ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಶಿಕ್ಷಕ - Karavali Times ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಶಿಕ್ಷಕ - Karavali Times

728x90

4 September 2021

ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಶಿಕ್ಷಕ

 


ಡಿ.ಎಸ್.ಐ.ಬಿ ಪಾಣೆಮಂಗಳೂರು

ಸೆಪ್ಟೆಂಬರ್ 5ನೇ ದಿನದಂದು ನಾವುಗಳು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ನಾವು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ. ಅವರು ಅನೇಕ ಉತ್ತಮ ಗುಣಗಳು ಮತ್ತು ಗುಣಲಕ್ಷಣಗಳನ್ನು ಹೊಂದಿದ್ದಾರೆ. ಅವರಂತೆಯೇ ನಮ್ಮ ಶಿಕ್ಷಕರು ಕೂಡ. ಅವರು ಕೊಟ್ಟ ವಿದ್ಯೆ ಇಂದು ನಮ್ಮ ಜೀವನದ ಭವಿಷ್ಯಕ್ಕೆ ದಾರಿ ದೀಪವಾಗಿವೆ‌. ಅವರೊಂದಿಗೆ ಕಳೆದ ಸಮಯ ಮತ್ತು ಕೃತಜ್ಞತೆಯು ವ್ಯಕ್ತಪಡಿಸಿದ್ದಾಗ ಶಿಕ್ಷಕರನ್ನು ಸಂತೋಷ ಮತ್ತು ಹೆಮ್ಮೆ ಪಡುವಂತೆ ಮಾಡುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅವರ ಕೊಡುಗೆಯನ್ನು ಗುರುತಿಸುವುದು ಬಹಳ ಮುಖ್ಯ. ಇಂತಹ ಅಧ್ಬುತ ದಿನವನ್ನು ನಮ್ಮ ಹುಟ್ಟು ಹಬ್ಬದ ದಿನಕ್ಕಿಂತಲು ಹೆಚ್ಚಾಗಿ ಆಚರಿಸಬೇಕಾಗುತ್ತವೆ.

 ನಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯು ಶಿಕ್ಷಕರ ಶ್ರಮವಿದೆ‌. ಆದರೆ ಇಂದು ಕೆಲವೊಂದು ದುಷ್ಟರ ಶಕ್ತಿಯಿಂದ ಶಿಕ್ಷಕರನ್ನೆ ಹೆದರಿಸುತ್ತ ಬೀದಿಗೆ ಎಸೆಯುವಂತಹ ಕೆಲಸಕ್ಕೆ ಕೈ ಹಾಕುತ್ತಿರುವುದರಿಂದ ಶಿಕ್ಷಕರು ಮೌನವಾಗಿ ಜೀವನ ನಡೆಸಬೇಕಾಗಿದೆ. ಅದು ಅಲ್ಲದೆ ಸರಿಯಾದ ವೇತನ ಕೂಡ ಸಿಗದೆ ಇರುವುದರಿಂದ ಇಂದಿನ ಪೀಳಿಗೆಯವರು ಶಿಕ್ಷಕ ಹುದ್ದೆಯನ್ನು ದೂರ ಮಾಡುವಂತಹ ಸ್ಥಿತಿಗಳು ನಿರ್ಮಾಣವಾಗಿವೆ. ನೀನು ಏನಾಗಬೇಕೆಂದು ಇಂದಿನ ಪೀಳಿಗೆಯವರಲ್ಲಿ ಕೇಳಿ ನೋಡಿ, ಅಪ್ಪಿ ತಪ್ಪಿ ಕೂಡ ನಾನೋರ್ವ ಶಿಕ್ಷಕನಾಗಬೇಕು ಎಂದು ಹೇಳುವುದಿಲ್ಲ. ಅವರ ದೃಷ್ಠಿಯೇನಿದ್ದರೂ ಇಂಜಿನಿಯರೋ ಡಾಕ್ಟರಾಗುವ ಗುರಿಯತ್ತ ಪಯಣ ಬೆಳೆಸಿರುತ್ತದೆ. ಹೀಗೆ ಎಲ್ಲರೂ ಶಿಕ್ಷಕ ವೃತ್ತಿಯಿಂದ ದೂರ ಉಳಿದರೆ ದೇಶದ ಸ್ಥಿತಿ ಏನಾಗಬೇಡ? ಪ್ರತಿಷ್ಠಿತ ಕಾಲೇಜು ಶಿಕ್ಷಕರನ್ನು ಬಿಡಿ, ಅವರಿಗೆ ಲಕ್ಷಗಟ್ಟಳೆ ಸಂಬಳ ಸವಲತ್ತು ಎಲ್ಲವೂ ದೊರೆಯುತ್ತದೆ. ಆದರೆ ಸಾಮಾನ್ಯ ಶಿಕ್ಷಕರ ಪಾಡು ಅಂದುಕೊಂಡಷ್ಟು ಸುಲಭವಲ್ಲ. 

