ಹತ್ತು ತಿಂಗಳು ಯಾವ ಲೆಕ್ಕ, 10 ವರ್ಷಗಳ ಹೋರಾಟಕ್ಕೂ ಸಿದ್ಧ, ಆದರೆ ಹೊಸ ಕೃಷಿ ಕಾನೂನು ಜಾರಿಗೆ ಒಪ್ಪೆವು : ರೈತ‌ ಮುಖಂಡ ರಾಕೇಶ್ ಟಿಕಾಯತ್ ಖಡಕ್ ಎಚ್ಚರಿಕೆ  - Karavali Times ಹತ್ತು ತಿಂಗಳು ಯಾವ ಲೆಕ್ಕ, 10 ವರ್ಷಗಳ ಹೋರಾಟಕ್ಕೂ ಸಿದ್ಧ, ಆದರೆ ಹೊಸ ಕೃಷಿ ಕಾನೂನು ಜಾರಿಗೆ ಒಪ್ಪೆವು : ರೈತ‌ ಮುಖಂಡ ರಾಕೇಶ್ ಟಿಕಾಯತ್ ಖಡಕ್ ಎಚ್ಚರಿಕೆ  - Karavali Times

728x90

26 September 2021

ಹತ್ತು ತಿಂಗಳು ಯಾವ ಲೆಕ್ಕ, 10 ವರ್ಷಗಳ ಹೋರಾಟಕ್ಕೂ ಸಿದ್ಧ, ಆದರೆ ಹೊಸ ಕೃಷಿ ಕಾನೂನು ಜಾರಿಗೆ ಒಪ್ಪೆವು : ರೈತ‌ ಮುಖಂಡ ರಾಕೇಶ್ ಟಿಕಾಯತ್ ಖಡಕ್ ಎಚ್ಚರಿಕೆ 

ಚಂಡೀಗಢ, ಸೆಪ್ಟೆಂಬರ್ 27, 2021 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ, ಕಳೆದ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಭಾರತ್ ಬಂದ್ ಬಗ್ಗೆ ಸಮರ್ಥನೆ ನೀಡಿದ್ದು, ಹತ್ತು ತಿಂಗಳಲ್ಲ ಇನ್ನೂ 10 ವರ್ಷಗಳ ಹೋರಾಟಕ್ಕೂ ಸಿದ್ಧರಿದ್ದೇವೆ ಆದರೆ ಹೊಸ ಕೃಷಿ ಕಾನೂನು ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. 

 ರೈತರು, ಪ್ರಮುಖವಾಗಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ಕೃಷಿಕರು ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಲಾಗಿರುವ ಕೃಷಿ ಕಾನೂನನ್ನು ವಿರೋಧಿಸಿ ಅದನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕಳೆದ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.  

ಪಾಣಿಪತ್ ನಲ್ಲಿ ಟಿಕಾಯತ್ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು ಕೃಷಿ ಕಾನೂನನ್ನು ವಿರೋಧಿಸಿ 10 ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ಹತ್ತು ತಿಂಗಳು ಯಾವ ಲೆಕ್ಕ, ನಾವು 10 ವರ್ಷಗಳ ಕಾಲ ಹೋರಾಟಕ್ಕೂ ಸಿದ್ಧರಿದ್ದೇವೆ ಎಂಬ ಸಂದೇಶವನ್ನು ನೀಡುತ್ತಿದ್ದೇವೆ. ಇದನ್ನು ಕೇಂದ್ರ ಸರಕಾರ ಕಿವಿ ತೆರೆದು ಆಲಿಸಬೇಕು‌ ಎಂದು ಆಗ್ರಹಿಸಿದ್ದಾರೆ. 

 ಕೇಂದ್ರ ಸರಕಾರ ಹೊಸ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕಿದೆ ಎಂದು ಆಗ್ರಹಿಸಿರುವ ರಾಕೇಶ್ ಟಿಕಾಯತ್, ಸರಕಾರ ರೈತರ ಬೇಡಿಕೆಗೆ ಕಿವಿಯಾಗದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವ ಸಂದೇಶವನ್ನು ಟಿಕಾಯತ್ ಈ ಮೂಲಕ ರವಾನಿಸಿದ್ದಾರೆ. 

 ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನು ಸಿದ್ಧವಾಗಿರಿಸಿಕೊಂಡಿರಬೇಕು ದೆಹಲಿಯೆಡೆಗೆ ತೆರಳಲು ಯಾವುದೇ ಕ್ಷಣದಲ್ಲಿ ಅದು ಬೇಕಾಗುತ್ತದೆ ಎಂದು ಟಿಕಾಯತ್ ರೈತರಿಗೆ ಕರೆ ನೀಡಿದ್ದಾರೆ. ಇಂದು (ಸೆ.27) ಭಾರತ್ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿದ್ದು ಇದಕ್ಕೂ ಮುನ್ನ ರಾಕೇಶ್ ಟಿಕಾಯತ್ ಮಹಾಪಂಚಾಯತ್ ಉದ್ದೇಶಿಸಿ ಈ ಎಚ್ಚರಿಕೆ ನೀಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಹತ್ತು ತಿಂಗಳು ಯಾವ ಲೆಕ್ಕ, 10 ವರ್ಷಗಳ ಹೋರಾಟಕ್ಕೂ ಸಿದ್ಧ, ಆದರೆ ಹೊಸ ಕೃಷಿ ಕಾನೂನು ಜಾರಿಗೆ ಒಪ್ಪೆವು : ರೈತ‌ ಮುಖಂಡ ರಾಕೇಶ್ ಟಿಕಾಯತ್ ಖಡಕ್ ಎಚ್ಚರಿಕೆ  Rating: 5 Reviewed By: karavali Times
Scroll to Top