ಲಾಕ್ ಡೌನ್ ಅವಧಿಯಲ್ಲಿ ಪ್ರತಿದಿನ ಮಧ್ಯಾಹ್ನ 12ರವರೆಗೆ ಅಂಚೆ ಸೇವೆಗಳು ಲಭ್ಯ - Karavali Times ಲಾಕ್ ಡೌನ್ ಅವಧಿಯಲ್ಲಿ ಪ್ರತಿದಿನ ಮಧ್ಯಾಹ್ನ 12ರವರೆಗೆ ಅಂಚೆ ಸೇವೆಗಳು ಲಭ್ಯ - Karavali Times

728x90

28 April 2021

ಲಾಕ್ ಡೌನ್ ಅವಧಿಯಲ್ಲಿ ಪ್ರತಿದಿನ ಮಧ್ಯಾಹ್ನ 12ರವರೆಗೆ ಅಂಚೆ ಸೇವೆಗಳು ಲಭ್ಯ

ಮಂಗಳೂರು, ಎಪ್ರಿಲ್ 28, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರದ ಆದೇಶದಂತೆ ಎಪ್ರಿಲ್ 27 ರ ರಾತ್ರಿ 9 ಗಂಟೆಯಿಂದ ಮೇ 12 ರ ಸಂಜೆ 6 ಗಂಟೆಯವರೆಗೆ ಲಾಕ್ ಡೌನ್ ಇರುವ ಕಾರಣ ಸಾರ್ವಜನಿಕರಿಗೆ ಈ ಸಂಧರ್ಭದಲ್ಲಿ ಅಗತ್ಯ ಅಂಚೆ ಸೇವೆಗಳನ್ನು ಒದಗಿಸಲು ಪುತ್ತೂರು ಹಾಗೂ ಮಂಗಳೂರು ಅಂಚೆ ವಿಭಾಗದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಮಂಗಳೂರು ವಿಭಾಗ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ. 

