ಪುದು ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಹೃದಯಾಘಾತದಿಂದ‌ ನಿಧನ - Karavali Times ಪುದು ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಹೃದಯಾಘಾತದಿಂದ‌ ನಿಧನ - Karavali Times

728x90

29 April 2021

ಪುದು ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಹೃದಯಾಘಾತದಿಂದ‌ ನಿಧನ

 ಬಂಟ್ವಾಳ, ಎಪ್ರಿಲ್ 29, 2021 (ಕರಾವಳಿ ಟೈಮ್ಸ್) : ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಲಕ್ಷ್ಮಿ (53) ಅವರು ಹೃದಯಾಘಾತದಿಂದ ಗುರುವಾರ ನಿಧನರಾದರು. 

ಪುದು ಗ್ರಾಮದ ಕುಮ್ಡೇಲು ನಿವಾಸಿಯಾದ ಅವರು ಮಾರಿಪಳ್ಳ ಸಮೀಪದ ಪೇರಿಮಾರ್ ವಾರ್ಡ್ ನಿಂದ ಸತತ ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕಳೆದ ಬಾರಿಯ ಚುನಾವಣೆಯಲ್ಲೂ ಗೆದ್ದಿರುವ ಲಕ್ಷ್ಮಿ ಪ್ರಸ್ತುತ ಪಂಚಾಯತಿನ ಹಾಲಿ ಸದಸ್ಯರೂ ಆಗಿದ್ದಾರೆ.  

ಮೃತರು ಪತಿ, ಒಬ್ಬರು ಪುತ್ರರು,  ಓರ್ವ ಪುತ್ರಿ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. 

ಲಕ್ಷ್ಮೀ ಅವರ ನಿಧನಕ್ಕೆ ಶಾಸಕ ಯು.ಟಿ. ಖಾದರ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಮಾಜಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಪುದು ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪುದು ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಹೃದಯಾಘಾತದಿಂದ‌ ನಿಧನ Rating: 5 Reviewed By: karavali Times
Scroll to Top