ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂದ 5 ರ ಬಾಲೆ ಸಾವು, ಅಜ್ಜಿ ಗಂಭೀರ : ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾದ ರಾಜಸ್ಥಾನ - Karavali Times ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂದ 5 ರ ಬಾಲೆ ಸಾವು, ಅಜ್ಜಿ ಗಂಭೀರ : ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾದ ರಾಜಸ್ಥಾನ - Karavali Times

728x90

8 June 2021

ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂದ 5 ರ ಬಾಲೆ ಸಾವು, ಅಜ್ಜಿ ಗಂಭೀರ : ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾದ ರಾಜಸ್ಥಾನ

ಜೈಪುರ, ಜೂನ್ 08, 2021 (ಕರಾವಳಿ ಟೈಮ್ಸ್) : ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂಧ 5 ವರ್ಷದ ಬಾಲಕಿಯೋರ್ವಳು ದಾರುಣವಾಗಿ ಮೃತಪಟ್ಟರೆ, ಆಕೆಯ ಅಜ್ಜಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ರಾಜಸ್ಥಾನ ರಾಜ್ಯದ ಜಲೋರ್ ಜಿಲ್ಲೆಯ ರಾಣಿವಾರಾದಲ್ಲಿ ನಡೆದಿರುವುದು ಮಂಗಳವಾರ ವರದಿಯಾಗಿದೆ. 

ಮೂಲಗಳ ಪ್ರಕಾರ ಇಲ್ಲಿನ ರೋಡಾ ಗ್ರಾಮದಲ್ಲಿನ ಕುಟುಂಬ ಸದಸ್ಯರನ್ನು ನೋಡಲೆಂದು ಸುಖಿ (60 ವರ್ಷ) ಮತ್ತು ಅವರ ಮೊಮ್ಮಗಳು ಮಂಜು (5 ವರ್ಷ) ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದಾರಿಯಲ್ಲಿರುವಾಗ ಅವರಿಗೆ ಬಾಯಾರಿಕೆಯಾಗಿದೆ ಆದರೆ ಪ್ರದೇಶವು ತೀರಾ ನಿರ್ಜನವಾಗಿದ್ದರಿಂದ ಎಲ್ಲಿಯೂ ಕುಡಿಯಲು ನೀರು ದೊರೆತಿಲ್ಲ. ಈ ಸಂದರ್ಭ ಅಜ್ಜಿ-ಮೊಮ್ಮಗಳಿಬ್ಬರೂ ಆಯಾಸಗೊಂಡು ದಾರಿಯಲ್ಲೇ ಬಿದ್ದಿದ್ದಾರೆ. ಈ ದೃಶ್ಯವನ್ನು ಸ್ವಲ್ಪ ದೂರದಲ್ಲಿದ್ದ ಕುರಿ ಮೇಯಿಸುತ್ತಿದ್ದ  ತಂಡ ಗಮನಿಸಿ ಇತ್ತ ಕಡೆ ಧಾವಿಸಿ ಬಂದು ಇಬ್ಬರನ್ನೂ ಆರೈಕೆ ಮಾಡಿದ್ದಾರೆ. ಬಳಿಕ ಪೊಲೀಸರಿಗೂ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ದಾರಿ ಮಧ್ಯೆ ಬಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. 

ಅಜ್ಜಿ ಸುಖಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆಕೆ ಕೂಡ ದೇಹದ ನಿರ್ಜಲೀಕರಣ ಸಮಸ್ಯೆಯಿಂದ ಗಂಭೀರರಾಗಿದ್ದಾರೆ ಎಂದು ಸ್ಥಳೀಯ ಎಸ್ ಎಚ್ ಒ (ಆರೋಗ್ಯಾಧಿಕಾರಿ) ಮಾಹಿತಿ ನೀಡಿದ್ದಾರೆ.

ಇದೇ ವಿಚಾರವಾಗಿ ಮಾಹಿತಿ ನೀಡಿರುವ ಇಲ್ಲಿನ ಸ್ಟೇಷನ್ ಹೌಸ್ ಅಧಿಕಾರಿ ಪದ್ಮಾ ರಾಮ್ ಅವರು, ಕುರಿ ಕಾಯುವ ಹುಡುಗರು ಈ ಬಗ್ಗೆ ಮಾಹಿತಿ ನೀಡಿದಾಗ ಕೂಡಲೇ ನಮ್ಮ ತಂಡ ಸ್ಥಳ ತಲುಪಿತ್ತು. ಅದು ಕುರುಚಲು ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿಗೆ ವಾಹನಗಳಲ್ಲಿ ತೆರಳಲು ಅಸಾಧ್ಯವಾಗಿದ್ದರಿಂದ ನಾವು  ನಡೆದುಕೊಂಡೇ ವೇಗವಾಗಿ ಘಟನಾ ಸ್ಥಳ ತಲುಪಿದೆವು. ಅಷ್ಟು ಹೊತ್ತಿಗಾಗಲೇ ಅಜ್ಜಿ ಮತ್ತು ಮಗು ನಿತ್ರಾಣರಾಗಿದ್ದರು. ನಾವು ಪ್ರಥಮ ಚಿಕಿತ್ಸೆ ನೀಡಿ ಅಜ್ಜಿಗೆ ನೀರು ಕುಡಿಸಿದೆವು. ಬಳಿಕ ಇಬ್ಬರನ್ನೂ ಆಸ್ಪತ್ರೆ ಸಾಗಿಸುವಾಗ ಬಾಲಕಿ ಮೃತಪಟ್ಟಿದ್ದಾಳೆ. ಅಜ್ಜಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂದ 5 ರ ಬಾಲೆ ಸಾವು, ಅಜ್ಜಿ ಗಂಭೀರ : ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾದ ರಾಜಸ್ಥಾನ Rating: 5 Reviewed By: karavali Times
Scroll to Top