ಎಲ್ಲಾ ಶಾಖಾ, ಉಪ ಹಾಗೂ ಪ್ರಧಾನ ಅಂಚೆ ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 12ರವರೆಗೆ ಸಾರ್ವಜನಿಕರಿಗೆ ವ್ಯವಹಾರಕ್ಕೆ ಲಭ್ಯವಿರುತ್ತದೆ., ದೇಶದಾದ್ಯಂತ ಅಂಚೆ ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದು, ದೇಶದ ಯಾವುದೇ ಊರಿಗೂ ಸ್ಪೀಡ್ ಪೆÇೀಸ್ಟ್, ಪಾರ್ಸೆಲ್ ಪತ್ರಗಳನ್ನು ಕಳುಹಿಸಬಹುದಾಗಿದೆ. ಸಾರ್ವಜನಿಕರು ತಾವು ಕಳುಹಿಸುವ ಪತ್ರ ಹಾಗೂ ಪಾರ್ಸೆಲ್‍ಗಳ ಮೇಲೆ ವಿಳಾಸದಾರರ ಪೂರ್ತಿ ಹೆಸರು ವಿಳಾಸದ ಜೊತೆಯಲ್ಲಿ ಫೆÇೀನ್ ಅಥವಾ ಮೊಬೈಲ್ ಸಂಖ್ಯೆಯನ್ನು ಮೂದಿಸಬೇಕು. ಇದು ಬಟವಾಡೆ ಅಂಚೆ ಕಚೇರಿಯ ಮೂಲಕ ವಿಳಾಸದಾರರಿಗೆ ಪತ್ರ ಹಾಗೂ ಪಾರ್ಸೆಲ್‍ಗಳನ್ನು ಕ್ಷಿಪ್ರವಾಗಿ ತಲುಪಿಸಲು ಸಹಾಯಕವಾಗುತ್ತದೆ., ಔಷಧಗಳನ್ನು ಕಳುಹಿಸುವಾಗ ಪಾರ್ಸೆಲ್‍ಗಳ ಮೇಲೆ “ಔಷಧ” ಎಂದು ದೊಡ್ಡ ಅಕ್ಷರದಲ್ಲಿ ಬರೆಯಬೇಕು., ಮಂಗಳೂರು ಪ್ರಧಾನ ಅಂಚೆ ಕಚೇರಿ ಹಾಗೂ ಕುಲಶೇಖರ ಅಂಚೆ ಕಚೇರಿಯಲ್ಲಿ ಎ.ಟಿ.ಎಂ ಪ್ರತೀ ದಿನ 24*7 ಆಗಿ ಕಾರ್ಯನಿರ್ವಹಿಸಲಿದೆ., ಅಂಚೆ ಇಲಾಖೆಯಲ್ಲಿ ಅನೇಕ ಆನ್ ಲೈನ್ ಸೇವೆಗಳು ಲಭ್ಯವಿದ್ದು, ಅಂಚೆ ಜೀವ ವಿಮೆ ಕಂತನ್ನು ತಿತಿತಿ.iಟಿಜiಚಿಠಿosಣ.gov.iಟಿ ಲಿಂಕಲ್ಲಿ ಪಾವತಿ ಮಾಡಬಹುದಾಗಿದೆ., ಅಂಚೆ ಕಛೇರಿಗಳಲ್ಲಿ ಆಧಾರ್ ಸೇವೆಗಳನ್ನು ಲಾಕ್ ಡೌನ್ ಅವಧಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೋಳಿಸಲಾಗಿದೆ., ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ಹೊಂದಿರುವವರು ಮೊಬೈಲ್ ಅಪನ್ನು ಬಳಸಿಕೊಂಡು ಇತರ ಬ್ಯಾಂಕ್ ಖಾತೆಗಳಿಗೆ ಹಣ ಕಳುಹಿಸಬಹುದು ಅಲ್ಲದೇ ಮೊಬೈಲ್ ಹಾಗೂ ಡಿ.ಟಿ.ಎಚ್ ರೀಚಾರ್ಜ್ ಕೂಡ ಮಾಡಬಹುದಾಗಿದೆ., ಅಂಚೆ ಕಚೇರಿಯಲ್ಲಿ ಸಾಮಾನ್ಯ ಸೇವಾ ಕೇಂದ್ರ (ಕಾಮನ್ ಸರ್ವಿಸ್ ಸೆಂಟರ್) ಮೂಲಕ ಕೂಡ ಎಲ್.ಐ.ಸಿ. ಜೀವ ವಿಮೆ ಕಂತು ಪಾವತಿ ಹಾಗೂ ಮೊಬೈಲ್, ಡಿ.ಟಿ.ಎಚ್ ರೀಚಾರ್ಜ್ ಮಾಡಬಹುದಾಗಿದೆ., ಬೇರೆ ಬ್ಯಾಂಕುಗಳಲ್ಲಿರುವ ಖಾತೆಗಳಿಂದ ಹಣವನ್ನು  ಂಇPS ತಂತ್ರಜ್ಞಾನದ ಅಡಿಯಲ್ಲಿ ಅಂಚೆಯಣ್ಣನ ಮೂಲಕ ಅಥವಾ ಅಂಚೆ ಕಚೇರಿಯಿಂದ ಪಡೆಯಬಹುದಾಗಿದೆ. ಶನಿವಾರ ಕೂಡ ಅಂಚೆ ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ಮಾತ್ರ ರಜಾ ದಿನವಾಗಿರುತ್ತದೆ., ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪೆನ್ಷನ್ ಹಣವು ಅಂಚೆ ಕಚೇರಿಯ ಉಳಿತಾಯ ಖಾತೆಗೆ ಜಮಾ ಆಗುತ್ತಿದ್ದಂತೆ ಅದನ್ನು ಖಾತೆದಾರರು ಪೆÇೀಸ್ಟ್ ಮ್ಯಾನ್ ಮೂಲಕವೂ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿ ಅಥವಾ ಪೆÇೀಸ್ಟ್ ಮ್ಯಾನ್ ಅನ್ನು ಸಂಪರ್ಕಿಸಬಹುದು., ಯು.ಕೆ, ಕೆನಡಾ, ನ್ಯೂಜಿಲ್ಯಾಂಡ್, ಮಂಗೋಲಿಯಾ, ಲೂಕ್ಸಂಬರ್ಗ್, ಸೆರ್ಬಿಯಾ ದೇಶಗಳಿಗೆ ಪಾರ್ಸೆಲ್ ಸೇವೆಯು ರದ್ದಾಗಿದ್ದು ಇನ್ನುಳಿದ ದೇಶಗಳಿಗೂ ಪಾರ್ಸೆಲ್ ತಲುಪಿಸಲು ವಿಳಂಬವಾಗಬಹುದು. ಹಾಗೆಯೇ ಸ್ವದೇಶಗಳಿಂದ ತರಿಸುವ ಪಾರ್ಸೆಲ್/ ಪತ್ರಗಳ ಬಟವಾಡೆಯಲ್ಲೂ ಕೂಡ ಲಾಕ್ ಡೌನ್ ಕಾರಣದಿಂದ ವಿಳಂಬದ ಸಾಧ್ಯತೆ ಇರುವುದರಿಂದ ಯಾವುದೇ ಆಹಾರ ವಸ್ತು ಇತ್ಯಾದಿಗಳನ್ನು ಪಾರ್ಸೆಲ್ ಮೂಲಕ ಕಳುಹಿಸಬಾರದು., ಗ್ರಾಹಕರು ಅಂಚೆ ಕಚೇರಿಗೆ ಭೇಟಿ ನೀಡುವಾಗ ವೈಯಕ್ತಿಕ ಅಂತರ, ಸ್ಯಾನಿಟೈಸರ್ ಬಳಕೆ ಮೊದಲಾದ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಲಾಕ್ ಡೌನ್ ಅವಧಿಯಲ್ಲಿ ಪ್ರತಿದಿನ ಮಧ್ಯಾಹ್ನ 12ರವರೆಗೆ ಅಂಚೆ ಸೇವೆಗಳು ಲಭ್ಯ Rating: 5 Reviewed By: karavali Times
Scroll to Top