ಸೋಣಂದೂರು : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು - Karavali Times ಸೋಣಂದೂರು : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು - Karavali Times

728x90

14 September 2021

ಸೋಣಂದೂರು : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು

ಬೆಳ್ತಂಗಡಿ, ಸೆಪ್ಟಂಬರ್ 15, 2021 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೆÇಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು, ಸೋಣಂದೂರು ಗ್ರಾಮದ ಸೋಣಂದೂರು ಶಾಲಾ ಬಳಿ ಮಂಗಳವಾರ ಕಾರ್ಯಾಚರಣೆ ನಡೆಸಿದ ಪೂಂಜಾಲಕಟ್ಟೆ ಪೊಲೀಸ್ ಉಪನಿರೀಕ್ಷಕ ಕುಟ್ಟಿ ಎಂ ಕೆ ನೇತೃತ್ವದ ಪೊಲೀಸರು ಪರವಾನಿಗೆ ರಹಿತವಾಗಿ ಟೆಂಪೋದಲ್ಲಿ ಸಾಗಾಟ ನಡೆಸುತ್ತಿದ್ದ ಜಾನುವಾರುಗಳನ್ನು ಪತ್ತೆ ಹಚ್ಚಿ ಇಬ್ಬರು ಆರೋಪಿಗಳಾದ ಬೆಳ್ತಂಗಡಿ ತಾಲೂಕು, ಸೋಣಂದೂರು ಗ್ರಾಮದ ಪಣಕಜೆ ಸಮೀಪದ ಸಬರಬೈಲು ನಿವಾಸಿ ಅಣ್ಣಿ ಮೂಲ್ಯ ಅವರ ಪುತ್ರ ಗಣೇಶ (32) ಹಾಗೂ ಮುಂಡಾರಿ ನಿವಾಸಿ ಆದಂ ಎಂಬವರ ಪುತ್ರ ನವಾಝ್ (26) ಅವರನ್ನು ದಸ್ತಗಿರಿ ಮಾಡಿದ್ದಾರೆ. 

ಕಾರ್ಯಾಚರಣೆ ವೇಳೆ ಪೋಲೀಸರು ಟೆಂಪೋ ಸಹಿತ ಎರಡು ಹೋರಿ ಕರುಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 1,02,000/- ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಅಪರಾದ ಕ್ರಮಾಂಕ 61/2021 ಕಲಂ 5,7,11 ಕರ್ನಾಟಕ ಪ್ರಿವೆನ್ಷನ್ ಆಫ್ ಸ್ಲಾಟರ್ ಆಂಡ್ ಪ್ರಸರ್ವೇಶನ್ ಆಫ್ ಕ್ಯಾಟಲ್ ಆಕ್ಟ್-2020 ಹಾಗೂ ಕಲಮ 47(ಎ), 48, 56, (ಎ)(ಬಿ) ಟ್ರಾನ್ಸ್ ಪೋರ್ಟ್ ಆಫ್ ಅನಿಮಲ್ ರೂಲ್-1978 ಹಾಗೂ ಸೆಕ್ಷನ್ 11(ಎ), 11(ಬಿ), 38, ಪ್ರಿವೆನ್ಷನ್ ಆಫ್ ಕ್ರೂಯೆಲ್ಟಿ ಆಫ್ ಅನಿಮಲ್ ಆಕ್ಟ್-1960 ಹಾಗೂ ಸೆಕ್ಷನ್ 175 ಆರ್/ಡಬ್ಲ್ಯು 177 ಐಎಂವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸೋಣಂದೂರು : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು Rating: 5 Reviewed By: karavali Times
Scroll to Top