ಅತ್ಯಾಚಾರಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸುವವರೆಗೂ ಹೆಣ್ಣುಮಕ್ಕಳಿಗೆ ಸುರಕ್ಷಿತವಿಲ್ಲ - Karavali Times ಅತ್ಯಾಚಾರಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸುವವರೆಗೂ ಹೆಣ್ಣುಮಕ್ಕಳಿಗೆ ಸುರಕ್ಷಿತವಿಲ್ಲ - Karavali Times

728x90

29 August 2021

ಅತ್ಯಾಚಾರಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸುವವರೆಗೂ ಹೆಣ್ಣುಮಕ್ಕಳಿಗೆ ಸುರಕ್ಷಿತವಿಲ್ಲ


- ಡಿ.ಎಸ್.ಐ.ಬಿ ಪಾಣೆಮಂಗಳೂರು


ಹೆಣ್ಣುಮಕ್ಕಳನ್ನು ಹೊರಗಡೆ ಕಳುಹಿಸಿ ಮನೆಗೆ ತಲುಪುವ ತನಕ ನೆಮ್ಮದಿ ಇಲ್ಲ. ಕೊಲೆ, ದರೋಡೆ, ಕಳ್ಳತನ, ಅತ್ಯಾಚಾರ ಎಂಬ ರಾಕ್ಷಸರ ಪಟ್ಟಣಕ್ಕೆ ಹೇಗೆ ಕಳುಹಿಸಲಿ ಎಂಬುದೇ ಚಿಂತೆಯಾಗಿದೆ. ಎಲ್ಲರಂತೆ ನಮ್ಮ ಮಕ್ಕಳು ವಿದ್ಯೆ ಕಲಿತು ಉದ್ಯೋಗ ಪಡೆದು ಭಾರತೀಯ ಪ್ರಜೆಯಾಗಿ ನೆಮ್ಮದಿಯಲ್ಲಿ ಜೀವಿಸಲು ಪ್ರತಿಯೊಬ್ಬರ ಕನಸಾಗಿರುತ್ತವೆ. ಅದರೆ, ಕಾಮುಕರ ಅಟ್ಟಹಾಸಕ್ಕೆ ಹೆಣ್ಣು ಮಕ್ಕಳು ಬಲಿಯಾಗುತ್ತಿರುವಾಗ ಯಾವುದು ಬೇಡ ನೆಮ್ಮದಿಯಿಂದ ಮನೆಯಲ್ಲಿ ಇದ್ದರೆ ಸಾಕು ಎಂಬುರತ್ತ ಇದೀಗ ಎಲ್ಲರ ಚಿತ್ತ ಹರಿಯುತ್ತಿದೆ. 

ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿರುವುದು ಒಂಟಿ ಮಹಿಳೆ ಮಧ್ಯರಾತ್ರಿಯಲ್ಲಿ ಯಾವುದೇ ತೊಂದರೆ ಇಲ್ಲದೆ  ಓಡಾಲು ಸಾಧ್ಯವಾದರೆ ಅದುವೆ ನಿಜವಾದ ಸ್ವಾತಂತ್ರ್ಯವೆಂದು. ಆದರೆ ಇಂದು ರಾತ್ರಿ ಬಿಟ್ಟು ಬೆಳಗ್ಗಿನ ಸಮಯದಲ್ಲೇ ಹೊರಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ಶಾಲಾ-ಕಾಲೇಜು, ಕಛೇರಿ ಯಾವ ಕಡೆಗೂ ನೆಮ್ಮದಿಯಲ್ಲಿ ಹೋಗಿ ಬರುವಷ್ಟು ಇಂದಿನ ಹೆಣ್ಣು ಮಕ್ಕಳಿಗೆ ಧೈರ್ಯ ಬರುತ್ತಿಲ್ಲ. ಅದೆಷ್ಟೋ ಅತ್ಯಾಚಾರಗಳು ನಡೆಯುತ್ತಿವೆ. ಕೆಲವೊಂದು ಬೆಳಕಿಗೆ ಬಂದು ಸಾಕಷ್ಟು ಪ್ರಚಾರ ಪಡೆಯುತ್ತದೆ. ಇನ್ನು ಕೆಲವು ಯಾರಿಗೂ ತಿಳಿಯದೆ ಅಲ್ಲಿಗೇ ಮುಚ್ಚಿ ಹೋಗುತ್ತದೆ. ಅರಿವಿನ ಕೊರತೆಯೊ, ಪೆÇೀಷಕರ ಭಯದ ಕೊರತೆಯೊ ಒಂದು ಕೂಡ ತಿಳಿಯುತ್ತಿಲ್ಲ. ಕೆಲಸವು ಇಲ್ಲ, ಯಾರ ಭಯವು ಇಲ್ಲದೆ ರಸ್ತೆ, ಬೀದಿ, ಬೆಟ್ಟ, ಕಾಡು ನಿರ್ಜನ ಪ್ರದೇಶದಲ್ಲಿ ಅಮಲು ಪದಾರ್ಥಗಳ ಸೇವನೆ, ಸಾರಾಯಿ ಇನ್ನಿತರವನ್ನು ಕುಡಿದು ತಿಂದು ಹಸಿದ ಹುಲಿಯಂತೆ ಕಾದು ಕುಳಿತಿರುವಾಗ ಒಂಟಿಯಾಗಿ ಬಂದ ಹೆಣ್ಣಿನ ಜೀವವನ್ನೇ ಕಿತ್ತು ತಿಂದು ಬಿಡುತ್ತಾರೆ.

ಅತ್ಯಾಚಾರಗಳು ಇದ್ದಕ್ಕಿದ್ದ ಹಾಗೆ ನಡೆದು ಬಿಡುವುದಿಲ್ಲ; ಸಾಮಾನ್ಯವಾಗಿ ಅವು ಪೂರ್ವ ಟಿiಯೋಜಿತವಾಗಿರುತ್ತವೆ. ಶೇಕಡ 80 ರಷ್ಟು ಪ್ರಕರಣಗಳು ನೆರೆಹೊರೆಯವರ ಮೇಲೆ ಜರುಗುತ್ತವೆ. ಘಟನೆಗಳು ಪುನರಾವರ್ತಿತಗೊಳ್ಳುವ ಸಾಧ್ಯತೆಗಳು ಹೆಚ್ಚು. ಒಬ್ಬರೇ ಇರುವ ಮನೆಗಳಲ್ಲಿ, ಕಾಡು, ಹೊಲ, ಗದ್ದೆಗಳಂತಹ ಟಿiರ್ಜನ ಪ್ರದೇಶಗಳಲ್ಲಿ ಈ ಘಟನೆಗಳು ಜರಗುತ್ತವೆ. ಮೂರರಲ್ಲೊಂದು ಪ್ರಕರಣಗಳಲ್ಲಿ ಒಬ್ಬಟಿiಗಿಂತ ಹೆಚ್ಚು ಮಂದಿ ಈ ಕೃತ್ಯದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ಮಕ್ಕಳ ಮೇಲಿನ ಲೈಂಗಿಕ ಅತ್ಯಾಚಾರ ಒಂದು ಘೋರ ಅಪರಾದ,  ಮಕ್ಕಳ ಮೇಲೆ ನಡೆಯುವ ಅತ್ಯಾಚಾರಕ್ಕೆ ಮುಖ್ಯ ಕಾರಣ ಅವರು ಸುಲಭವಾಗಿ ದೊರಕುವುದೇ ಆಗಿರುತ್ತದೆ. ಮಲ ಮಕ್ಕಳು, ಅನಾಥಾಲಯದ ಮಕ್ಕಳು, ದತ್ತು ಮಕ್ಕಳು, ಇಂಥವರ ಮೇಲೆ ಅತ್ಯಾಚಾರ ಹೆಚ್ಚಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ತಮಗಾದ ಕೃತ್ಯವನ್ನು ಮಕ್ಕಳು ಯಾರಿಗೂ ಹೇಳುವುದಿಲ್ಲ; ಹೇಳಲು ಭಯ, ನಾಚಿಕೆ. ಎಷ್ಟೋ ವೇಳೆ ಕುಟುಂಬದವರೇ ಇಂಥ ಹೇಯ ಕೃತ್ಯಗಳಲ್ಲಿ ತೊಡಗುವುದರಿಂದ ವಿಷಯ ಗುಟ್ಟಾಗಿಯೇ ಉಳಿದುಬಿಡುತ್ತದೆ.

