ಸೊರ್ನಾಡು ಪೆಟ್ರೋಲಿಯಂ ಪೈಪ್ ಲೈನಿಗೆ ಕನ್ನ ಪ್ರಕರಣ : ಪ್ರಮುಖ ಆರೋಪಿ ಐವನ್ ಸಹಿತ ಮೂವರ ದಸ್ತಗಿರಿ ಮಾಡಿದ ಬಂಟ್ವಾಳ ಪೊಲೀಸ್ - Karavali Times ಸೊರ್ನಾಡು ಪೆಟ್ರೋಲಿಯಂ ಪೈಪ್ ಲೈನಿಗೆ ಕನ್ನ ಪ್ರಕರಣ : ಪ್ರಮುಖ ಆರೋಪಿ ಐವನ್ ಸಹಿತ ಮೂವರ ದಸ್ತಗಿರಿ ಮಾಡಿದ ಬಂಟ್ವಾಳ ಪೊಲೀಸ್ - Karavali Times

728x90

11 August 2021

ಸೊರ್ನಾಡು ಪೆಟ್ರೋಲಿಯಂ ಪೈಪ್ ಲೈನಿಗೆ ಕನ್ನ ಪ್ರಕರಣ : ಪ್ರಮುಖ ಆರೋಪಿ ಐವನ್ ಸಹಿತ ಮೂವರ ದಸ್ತಗಿರಿ ಮಾಡಿದ ಬಂಟ್ವಾಳ ಪೊಲೀಸ್

ಬಂಟ್ವಾಳ, ಆಗಸ್ಟ್ 11, 2021 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಜುಲೈ 30 ರಂದು ದಾಖಲಾದ ಪೈಪ್ ಲೈನ್ ಕೊರೆದು ಪೆಟ್ರೋಲಿಯಂ ಉತ್ಪನ್ನ ಕದಿಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಮುಖ ಆರೋಪಿ ಅರಳ ಗ್ರಾಮದ ಸೊರ್ನಾಡು-ಅರ್ಬಿ ಮನೆ ನಿವಾಸಿ ಸಂತಾನ್ ಪಿಂಟೋ ಅವರ ಪುತ್ರ ಐವನ್ ಚಾರ್ಲ್ ಪಿಂಟೊ (43) ಸಹಿತ ಇತರ ಆರೋಪಿಗಳಾದ ಪಚ್ಚನಾಡಿ-ಬೋಂದೆಲ್ ನಿವಾಸಿ ಅಜಿತ್ ಹಾಗೂ ಕಣ್ಣೂರು ನಿವಾಸಿ ಜೋಯೆಲ್ ಪ್ರೀತಮ್ ಡಿ’ಸೋಜ ಅವರನ್ನೂ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಇತರ ಇಬ್ಬರು ಆರೋಪಿಗಳನ್ನು ಕೃತ್ಯದಲ್ಲಿ ಪೈಪ್ ಲೈನ್‍ಗೆ ಹೋಲ್ ತೆಗೆದು ವೆಲ್ಡಿಂಗ್ ಮಾಡಿ ಪೈಪ್ ಲೈನ್ ಅಳವಡಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಇತರ ಮೂರು ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. 

ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಅರಳ ಗ್ರಾಮದಲ್ಲಿ ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೆಟ್ರೋಲಿಯಂ ಪೈಪ್ ಲೈನ್ ಕೊರೆದು ಪೈಪ್ ಅಳವಡಿಸಿ ಜುಲೈ 11 ರಿಂದ ಸುಮಾರು 40 ಲಕ್ಷದ ಪೆಟ್ರೋಲಿಯಂ ಉತ್ಪನ್ನ ಕಳ್ಳತನ ಮಾಡಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆಯಲ್ಲಿತ್ತು. 

ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ ಭಗವಾನ್ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಇನ್ಸ್‍ಪೆಕ್ಟರ್ ಟಿ ಡಿ ನಾಗರಾಜ್ ಅವರ ನೇತೃತ್ವದ ತಂಡ ಪ್ರಕರಣದ ಪ್ರಮುಖ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತನಿಂದ ಪೊಲೀಸರು ಕೃತ್ಯಕ್ಕೆ ಬಳಸಿದ ಒಂದು ಜೀಪ್, ಡಿಸೇಲ್ ಕೊಂಡು ಹೋಗಲು ಬಳಸಿದ ಕ್ಯಾನ್‍ಗಳು ಹಾಗೂ ಡಿಸೇಲ್ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಪ್ರಸನ್ನ, ಎಚ್ ಸಿಗಳಾದ ಜನಾರ್ಧನ, ಗೋಣಿಬಸಪ್ಪ, ಸುರೇಶ್, ಪಿಸಿಗಳಾದ ಮನೋಜ್, ಪುನೀತ್ ಪಾಲ್ಗೊಂಡಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸೊರ್ನಾಡು ಪೆಟ್ರೋಲಿಯಂ ಪೈಪ್ ಲೈನಿಗೆ ಕನ್ನ ಪ್ರಕರಣ : ಪ್ರಮುಖ ಆರೋಪಿ ಐವನ್ ಸಹಿತ ಮೂವರ ದಸ್ತಗಿರಿ ಮಾಡಿದ ಬಂಟ್ವಾಳ ಪೊಲೀಸ್ Rating: 5 Reviewed By: karavali Times
Scroll to Top