ರೈತರು ಯುವ ಜನತೆ ಕೃಷಿಗೆ ಆಕರ್ಷಿತರಾಗುವ ರೀತಿ ಲಾಭದಾಯಕ ಉಪ ಕಸುಬುಗಳಿಗೆ ಒತ್ತು ನೀಡಬೇಕು : ಶಾಸಕ ಖಾದರ್ ಅಭಿಮತ - Karavali Times ರೈತರು ಯುವ ಜನತೆ ಕೃಷಿಗೆ ಆಕರ್ಷಿತರಾಗುವ ರೀತಿ ಲಾಭದಾಯಕ ಉಪ ಕಸುಬುಗಳಿಗೆ ಒತ್ತು ನೀಡಬೇಕು : ಶಾಸಕ ಖಾದರ್ ಅಭಿಮತ - Karavali Times

728x90

18 July 2021

ರೈತರು ಯುವ ಜನತೆ ಕೃಷಿಗೆ ಆಕರ್ಷಿತರಾಗುವ ರೀತಿ ಲಾಭದಾಯಕ ಉಪ ಕಸುಬುಗಳಿಗೆ ಒತ್ತು ನೀಡಬೇಕು : ಶಾಸಕ ಖಾದರ್ ಅಭಿಮತ

ಬಂಟ್ವಾಳ, ಜುಲೈ 18, 2021 (ಕರಾವಳಿ ಟೈಮ್ಸ್) : ಸರಕಾರದಿಂದ ದೊರಕುವ ವಿವಿಧ ಸವಲತ್ತುಗಳನ್ನು ಸದ್ಭಳಕೆ ಮಾಡಿ ರೈತರು ಪರಂಪರಾಗತವಾದ ಕೃಷಿ ಚಟುವಟಿಕೆಗಳೊಂದಿಗೆ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಪಡೆದು ಆಡು, ಮೇಕೆ ಸಾಕಾಣಿಕೆಯಂತಹ ಲಾಭದಾಯಕ ಉಪ ಕಸುಬುಗಳಿಗೆ ಉತ್ತೇಜನ ನೀಡಿದಲ್ಲಿ ಯುವ ತಲೆಮಾರಿನ ಜನಾಂಗವು ಕೃಷಿ ಕ್ಷೇತ್ರಕ್ಕೆ ಆಕರ್ಷಿತರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಂಗಳೂರು ಶಾಸಕ ಯು ಟಿ ಖಾದರ್ ಅಭಿಪ್ರಾಯಪಟ್ಟರು. 

ಇರಾ ಗ್ರಾಮದ ಪರ್ಲಡ್ಕದ ಐಸಿರಿ ಮೈಂಡ್ ಓವಶನ್ಸ್, ಶಿರೋಹಿ ಫಾರ್ಮ್ಸ್ ವತಿಯಿಂದ ಸರಕಾರದ ಸಹಕಾರದ ಮೂಲಕ ಆರಂಭಗೊಂಡ ಕುರಿ, ಮೇಕೆ ಸಾಕಾಣಿಕಾ ಕೇಂದ್ರ ಮತ್ತು ತರಬೇತಿ ಸಂಸ್ಥೆಗೆ ಭೇಟಿ ನೀಡಿ ಅವರು ಮಾಹಿತಿ ಪಡೆದ ಬಳಿಕ ಮಾತನಾಡಿದರು. 

ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಝಕ್ ಕುಕ್ಕಾಜೆ, ಉಪಾಧ್ಯಕ್ಷ ಮೊಯ್ದು ಕುಂಞÂ, ಸದಸ್ಯರಾದ ಹಮೀದ್ ತಿರ್ತಾಡಿ, ಐಸಿರಿ ಮೈಂಡ್ ಓವಶನ್ಸ್, ಶಿರೋಹಿ ಫಾರ್ಮ್ಸ್ ಸಂಸ್ಥೆಯ ಪ್ರಮುಖರಾದ ಜಯಶ್ರೀ ಕರ್ಕೇರಾ, ಶ್ರೀಕಾಂತ್ ಕರ್ಕೇರಾ, ದಾಮೋದರ್, ಸಂಸ್ಥೆಯ ಸಂಸ್ಥಾಪಕ ಶ್ರೀನಿವಾಸ್ ಗೌಡ, ಪ್ರಮುಖರಾದ ಜಯರಾಜ್ ಇರಾ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ರೈತರು ಯುವ ಜನತೆ ಕೃಷಿಗೆ ಆಕರ್ಷಿತರಾಗುವ ರೀತಿ ಲಾಭದಾಯಕ ಉಪ ಕಸುಬುಗಳಿಗೆ ಒತ್ತು ನೀಡಬೇಕು : ಶಾಸಕ ಖಾದರ್ ಅಭಿಮತ Rating: 5 Reviewed By: karavali Times
Scroll to Top