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು  ಹೆದರಿಸಿ, ಬೆದರಿಸಿ, ಹಿಂಸಿಸಿ, ಬಲಾತ್ಕಾರವಾಗಿ, ಅವಳ ಇಷ್ಟಕ್ಕೆ ವಿರೋಧವಾಗಿ, ನಡೆಸುವ ಲೈಂಗಿಕ ಆಕ್ರಮಣವನ್ನು ಅತ್ಯಾಚಾರವೆಂದು ಕರೆಯಲಾಗಿದೆ. ಅದು ಸಂಭೋಗವೇ ಆಗಿರಬೇಕೆಂಬುದೇಟಿiಲ್ಲ. ಹೆಣ್ಣಿನ ವಿಚಾರವಾಗಿ ಅಸಭ್ಯವಾಗಿ ವರ್ತಿಸುವುದು, ಅವಳನ್ನು ಕೆಣಕುವುದು, ಪೀಡಿಸುವುದು, ಚುಡಾಯಿಸುವುದು, ಅನವಶ್ಯಕವಾಗಿ ಅವಳ ಮೇಲೆ ಕೈಯ್ಯಾಡಿಸುವುದು ಅಥವಾ ಮುಟ್ಟುವುದು ಇವೆಲ್ಲಾ ಅತ್ಯಾಚಾರದ ಪರಿಧಿಯೊಳಗೆ ಬರುತ್ತವೆ. ಒಪ್ಪಿಗೆ ಕೊಡಲಾರದ ವಯಸ್ಸಿನ ಹುಡುಗಿಯರೊಡನೆ (18 ವರ್ಷದೊಳಗಿನವರು) ದೌರ್ಜನ್ಯ ನಡೆದರೆ, ಅದನ್ನು ಶಾಸನಬದ್ಧ ಅತ್ಯಾಚಾರ ಎಂದು ಕರೆಯಲಾಗುತ್ತದೆ.  ಅತ್ಯಾಚಾರ ಹೆಚ್ಚಾಗಿ ಗಂಡಸರು ಹೆಂಗಸರ ನಡೆಸುವ ಅಪರಾಧವಾದರೂ, ಕೆಲವು ಕಡೆ ಗಂಡಸರು ಗಂಡಸರ ಮೇಲೆ ಅತ್ಯಾಚಾರ ನಡೆಸುವುದು ಕಂಡು ಬಂದಿದೆ. 

ಪೆÇೀಷಕರ ಪೆÇೀಷಣೆಯಿಂದಲೂ ಕೂಡ ಮಕ್ಕಳು ಭವಿಷ್ಯ ಹಾಳಾಗುತ್ತಿವೆ ಎನ್ನುವುದರಲ್ಲಿ ತಪ್ಪಿಲ್ಲ. ಕೇವಲ ಹೆಣ್ಣು ಮಕ್ಕಳನ್ನು ಕಾಳಜಿ ವಹಿಸುತ್ತಾರೆ ಆದರೆ ತನ್ನ ಮಗ ಯಾವ ದಾರಿಯಲ್ಲಿದ್ದಾನೆ ಎಂಬುದನ್ನು ತಿಳಿಯುವ ಮಟ್ಟಕ್ಕೆ ಅವರು ಹೋಗಿರುವುದಿಲ್ಲ. ಮಕ್ಕಳ ಕೈಗೆ ಮೊಬೈಲ್ ಫೆÇೀನ್ ಕೊಟ್ಟು ಬಿಟ್ಟರೆ ಸಾಲದು ಅದರ ಹಿಂದೆ ಒಂದು ಕಣ್ಣು ಸದಾ ಇರಬೇಕು. ಪ್ರೀತಿ, ಪೇಮವೆಂದು ಕೊನೆಗೆ ಕಾಮದಲ್ಲಿ ಮುಳುಗಿ ಜೀವನಕ್ಕೆ ಕೊನೆ ಕೊಟ್ಟು ಬಿಡುತ್ತಾರೆ.

