ನಿವೃತ್ತ ಇಮಾಮ್ ಹಾಗೂ ಮುಅಝಿನ್ ಗಳಿಗೆ ವಕ್ಫ್ ಇಲಾಖೆಯಿಂದ ನಿವೃತ್ತಿ ವೇತನಕ್ಕಾಗಿ ಅರ್ಜಿ ಆಹ್ವಾನ - Karavali Times ನಿವೃತ್ತ ಇಮಾಮ್ ಹಾಗೂ ಮುಅಝಿನ್ ಗಳಿಗೆ ವಕ್ಫ್ ಇಲಾಖೆಯಿಂದ ನಿವೃತ್ತಿ ವೇತನಕ್ಕಾಗಿ ಅರ್ಜಿ ಆಹ್ವಾನ - Karavali Times

728x90

3 June 2021

ನಿವೃತ್ತ ಇಮಾಮ್ ಹಾಗೂ ಮುಅಝಿನ್ ಗಳಿಗೆ ವಕ್ಫ್ ಇಲಾಖೆಯಿಂದ ನಿವೃತ್ತಿ ವೇತನಕ್ಕಾಗಿ ಅರ್ಜಿ ಆಹ್ವಾನ


ಮಂಗಳೂರು, ಜೂನ್ 03, 2021 (ಕರಾವಳಿ ಟೈಮ್ಸ್) : 65 ವರ್ಷ ಪ್ರಾಯ ಪೂರ್ತಿಗೊಳಿಸಿದ ಹಾಗೂ ವಕ್ಫ್ ನೋಂದಾಯಿತ ಮಸೀದಿಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ನಿವೃತ್ತ ಇಮಾಮ್ ಮತ್ತು ಮುಅಝ್ಝಿನ್ ಗಳಿಗೆ ರಾಜ್ಯ ವಕ್ಫ್ ಮಂಡಳಿ ನಿವೃತ್ತಿ ವೇತನ ಯೋಜನೆ ಜಾರಿಗೊಳಿಸಿದೆ. 

ಅರ್ಹ ಅಭ್ಯರ್ಥಿಗಳು ಪೂರಕ ದಾಖಲೆಗಳಾದ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಥವಾ ಜನನ ಪ್ರಮಾಣ ಪತ್ರ ಅಥವಾ ಚುನಾವಣಾ ಗುರುತಿನ ಚೀಟಿ, ಆದಾಯ ಸರ್ಟಿಫಿಕೇಟ್ ಅಥವಾ ಬಿಪಿಎಲ್ ರೇಶನ್ ಕಾರ್ಡ್, ಇಮಾಮರ ಪದವಿ ಸರ್ಟಿಫಿಕೇಟ್, ಬ್ಯಾಂಕ್ ಪಾಸ್ ಪುಸ್ತಕ ಕರ್ತವ್ಯ ನಿರ್ವಹಿಸಿದ ಮಸೀದಿಯ ದೃಢೀಕರಣ ಪತ್ರಗಳನ್ನು ಲಗತ್ತಿಸಿ ಮಾದರಿ ಅಜಿ ನಮೂನೆಯಲ್ಲಿ ಜಿಲ್ಲಾ ವಕ್ಫ್ ಕಛೇರಿಗೆ ಅರ್ಜಿ ಸಲ್ಲಿಸುವಂತೆ ವಕ್ಫ್ ಇಲಾಖಾ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನಿವೃತ್ತ ಇಮಾಮ್ ಹಾಗೂ ಮುಅಝಿನ್ ಗಳಿಗೆ ವಕ್ಫ್ ಇಲಾಖೆಯಿಂದ ನಿವೃತ್ತಿ ವೇತನಕ್ಕಾಗಿ ಅರ್ಜಿ ಆಹ್ವಾನ Rating: 5 Reviewed By: karavali Times
Scroll to Top