿಲ್ಲ. ಎಲ್ಲಾ ನಿಯತಾಂಕಗಳನ್ನು ಪರಿಗಣಿಸಿ ಭವಿಷ್ಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಸಚಿವರು, ಸಿಬಿಎಸ್‍ಇ 10ನೇ ತರಗತಿಗಳ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಎಸ್‍ಎಸ್‍ಎಲ್‍ಸಿ  ಪರೀಕ್ಷೆಗಳ ಕುರಿತು ಈಗಾಗಲೇ ಊಹಾಪೆÇೀಹ ಏಳತೊಡಗಿದೆ. ನಮ್ಮ ರಾಜ್ಯದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಪ್ರಾರಂಭವಾಗಬೇಕಿರುವುದು 21.6.2021 ರಿಂದ, ಅಂದರೆ ಜೂನ್ 21 ರಿಂದ.  ಆದ್ದರಿಂದ ಈಗ ನಮ್ಮ ರಾಜ್ಯದಲ್ಲಿ ಸಿಬಿಎಸ್‍ಇ ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಳದ ಹಿನ್ನೆಲೆ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ್ದು12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ.

  • Blogger Comments
  • Facebook Comments

1 comments:

Item Reviewed: ಸಿ.ಬಿ.ಎಸ್.ಇ. ಪರೀಕ್ಷೆ ರದ್ದು ಬಳಿಕ ರಾಜ್ಯ ಎಸ್ಸೆಸ್ಸೆಲ್ಸಿ ಬಗ್ಗೆಯೂ ಊಹಾಪೋಹ : ಈ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದು ಶಿಕ್ಷಣ ಸಚಿವರು Rating: 5 Reviewed By: karavali Times
Scroll to Top