ಅತ್ಯಾಚಾರಕ್ಕೊಳಗಾದವರ ಜೀವನ ದುರ್ಭರವಾಗುತ್ತದೆ. ಅವರಿಗೆ ಭವಿಷ್ಯತ್ತು ಕರಾಳವಾಗಿ ಕಂಡುಬರುತ್ತದೆ. ಅವರಲ್ಲಿ ಕೆಲವರು ಗರ್ಭ ಧರಿಸಬಹುದು, ಲೈಂಗಿಕ ರೋಗಗಳಿಗೆ ತುತ್ತಾಗಬಹುದು. ಸಮಾಜ ಅವರನ್ನು ಕೀಳಾಗಿ ಕಂಡು, ಅವರಿಗೆ ವಿವಾಹವಾಗುವ ಸಾಧ್ಯತೆಗಳು ಕಡಮೆಯಾಗಬಹುದು. ವಿವಾಹವಾದವರು ಕೂಡ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಹಿಂಜರಿಯಬಹುದು. ಅತ್ಯಾಚಾರಕ್ಕೊಳಗಾದವರಿಗೆ ಅವರ ಶರೀರದ ಮೇಲೆ ನಡೆದ ಹಲ್ಲೆಗಿಂತ ಮನಸ್ಸಿನ ಮೇಲೆ ಆಗುವ ಆಘಾತ ದೊಡ್ಡದು. ಅವರಲ್ಲಿ ಕೆಲವರು ಮನೋರೋಗಿಗಳಾಗಬಹುದು.  ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ನಾವು ಕೈಗೊಂಡಿರಬೇಕು. ಅನವಶ್ಯಕವಾಗಿ ಸ್ತ್ರೀಯರು ಒಂಟಿಯಾಗಿ ಹೊರಗೆ ಹೋಗಬಾರದು. ಸ್ತ್ರೀಯರು ಅತಿಯಾಗಿ ಮೈ ಪ್ರದರ್ಶನ ಮಾಡುವ ಉಡುಗೆಗಳನ್ನು ಧರಿಸಬಾರದು. ಗಂಡಿಗೆ ಹೆಚ್ಚಿಗೆ ಲೈಂಗಿಕ ಪ್ರಚೋದನೆಯಾಗುವುದು ನೋಟದಿಂದ (ಹೆಣ್ಣಿಗೆ ಮಾತಿನಿಂದ) ಎಂದು ತಿಳಿದುಬಂದಿದೆ. ಅನಗತ್ಯವಾಗಿ ಅಂಥದಕ್ಕೆ ಅವಕಾಶ ಕೊಡಬಾರದು. ಸಮಾಜ ಹೆಣ್ಣು ಗಂಡುಗಳು ಎಲ್ಲೆಲ್ಲಿ ಹೇಗೆ ವರ್ತಿಸಬೇಕು, ಎಂಥ ಉಡುಪು ಧರಿಸಬೇಕು, ಯಾರೊಡನೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ನಿರ್ಧರಿಸಿರುತ್ತದೆ. ಅದರಲ್ಲಿ ತಪ್ಪು ಸರಿಗಳನ್ನು ಹುಡುಕಬಾರದು. ಸಮಾಜ ನಮ್ಮದೇ ನಿರ್ಮಾಣ. ಅದರ ನೀತಿ-ನಿಯಮಗಳನ್ನು ರೂಪಿಸಿರುವವರು ನಾವೇ. ನಾವು ಅವನ್ನು ಪಾಲಿಸಬೇಕು; ಇಲ್ಲದಿದ್ದರೆ ತೊಂದರೆಯಾಗುತ್ತದೆ. ಅದೇಕೆ ಹೀಗೆ? ಗಂಡಸರೆಲ್ಲಾ ವಿಕೃತ ಕಾಮಿಗಳೆ? ಕ್ರೂರಿಗಳೆ? ಸ್ತ್ರೀಯರ ಮೇಲಿನ ಅತ್ಯಾಚಾರ ಇತ್ತೀಚೆಗೆ ಹೆಚ್ಚುತ್ತಿದೆಯೆ? ಹಾಗಿದ್ದರೆ ಅದಕ್ಕೆ ಕಾರಣಗಳೇನು? ಅದನ್ನು ತಡೆಯುವುದು ಸಾಧ್ಯವೆ? ಇಂಥ ಪ್ರಶ್ನೆಗಳಿಗೆ ನಿಖರವಾಗಿ ಉತ್ತರ ಹೇಳುವುದು ಇಂದಿನವರೆಗೂ ಸಾಧ್ಯವಾಗಿಲ್ಲ. 

