ದ.ಕ. ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಬಿಗು : ಆಗಸ್ಟ್ 10ರವರೆಗೆ ಸಭೆ-ಸಮಾರಂಭಗಳು ಕ್ಯಾನ್ಸಲ್, ಮದುವೆ 50 ಜನರಿಗೆ ಸೀಮಿತ : ತಪ್ಪಿದಲ್ಲಿ ಸಭಾಂಗಣ ಮಾಲಕರ ಮೇಲೆ ಎಫ್.ಐ.ಆರ್. ಎಚ್ಚರಿಕೆ  - Karavali Times ದ.ಕ. ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಬಿಗು : ಆಗಸ್ಟ್ 10ರವರೆಗೆ ಸಭೆ-ಸಮಾರಂಭಗಳು ಕ್ಯಾನ್ಸಲ್, ಮದುವೆ 50 ಜನರಿಗೆ ಸೀಮಿತ : ತಪ್ಪಿದಲ್ಲಿ ಸಭಾಂಗಣ ಮಾಲಕರ ಮೇಲೆ ಎಫ್.ಐ.ಆರ್. ಎಚ್ಚರಿಕೆ  - Karavali Times

728x90

31 July 2021

ದ.ಕ. ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಬಿಗು : ಆಗಸ್ಟ್ 10ರವರೆಗೆ ಸಭೆ-ಸಮಾರಂಭಗಳು ಕ್ಯಾನ್ಸಲ್, ಮದುವೆ 50 ಜನರಿಗೆ ಸೀಮಿತ : ತಪ್ಪಿದಲ್ಲಿ ಸಭಾಂಗಣ ಮಾಲಕರ ಮೇಲೆ ಎಫ್.ಐ.ಆರ್. ಎಚ್ಚರಿಕೆ 

 ಮಂಗಳೂರು, ಆಗಸ್ಟ್ 01 (ಕರಾವಳಿ ಟೈಮ್ಸ್) : ಕೊರೋನಾ ಎರಡನೇ ಅಲೆ ಅಂತ್ಯವಾಗದೆ, 3ನೇ ಅಲೆಯ ಭೀತಿಯ ಆತಂಕ ಇದ್ದುದರ ನಡುವೆಯೂ ಜಿಲ್ಲೆಯ ಜನ, ಅಧಿಕಾರಿ ವರ್ಗ ಹಾಗೂ ಸರಕಾರ ತೋರಿದ ಸ್ಪಷ್ಟ ನಿರ್ಲಕ್ಷ್ಯದಿಂದಾಗಿ ಇದೀಗ ಜಿಲ್ಲೆ ಮತ್ತೆ ಗಂಭೀರ ಬೆಲೆ ತೆರಬೇಕಾದ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿ ಕಂಡುಬರುತ್ತಿದೆ. 

 ನೆರೆಯ ಕೇರಳ ರಾಜ್ಯದ ಮಿತಿ ಮೀರಿ ಏರುತ್ತಿರುವ ಕೋವಿಡ್ ಕೇಸುಗಳು ಇದೀಗ ಜಿಲ್ಲೆಯಲ್ಲಿ ಗಂಭೀರ ಆತಂಕದ ಪರಿಸ್ಥಿತಿ ಸೃಷ್ಟಿಸಿ ಹಾಕಿದೆ. ಈ ನಿಟ್ಟಿನಲ್ಲಿ ಶನಿವಾರ ಮಂಗಳೂರಿನಲ್ಲಿ ನಡೆದ ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕೆಲವೊಂದು ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಲಾಗಿದೆ. 

ಮಂಗಳೂರು-ಕಾಸರಗೋಡು ನಡುವೆ ಸಂಚರಿಸುವ ಎಲ್ಲಾ ಸರಕಾರಿ ಹಾಗೂ ಖಾಸಗಿ ಬಸ್ ಸಂಚಾರ ಆಗಸ್ಟ್ 1 ರಿಂದಲೇ ತಕ್ಷಣಕ್ಕೆ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ.  ಒಂದು ವಾರಗಳ ಕಾಲ ಬಸ್ ಸಂಚಾರ ಸ್ಥಗಿತಕ್ಕೆ ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ.  

ಸಭೆ-ಸಮಾರಂಭಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಗಸ್ಟ್ 10ರವರೆಗೆ ನಡೆಸದಂತೆ ಸೂಚಿಸಲಾಗಿದೆ. ಮದುವೆ ಕಾರ್ಯಕ್ರಮಗಳನ್ನು ಕೇವಲ 50 ಜನರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಮದುವೆ ಸಭಾಂಗಣದ ಮಾಲೀಕರ ಮೇಲೆ ಎಫ್‌ಐಆರ್‌ ದಾಖಲಿಸಲಾಗುವುದು. 

ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಕಡ್ಡಾಯವಾಗಿದ್ದು, ಬಂದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿಯೇ 1 ವಾರ ಕ್ವಾರಂಟೈನ್‍ ಮಾಡಬೇಕಿದೆ. 

ಕುಟುಂಬದಲ್ಲಿ ಇಬ್ಬರಿಗಿಂತ ಹೆಚ್ಚಿನವರಿಗೆ ಸೋಂಕು ಕಂಡು ಬಂದರೆ ಅಂತಹ ಮನೆ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಾ

ರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾಮಾಜಿಕ ಅಂತರ ಕಡ್ಡಾಯ ಪಾಲನೆ ಆಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಬಿಗು : ಆಗಸ್ಟ್ 10ರವರೆಗೆ ಸಭೆ-ಸಮಾರಂಭಗಳು ಕ್ಯಾನ್ಸಲ್, ಮದುವೆ 50 ಜನರಿಗೆ ಸೀಮಿತ : ತಪ್ಪಿದಲ್ಲಿ ಸಭಾಂಗಣ ಮಾಲಕರ ಮೇಲೆ ಎಫ್.ಐ.ಆರ್. ಎಚ್ಚರಿಕೆ  Rating: 5 Reviewed By: karavali Times
Scroll to Top