ಶಿಖರ್ ಧವನ್ ಬ್ಯಾಟಿಂಗ್ ಅಬ್ಬರಕ್ಕೆ ಪಂಜಾಬ್ ತತ್ತರ - Karavali Times ಶಿಖರ್ ಧವನ್ ಬ್ಯಾಟಿಂಗ್ ಅಬ್ಬರಕ್ಕೆ ಪಂಜಾಬ್ ತತ್ತರ - Karavali Times

728x90

2 May 2021

ಶಿಖರ್ ಧವನ್ ಬ್ಯಾಟಿಂಗ್ ಅಬ್ಬರಕ್ಕೆ ಪಂಜಾಬ್ ತತ್ತರ

ಅಹಮದಾಬಾದ್, ಮೇ 03, 2021 (ಕರಾವಳಿ ಟೈಮ್ಸ್) : ಶಿಖರ್ ಧವನ್ ಅವರ ಬ್ಯಾಟಿಂಗ್ ಅಬ್ಬರದಿಂದಾಗಿ ಡಲ್ಲಿ ಕ್ಯಾಪಿಟಲ್ ತಂಡ ಭಾನುವಾರ ನಡೆದ ಐಪಿಎಲ್ ಕೂಟದ ದಿನದ ದ್ವಿತೀಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್‍ಗಳ ಜಯ ಸಾಧಿಸಿದೆ. 

ಗೆಲ್ಲಲು 167 ರನ್‍ಗಳ ಗುರಿ ಪಡೆದ ಡೆಲ್ಲಿ 17.5 ಓವರ್ ಗಳಲ್ಲಿ 167 ರನ್ ಸಿಡಿಸಿ ಭರ್ಜರಿ ಜಯಗಳಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಆರ್‍ಸಿಬಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. 

ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಶಿಖರ್ ಧವನ್ ಜೊಡಿ ಮೊದಲ ವಿಕೆಟ್‍ಗೆ 63 ರನ್ (38 ಎಸೆತ) ಜೊತೆಯಾಟವಾಡಿತು. ಪೃಥ್ವಿ ಶಾ 39 ರನ್ (22 ಸೆತ, 3 ಬೌಂಡರಿ, 3 ಸಿಕ್ಸರ್ಸ್) ಭಾರಿಸಿ ಔಟಾದರೆ, ಸ್ವೀವ್ ಸ್ಮಿತ್ 24 ರನ್ (22 ಸೆತ, 1 ಸಿಕ್ಸರ್) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಶಿಖರ್ ಧವನ್  ಅಜೇಯ 69 ರನ್ (47 ಎಸೆತ, 6 ಬೌಂಡರಿ, 2 ಸಿಕ್ಸರ್) ಭಾರಿಸಿದರು. ಶಿಮ್ರಾನ್ ಹೆಟ್ಮಿಯರ್ 16 ರನ್ (4 ಎಸೆತ, 1 ಬೌಂಡರಿ, 2 ಸಿಕ್ಸರ್) ಭಾರಿಸಿದರು. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡದ ಹಂಗಾಮಿ ನಾಯಕ ಮಯಾಂಕ್ ಅಗರ್‍ವಾಲ್ ಅಜೇಯ 99 ರನ್ (58 ಎಸೆತ, 8 ಬೌಂಡರಿ, 4 ಸಿಕ್ಸರ್) ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಕ್ರಿಸ್ ಗೇಲ್ 13 ರನ್ (16 ಎಸೆತ, 1 ಸಿಕ್ಸರ್) ವಿಫಲರಾದರು. ಡೇವಿಡ್ ಮಲಾನ್ 26 ರನ್ (26 ಎಸೆತ 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟ್ ಆದರು. ಅಂತಿಮವಾಗಿ ಪಂಜಾಬ್ ತಂಡ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು.

ಡೆಲ್ಲಿ ಪರ ಬೌಲಿಂಗ್‍ನಲ್ಲಿ ಮಿಂಚಿದ ಕಗಿಸೋ ರಬಾಡ 3 ವಿಕೆಟ್ ಪಡೆದರೆ. ಆವೀಶ್ ಖಾನ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

  • Blogger Comments
  • Facebook Comments

0 comments:

Post a Comment

Item Reviewed: ಶಿಖರ್ ಧವನ್ ಬ್ಯಾಟಿಂಗ್ ಅಬ್ಬರಕ್ಕೆ ಪಂಜಾಬ್ ತತ್ತರ Rating: 5 Reviewed By: karavali Times
Scroll to Top