ಸರಕಾರ ಕೆಲವೊಂದು ನೀತಿ-ನಿಯಮಗಳನ್ನು ಜಾರಿಗೆ ತಂದರೂ ಯಾವುದು ಪ್ರಯೋಜನವಾಗುತ್ತಿಲ್ಲ. ಗ್ಯಾಂಗ್ ರೇಪ್ ಮಾಡಿ ಹೆಣ್ಣನ್ನು ಕೊಲೆ ಮಾಡಿರುವ ಅದೆಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ. ಕೆಲವೊಂದು ಅಧಿಕಾರಗಳ ಕೈವಾಡದಿಂದಲೂ ಅತ್ಯಾಚಾರಕ್ಕೆ ಬೆಂಬಲವಿದೆ. ಕೆಲವೊಂದು ರಾಜಕಾರಣಿಗಳೇ ಅತ್ಯಾಚಾರದಲ್ಲಿ ಭಾಗವಹಿಸುವುದಾದರೆ ಇನ್ನು ಸರಕಾರದಿಂದ ನ್ಯಾಯದ ನಿರೀಕ್ಷೆ ಹೇಗೆ ಬರಲು ಸಾಧ್ಯ. ಅತ್ಯಾಚಾರ ಮಾಡಿದವ ಕೆಲವು ದಿನದ ಶಿಕ್ಷೆ ಅನುಭವಿಸುತ್ತಾನೆ ನಾಡಿನಾದ್ಯಂತ ಪ್ರತಿಭಟನೆ ಮಾಡಿದರು ಕೆಲವು ದಿನಗಳ ನಂತರ ಮರೆತು ಬಿಡುತ್ತವೆ. ನಂತರ ಇನ್ನೊಂದು ಹೆಣ್ಣಿನ ಮೇಲೆ ಅತ್ಯಾಚಾರವಾದಗ ದಾರಿಗೆ ಬಂದರೆ ಯಾವ ಪ್ರಯೋಜನ? ಸರಕಾರಕ್ಕೆ ಸರಿಯಾದ ಶಿಕ್ಷೆ ನೀಡಲು ಸಾಧ್ಯವಿಲ್ಲದಿದ್ದರೆ ಖಂಡಿತವಾಗಿಯೂ ಅತ್ಯಾಚಾರಕ್ಕೆ ಕೊನೆ ಇರಲ್ಲ. 

