ಆಗಸ್ಟ್ 9 ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ : ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಘೋಷಣೆ  - Karavali Times ಆಗಸ್ಟ್ 9 ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ : ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಘೋಷಣೆ  - Karavali Times

728x90

7 August 2021

ಆಗಸ್ಟ್ 9 ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ : ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಘೋಷಣೆ 

 ಬೆಂಗಳೂರು, ಆಗಸ್ಟ್ 07, 2021 (ಕರಾವಳಿ ಟೈಮ್ಸ್) : ಆಗಸ್ಟ್ 9 ರಂದು ಸೋಮವಾರ ಅಪರಾಹ್ನ 3.30ಕ್ಕೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗುವುದು ಎಂದು ನೂತನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಘೋಷಿಸಿದ್ದಾರೆ. 

 ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಕಳೆದ ತಿಂಗಳು 19 ಹಾಗೂ 22 ರಂದು 2 ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗಿತ್ತು. ಆಗಸ್ಟ್ 9ರಂದು ಸೋಮವಾರ ಅಪರಾಹ್ನ 3.30ಕ್ಕೆ ಅಧಿಕೃತವಾಗಿ ಫಲಿತಾಂಶ ಪ್ರಕಟಿಸುವುದಾಗಿ ಸಚಿವರು ತಿಳಿಸಿದ್ದಾರೆ.

 ಕೋವಿಡ್ 2ನೇ ಅಲೆಯ ಭೀತಿಯ ನಡುವೆ ಈ ಬಾರಿ 8.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು ಎಂದು ಈ ಹಿಂದೆಯೇ ಸರಕಾರ ಪ್ರಕಟಿಸಿತ್ತು. 

 ಎಸ್​ಎಸ್​ಎಲ್​ಸಿ ಫಲಿತಾಂಶ ವೀಕ್ಷಿಸಲು ಮಂಡಳಿಯ ಅಧಿಕೃತ ವೆಬ್​ಸೈಟ್ sslc.karnataka.gov.in ಗೆ ಭೇಟಿ‌ ನೀಡಬಹುದು.

  • Blogger Comments
  • Facebook Comments

1 comments:

Item Reviewed: ಆಗಸ್ಟ್ 9 ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ : ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಘೋಷಣೆ  Rating: 5 Reviewed By: karavali Times
Scroll to Top