ಈ ಬಾರಿ ವೃತ್ತಿಪರ ಕೋರ್ಸ್ ಗಳಿಗೆ ಸಿಇಟಿ ಅಂಕಗಳು ಮಾತ್ರ ಮಾನದಂಡ : ಸರಕಾರದ ನಿರ್ಧಾರ ಘೋಷಿಸಿದ ಸಚಿವ ಡಾ ಅಶ್ವತ್ಥ ನಾರಾಯಣ - Karavali Times ಈ ಬಾರಿ ವೃತ್ತಿಪರ ಕೋರ್ಸ್ ಗಳಿಗೆ ಸಿಇಟಿ ಅಂಕಗಳು ಮಾತ್ರ ಮಾನದಂಡ : ಸರಕಾರದ ನಿರ್ಧಾರ ಘೋಷಿಸಿದ ಸಚಿವ ಡಾ ಅಶ್ವತ್ಥ ನಾರಾಯಣ - Karavali Times

728x90

8 June 2021

ಈ ಬಾರಿ ವೃತ್ತಿಪರ ಕೋರ್ಸ್ ಗಳಿಗೆ ಸಿಇಟಿ ಅಂಕಗಳು ಮಾತ್ರ ಮಾನದಂಡ : ಸರಕಾರದ ನಿರ್ಧಾರ ಘೋಷಿಸಿದ ಸಚಿವ ಡಾ ಅಶ್ವತ್ಥ ನಾರಾಯಣ

ಬೆಂಗಳೂರು, ಜೂನ್ 08, 2021 (ಕರಾವಳಿ ಟೈಮ್ಸ್) : ಈ ಬಾರಿಯ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್‍ಗಳ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಮಾನದಂಡವಾಗಿ ಪರಿಗಣಿಸುವ ಬಗ್ಗೆ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಮಂಗಳವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಡಾ ಅಶ್ವತ್ಥ ನಾರಾಯಣ ಅವರು ತಿಳಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲು ನೀಡಿರುವ ಸಲಹೆ ಪರಿಗಣಿಸಲಾಗಿದೆ ಎಂದ ಸಚಿವರು ಪಿಯುಸಿ ಅಂಕಗಳ ವಿಚಾರವಾಗಿ ನೀತಿಯಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು. ಪದವಿ ಕಾಲೇಜುಗಳಿಗೆ, ಇತರ ಕೋರ್ಸ್ಗಳಿಗೆ ಪ್ರವೇಶ ನೀಡುವ ದೃಷ್ಟಿಯಿಂದ ಅಗತ್ಯವಿರುವ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಜ್ಞಾನ ವಿಭಾಗದ ಡಿಗ್ರಿ ವಿದ್ಯಾರ್ಥಿಗಳ ಪ್ರವೇಶವನ್ನು ಸಿಇಟಿ ಮುಖಾಂತರವೇ ನಿರ್ಧರಿಸುವ ಚಿಂತನೆ ಇದೆ ಎಂದಿದ್ದಾರೆ.

ಈಗಾಗಲೇ ನಿಗದಿಪಡಿಸಿದಂತೆ ಆಗಸ್ಟ್ 28, 29ಕ್ಕೆ ಸಿಇಟಿ ಪರೀಕ್ಷೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಕೋವಿಡ್ ಪ್ರಕರಣಗಳು ಜಾಸ್ತಿಯಾದರೆ ಮಾತ್ರ ದಿನಾಂಕವನ್ನು ಮುಂದೂಡಲು ಇಲಾಖೆ ಮುಂದಾಗಿದೆ. ಈ ಬಾರಿ ಸಿಇಟಿ ಪರೀಕ್ಷೆಯನ್ನು ರಾಜ್ಯಾದ್ಯಂತ  ಸುಮಾರು 500ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಆಗಸ್ಟ್ 28, 29 ಹಾಗೂ 30ರಂದು ನಡೆಸಲಾಗುವುದು. ಆಗಸ್ಟ್ 28 - ಜೀವಶಾಸ್ತ್ರ, ಗಣಿತ, ಆಗಸ್ಟ್ 29 - ಭೌತಶಾಸ್ತ್ರ, ರಸಾಯನಶಾಸ್ತ್ರ, ಆಗಸ್ಟ್ 30 - ಗಡಿನಾಡು, ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ. 

ಸಭೆಯಲ್ಲಿ ಸಿಇಟಿ ಪರೀಕ್ಷೆ ಬರೆಯಲು ಇದ್ದ ಅರ್ಹತೆ ಅಂಕಗಳ ಮಾನದಂಡ ಬದಲಾವಣೆಗೂ ನಿರ್ಧಾರ ಮಾಡಲಾಗಿದೆ. ಸಿಇಟಿ ಸೀಟು ಹಂಚಿಕೆಗೆ ಈ ವರ್ಷ ಪಿಯುಸಿಯ ಶೇ. 50 ಅಂಕ ಕಡ್ಡಾಯ ಎಂಬ ನಿಯಮ ಪರಿಗಣಿಸದೆ ಇರಲು ಸರಕಾರ ತೀರ್ಮಾನಿಸಲಾಗಿದೆ. ಈ ವರ್ಷ ಗ್ರೇಡ್ ಆಧಾರದಲ್ಲಿ ಪಿಯುಸಿ ಫಲಿತಾಂಶ ನೀಡುತ್ತಿರುವ ಕನಿಷ್ಠ ಅಂಕಗಳ ಮಾನದಂಡ ನಿಯಮ ಸಡಿಲಿಕೆ ಮಾಡಲಾಗಿದ್ದು ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೂ ಸಿಇಟಿ ಬರೆಯಲು ಅವಕಾಶವಾಗಲಿದೆ.

ಪಿಯುಸಿಯಲ್ಲಿ ಪಾಸ್ ಆದ ವಿದ್ಯಾರ್ಥಿಗಳು ಸಿಇಟಿ ಬರೆಯಲು ಕನಿಷ್ಠ ಶೇ.40-45 ಅಂಕ ಕಡ್ಡಾಯವಾಗಿ ಪಡೆಯಬೇಕಿತ್ತು. ಈ ಅಂಕಗಳನ್ನು ಪಡೆಯದೇ ಇದ್ದಲ್ಲಿ ಸಿಇಟಿ ಬರೆಯಲು ಅರ್ಹತೆ ಪಡೆಯುತ್ತಿರಲಿಲ್ಲ. 

ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಆಯುಕ್ತ ಪ್ರದೀಪ್, ಕೆಇಎ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಮೊದಲನೇ ವರ್ಷದ/ ಮೊದಲನೇ ಸೆಮಿಸ್ಟರ್ ನ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನದ ಕೋರ್ಸ್ಗಳು ಮತ್ತು ಬಿ-ಫಾರ್ಮಾ-ಡಿ ಕೋರ್ಸ್ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.


  • Blogger Comments
  • Facebook Comments

0 comments:

Post a Comment

Item Reviewed: ಈ ಬಾರಿ ವೃತ್ತಿಪರ ಕೋರ್ಸ್ ಗಳಿಗೆ ಸಿಇಟಿ ಅಂಕಗಳು ಮಾತ್ರ ಮಾನದಂಡ : ಸರಕಾರದ ನಿರ್ಧಾರ ಘೋಷಿಸಿದ ಸಚಿವ ಡಾ ಅಶ್ವತ್ಥ ನಾರಾಯಣ Rating: 5 Reviewed By: karavali Times
Scroll to Top