ಅತ್ಯಾಚಾರ ಗುರುತರವಾದ, ಅಮಾನವೀಯ ಅಪರಾಧ, ಅದಕ್ಕೆ ತಕ್ಕ ಶಿಕ್ಷೆಯಾಗಲೇಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯ. ಇತ್ತೀಚೆಗೆ ಅತ್ಯಾಚಾರವೆಸಗಿದ ಕೆಲವು ಅಪ್ರಾಪ್ತ ಯುವಕರನ್ನು ಬಾಲಾಪರಾಧಿಗಳೆಂದು ಪರಿಗಣಿಸಿ ಅವರನ್ನು ಶಿಕ್ಷೆಗೊಳಪಡಿಸುವುದಿಲ್ಲ ಅಥವಾ ಅವರಿಗೆ ಶಿಕ್ಷೆಯ ಪ್ರಮಾಣವನ್ನು ಕಡಮೆ ಮಾಡಲಾಗುತ್ತಿದೆ. ಕೇವಲ ವಯಸ್ಸನ್ನು ಆಧಾರವಾಗಿಟ್ಟುಕೊಂಡು ಅಪರಾಧವನ್ನು ಕ್ಷಮಿಸುವುದು ಸರಿಯೇ ಎಂಬುದು ಆಲೋಚಿಸಬೇಕಾದ ವಿಷಯ. ವಯಸ್ಸು ಚಿಕ್ಕದಾದರೂ ವ್ಯಕ್ತಿ ಮಾನಸಿಕವಾಗಿ, ಲೈಂಗಿಕವಾಗಿ ಬೆಳೆದಿರಬಹುದು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಶಾಸನಗಳಿಗೆ ತಿದ್ದುಪಡಿ ಮಾಡಬೇಕೆ ಎಂಬುದು ತೀರ್ಮಾನವಾಗಬೇಕು. ಅತ್ಯಾಚಾರಕ್ಕೆ ಮರಣದಂಡನೆ ಅಥವಾ ಜೀವಾವಧಿ ಸೆರೆವಾಸ ಸರಿಯಾದ ಶಿಕ್ಷೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಮತ್ತೆ ಕೆಲವರು ಶಿಕ್ಷೆಯ ರೂಪವೇ ಬದಲಾಗಬೇಕೆನ್ನುತ್ತಾರೆ. ಅವರ ಪ್ರಕಾರ ಮರಣದಂಡನೆಗೆ ಒಳಗಾದವರು, ಜೈಲಿಗೆ ಹೋದವರು ಕಣ್ಮರೆಯಾಗುತ್ತಾರೆ. ಜನ ಅವರನ್ನು ಬೇಗ ಮರೆತು ಬಿಡುತ್ತಾರೆ. ಯಾರಾದರು ಅಂಥವರಿಗೆ ಸಹಾಯ ಮಾಡಿದರೆ ಅವರಿಗೆ ಶಿಕ್ಷೆಯಾಗಬೇಕು. ಸಂತ್ರಸ್ತರಿಗೆ ಬೇಕಾಗಿರುವುದು ಪರಿಹಾರವಲ್ಲ ನ್ಯಾಯ. ನ್ಯಾಯ ಸಿಗದಿದ್ದರೆ ಮತ್ತಷ್ಟು ಹೆಣ್ಣು ಮಕ್ಕಳು ಬಲಿಪಶುವಾಗುವುದರಲ್ಲಿ ಸಂಶಯವಿಲ್ಲ. ಹೆಣ್ಣಿನ ಜಾತಿ ಧರ್ಮ ಯಾವುದೇ ಆಗಿರಲಿ ಅವಳೊಬ್ಬಳು ಭಾರತೀಯ ಪ್ರಜೆ ಅವಳಿಗೆ ನ್ಯಾಯ ನೀಡುವುದು ಪ್ರತಿಯೊಂದು ಪ್ರಜೆಯ ಹಕ್ಕು ಕೂಡ. ಸರಕಾರ ಇನ್ನು ಕೂಡ ಎಚ್ಚೆತ್ತುಕೊಳ್ಳದಿದ್ದರೆ ಖಂಡಿತವಾಗಿಯೂ ಯಾರನ್ನು ಕಾಪಾಡಲು ಸಾಧ್ಯವಿಲ್ಲ. 

  • Blogger Comments
  • Facebook Comments

0 comments:

Post a Comment

Item Reviewed: ಅತ್ಯಾಚಾರಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸುವವರೆಗೂ ಹೆಣ್ಣುಮಕ್ಕಳಿಗೆ ಸುರಕ್ಷಿತವಿಲ್ಲ Rating: 5 Reviewed By: karavali Times
Scroll to Top