ಬಿ.ಸಿ.ರೋಡಿನ ಐತಿಹಾಸಿಕ ರಂಗಮಂದಿರ ಇನ್ನು ನೆನಪು ಮಾತ್ರ - Karavali Times ಬಿ.ಸಿ.ರೋಡಿನ ಐತಿಹಾಸಿಕ ರಂಗಮಂದಿರ ಇನ್ನು ನೆನಪು ಮಾತ್ರ - Karavali Times

728x90

6 May 2021

ಬಿ.ಸಿ.ರೋಡಿನ ಐತಿಹಾಸಿಕ ರಂಗಮಂದಿರ ಇನ್ನು ನೆನಪು ಮಾತ್ರ

ಬಂಟ್ವಾಳ, ಮೇ 06, 2021 (ಕರಾವಳಿ ಟೈಮ್ಸ್) : ತಾಲೂಕಿನ ಹೃದಯ ಪಟ್ಟಣವಾಗಿರುವ ಬಿ ಸಿ ರೋಡು ತಾಲೂಕು ಕಛೇರಿ ಸಮೀಪದಲ್ಲಿ ಕಳೆದ ಸುಮಾರು 38 ವರ್ಷಗಳ ಕಾಲ ಹಲವು ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಸಾರ್ವಜನಿಕ ರಂಗಮಂದಿರವನ್ನು ತೆರವುಗೊಳಿಸುವ ಕಾರ್ಯಕ್ಕೆ ಇದೀಗ ಚಾಲನೆ ನೀಡಲಾಗಿದೆ. 

1983 ರಲ್ಲಿ ಅಂದಿನ ತಾಲೂಕು ತಹಶೀಲ್ದಾರ್ ಆಗಿದ್ದ ಆರ್ ಕೆ ರಾಜು ಅವರ ಮುತುವರ್ಜಿಯಿಂದ ನಿರ್ಮಿಸಲಾಗಿದ್ದ ಈ ರಂಗ ಮಂದಿರ ಬಿ ಸಿ ರೋಡು ಹಳೆ ತಾಲೂಕು ಕಛೇರಿಯನ್ನು ಕೆಡವಿ 2017 ರಲ್ಲಿ ಮಿನಿ ವಿಧಾನಸೌಧ ನಿರ್ಮಿಸಿದ ಬಳಿಕ ನಿಷ್ಪ್ರಯೋಜಕವಾಗಿತ್ತು. ಎಲ್ಲಾ ಕಾರ್ಯಕ್ರಮಗಳೂ ಮಿನಿ ವಿಧಾನಸೌಧದ ಒಳಭಾಗದಲ್ಲಿರುವ ಖಾಲಿ ಜಾಗದಲ್ಲೇ ನಡೆಯುತ್ತಿತ್ತು. ನಿರುಪಯುಕ್ತವಾಗಿದ್ದ ಈ ರಂಗ ಮಂದಿರ ತೆರವುಗೊಳಿಸುವ ಬಗ್ಗೆ ಕಳೆದ ಕೆಲ ತಿಂಗಳುಗಳಿಂದ ಸುದ್ದಿ ಇತ್ತಾದರೂ ಅದು ಕೈಗೂಡಿರಲಿಲ್ಲ. ಇದೀಗ ಇಲ್ಲಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಕಾಂಕ್ರಿಟ್ ಚತುಷ್ಪಥ ರಸ್ತೆ ಕಾಮಗಾರಿ ಸಾಗಿ ಬರುತ್ತಿದ್ದು, ಈ ಸಂದರ್ಭ ಪೇಟೆಯ ಅಂದ ಕೆಡಿಸುವ ಈ ಹಳೆಯ ರಂಗಮಂದಿರ ತೆರವುಗೊಳಿಸಲು ಚಾಲನೆ ನೀಡಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡಿನ ಐತಿಹಾಸಿಕ ರಂಗಮಂದಿರ ಇನ್ನು ನೆನಪು ಮಾತ್ರ Rating: 5 Reviewed By: karavali Times
Scroll to Top