ನ್ಯೂಜಿಲ್ಯಾಂಡ್ ವಿಶ್ವ ಟೆಸ್ಟ್ ಚಾಂಪಿಯನ್ : ಐಸಿಸಿ ಟ್ರೋಫಿ ಗೆಲುವಿನ ಬರ ನೀಗಿಸಿಕೊಂಡ ಕಿವೀಸ್, ಭಾರತಕ್ಕೆ ದಯನೀಯ ಸೋಲು  - Karavali Times ನ್ಯೂಜಿಲ್ಯಾಂಡ್ ವಿಶ್ವ ಟೆಸ್ಟ್ ಚಾಂಪಿಯನ್ : ಐಸಿಸಿ ಟ್ರೋಫಿ ಗೆಲುವಿನ ಬರ ನೀಗಿಸಿಕೊಂಡ ಕಿವೀಸ್, ಭಾರತಕ್ಕೆ ದಯನೀಯ ಸೋಲು  - Karavali Times

728x90

23 June 2021

ನ್ಯೂಜಿಲ್ಯಾಂಡ್ ವಿಶ್ವ ಟೆಸ್ಟ್ ಚಾಂಪಿಯನ್ : ಐಸಿಸಿ ಟ್ರೋಫಿ ಗೆಲುವಿನ ಬರ ನೀಗಿಸಿಕೊಂಡ ಕಿವೀಸ್, ಭಾರತಕ್ಕೆ ದಯನೀಯ ಸೋಲು 

 ಸೌಂಥಾಂಪ್ಟನ್, ಜೂನ್ 23, 2021 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯಾಟದಲ್ಲಿ ಭಾರತ ವಿರುದ್ದ ನ್ಯೂಜಿಲ್ಯಾಂಡ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐಸಿಸಿ ಆಯೋಜಿಸಿದ ದೊಡ್ಡ ಟೂರ್ನಿಯನ್ನು ಇದೇ ಮೊದಲ ಬಾರಿಗೆ ಕಿವಿಗಳು ಗೆದ್ದುಕೊಂಡು ಐತಿಹಾಸಿಕ ಸಾಧನೆಗೈದಿದ್ದಾರೆ. 

 ಗೆಲುವಿಗೆ 139 ರನ್‍ಗಳ ಸುಲಭ ಗುರಿ ಪಡೆದ ನ್ಯೂಜಿಲೆಂಡ್ 45.5 ಓವರ್ ಗಳಲ್ಲಿ  2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದುವರೆಗೆ ಐಸಿಸಿ ಆಯೋಜಿಸಿದ್ದ ಯಾವುದೇ ಟೂರ್ನಿಯನ್ನು ನ್ಯೂಜಿಲೆಂಡ್ ತಂಡ ಗೆಲ್ಲಲು ವಿಫಲವಾಗಿತ್ತು. ಆದರೆ ಈ ಬಾರಿಯ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಈ ಕನಸು ನನಸು ಮಾಡಿಕೊಂಡಿದೆ. 

 ಫೈನಲ್ ಟೆಸ್ಟ್ ಪಂದ್ಯದ 5ನೇ ದಿನವಾದ ಮಂಗಳವಾರ 2 ವಿಕೆಟ್ ನಷ್ಟಕ್ಕೆ 62 ರನ್‍ಗಳಿಸಿದ್ದ ಭಾರತ ಇಂದು ಉಳಿದ 8 ವಿಕೆಟ್ ಗಳ ನೆರವಿನಿಂದ 92 ರನ್‍ ಒಟ್ಟುಗೂಡಿಸಿ 73 ಓವರ್‍ ಗಳಲ್ಲಿ 170 ರನ್‍ಗಳಿಗೆ ಸರ್ವ ಪತನವಾಯಿತು.

 ಟೀಂ ಇಂಡಿಯಾ ಪರ ರಿಷಭ್ ಪಂತ್ 41 ರನ್ (88 ಎಸೆತ, 4 ಬೌಂಡರಿ), ರವೀಂದ್ರ ಜಡೇಜಾ 16 ರನ್, ಅಜಿಂಕ್ಯಾ ರಹಾನೆ 15 ರನ್, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ 13 ರನ್ ಭಾರಿಸಿದರು. ಟಿಮ್ ಸೌಥಿ 4 ವಿಕೆಟ್ ಪಡೆದರೆ, ಟ್ರೆಂಡ್ ಬೌಲ್ಟ್ 3, ಕೈಲ್ ಜೇಮಿಸನ್ 2, ನೆಲಿ ವ್ಯಾಗ್ನರ್ 1 ವಿಕೆಟ್ ಪಡೆದು ನ್ಯೂಜಿಲ್ಯಾಂಡ್ ಗೆಲುವಿಗೆ ಅಮೂಲ್ಯ ಕೊಡುಗೆ ಸಲ್ಲಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ನ್ಯೂಜಿಲ್ಯಾಂಡ್ ವಿಶ್ವ ಟೆಸ್ಟ್ ಚಾಂಪಿಯನ್ : ಐಸಿಸಿ ಟ್ರೋಫಿ ಗೆಲುವಿನ ಬರ ನೀಗಿಸಿಕೊಂಡ ಕಿವೀಸ್, ಭಾರತಕ್ಕೆ ದಯನೀಯ ಸೋಲು  Rating: 5 Reviewed By: karavali Times
Scroll to Top