ಪುದು ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್ ವಾರು ಲಸಿಕಾ ಕ್ಯಾಂಪ್ : ಜು 23 (ನಾಳೆ) ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಲಸಿಕಾ ಕಾರ್ಯಕ್ರಮ - Karavali Times ಪುದು ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್ ವಾರು ಲಸಿಕಾ ಕ್ಯಾಂಪ್ : ಜು 23 (ನಾಳೆ) ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಲಸಿಕಾ ಕಾರ್ಯಕ್ರಮ - Karavali Times

728x90

22 July 2021

ಪುದು ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್ ವಾರು ಲಸಿಕಾ ಕ್ಯಾಂಪ್ : ಜು 23 (ನಾಳೆ) ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಲಸಿಕಾ ಕಾರ್ಯಕ್ರಮ

ಬಂಟ್ವಾಳ, ಜುಲೈ 22, 2021 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಜುಲೈ 23 ರಂದು ಶುಕ್ರವಾರ (ನಾಳೆ) ಕೋವಿಶೀಲ್ಡ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಮೊದಲ ಡೋಸ್ ಪಡೆದು 84 ದಿನಗಳು ಕಳೆದವರು 2ನೇ ಡೋಸ್ ಪಡೆಯಲು ಮೊದಲ ಆದ್ಯತೆ ನೀಡಲಾಗುವುದು. ಬೆಳಿಗ್ಗೆ 11 ರಿಂದ 12 ಗಂಟೆವರೆಗೆ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 

ಬಳಿಕ ಲಸಿಕೆ ಲಭ್ಯವಿದ್ದಲ್ಲಿ ಮಧ್ಯಾಹ್ನ 12 ಗಂಟೆಯ ಬಳಿಕ 18 ವರ್ಷ ಮೇಲ್ಪಟ್ಟ ಆದ್ಯತಾ ವಲಯದವರಿಗೆ ಕಡ್ಡಾಯ ಅನೆಕ್ಷರ್-3 ಫಾರ್ಮ್ ನೊಂದಿಗೆ ನೀಡಲಾಗುವುದು. 

ಇತ್ತೀಚೆಗೆ ನಡೆದ ಪುದು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರು ಲಸಿಕೆಯನ್ನು ವಾರ್ಡ್‍ವಾರು ನೀಡುವಂತೆ ಆಗ್ರಹಿಸಿದ ಹಿನ್ನಲೆಯಲ್ಲಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಈ ಬಗ್ಗೆ ಸ್ಥಳೀಯ ಶಾಸಕ ಯು ಟಿ ಖಾದರ್ ಅವರೊಂದಿಗೆ ಚರ್ಚಿಸಿ, ಶಾಸಕರು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದ ಹಿನ್ನಲೆಯಲ್ಲಿ ಪುದು ಗ್ರಾಮ ಪಂಚಾಯತಿನ ವಾರ್ಡ್‍ವಾರು ಲಸಿಕೆ ನೀಡುವ ಪ್ರಯುಕ್ತ ಶುಕ್ರವಾರ 2ನೇ ಬಾರಿಗೆ ಪಂಚಾಯತ್ ವ್ಯಾಪ್ತಿಯ ಪ್ರಮುಖವಾಗಿ ಫರಂಗಿಪೇಟೆ ಪಟ್ಟಣಕ್ಕೆ ಈ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮೊದಲ ಬಾರಿಗೆ ಅಮೆಮಾರು ಹಾಗೂ ಕುಮ್ಡೇಲು ಶಾಲೆಯಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೀಗ 2ನೇ ಕ್ಯಾಂಪ್ ಸೇವಾಂಜಲಿ ಸಭಾಂಗಣದಲ್ಲಿ ನಡೆಯುತ್ತಿದ್ದು, ಲಸಿಕೆ ಪಡೆಯಲು ಬಾಕಿ ಇರುವವರು ಈ ಲಸಿಕಾ ಕ್ಯಾಂಪಿನ ಸದುಪಯೋಗ ಪಡೆದುಕೊಳ್ಳುವಂತೆ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುದು ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್ ವಾರು ಲಸಿಕಾ ಕ್ಯಾಂಪ್ : ಜು 23 (ನಾಳೆ) ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಲಸಿಕಾ ಕಾರ್ಯಕ್ರಮ Rating: 5 Reviewed By: karavali Times
Scroll to Top