ಸರ್ಕಾರಿ ಕೆಲಸವೆಂದರೆ ಜೀವನದಲ್ಲಿ ಸೆಕ್ಯೂರ್ಡ್ ಎಂಬ ಭಾವನೆ ಮೂಡುತ್ತದೆ. ಆದರೆ ಶಿಕ್ಷಕ ವೃತ್ತಿಗೆ ಹಾಗಲ್ಲ, ಅದರಲ್ಲಿಯೂ ಇಂದಿನ ಕೆಲವು ಶಿಕ್ಷಕರ ಸ್ಥಿತಿ ಉತ್ತಮವಾಗಿಲ್ಲ ಎಂಬುದಂತೂ ಸತ್ಯ. ಶಿಕ್ಷಣದ ಗುಣಮಟ್ಟ, ಶಿಕ್ಷಕರ ಮೌಲ್ಯಗಳೂ ಸಹ ಕಡಿಮೆಯಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಸರಕಾರದ ಸರಿಯಾದ ಸವಲತ್ತುಗಳು ಸಿಗದೆ ಇರುವುದರಿಂದ ಶಿಕ್ಷಕರು ಹುದ್ದೆಗೆ ರಾಜೀನಾಮೆ ನೀಡಿ ವಿದ್ಯಾರ್ಥಿಗಳ ಭವಿಷ್ಯ ಅರ್ಧ ದಾರಿಯಲ್ಲಿ ಮೊಟಕುಗೊಳ್ಳುತ್ತಿವೆ. ಏನೇ ಆದರು ನಮ್ಮ ಶಿಕ್ಷಕರು ಪಡುವಂತಹ ಕಷ್ಟಗಳನ್ನು ನೆನಸಿಕೊಳ್ಳಲು ಸಾಧ್ಯವಿಲ್ಲ. ಶಾಲಾ ದಿನಗಳಲ್ಲಿ ಕೆಲವೊಮ್ಮೆ ಕೊಡವ ಪೆಟ್ಟುಗಳಿಗೆ ನಮ್ಮ ಶತ್ರುಗಳಾಗಿರುತ್ತಾರೆ. ಆದರೆ ಅದರ ಪರಿಣಾಮ ಏನೆಂದು ನಾವು ಇಂದು ತಿಳಿಯುತ್ತಿದ್ದೇವೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ ನನ್ನ ಸ್ವತಃ ಅನುಭವವಿದು. ನನ್ನ ಶಿಕ್ಷಕರು ಮತ್ತು ನಾನು ಇಂದು‌ ಉತ್ತಮ ಸ್ನೇಹಿತರಂತೆ ಇದ್ದೇವೆ. ಅಗತ್ಯ ವಿಷಯಗಳನ್ನು ಚರ್ಚಿಸುತ್ತಾ, ಎಲ್ಲಾದರೂ ಸಿಕ್ಕರೆ ಹ್ಯಾಂಡ್ ಶೇಕ್ ಮಾಡಿ ಮಾತನಾಡುತ್ತ ಉತ್ತಮ ಬಾಂಧವ್ಯದಿಂದ ಇದ್ದೇವೆ. ಕೆಲವೊಮ್ಮೆ ನಾನೆ ಅವರಿಗೆ ಶಿಕ್ಷಕನಾ ಎಂಬ ಪ್ರಶ್ನೆ ಮೂಡುತ್ತವೆ. ಏನೆ ಇರಲಿ ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಶಿಕ್ಷಕರ ಶಕ್ತಿ ಇದೆ ಎನ್ನುವುದು ಒಂದೇ ನನಗೆ ಸಮಾಧಾನ.

 ಪ್ರತಿಯೊಬ್ಬ ಪ್ರತಿಯೊಂದರಲ್ಲಿ ಇದ್ದರು ಕೂಡ ಅದಕ್ಕೆ ಕಾರಣ ಅವರ ಶಿಕ್ಷಕರು ಹೊರತು ಬೇರೆಯಾರು ಅಲ್ಲ. ಸಕ್ಸಸ್ ಫುಲ್ ಟೀಚರ್, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರು ಅಂದ್ರೆ ಅವರಿಗೆ ಹಲವಾರು ಉತ್ತಮ ಗುಣಗಳು ಇರುತ್ತವೆ. ಅಷ್ಟೇ ಅಲ್ಲ ಪಾಠ ಮಾಡುವ ಉತ್ತಮ ತಂತ್ರಗಾರಿಕೆಗಳು ಕೂಡ ಅವರಿಗೆ ಇರುತ್ತವೆ. ಇಂತಹ ಗುಣಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತವೆ. ಇಂತಹ ಕ್ಯಾರೆಕ್ಟರ್‌ಗಳು ಒಬ್ಬ ಶಿಕ್ಷಕನ ಯಶಸ್ಸಿಗೂ ಸಹಾಯಕಾರಿ. ಗಣಿತ, ಇಂಗ್ಲಿಷ್, ಮತ್ತು ವಿಜ್ಞಾನದಂತಹ ಪರಿಕಲ್ಪನೆಗಳನ್ನು ಕಲಿಯಲು ಮತ್ತು ಅನ್ವಯಿಸಲು ವಿದ್ಯಾರ್ಥಿಗಳಿಗೆ ತರಗತಿ ಸೂಚನೆ ಮತ್ತು ಪ್ರಸ್ತುತಿಗಳನ್ನು ಬಳಸುವುದು ಶಿಕ್ಷಕನ ಪಾತ್ರ. ಶಿಕ್ಷಕರು ಪಾಠಗಳನ್ನು, ದರ್ಜೆಯ ಪತ್ರಗಳನ್ನು ತಯಾರಿಸುತ್ತಾರೆ, ತರಗತಿಯನ್ನು ನಿರ್ವಹಿಸುತ್ತಾರೆ, ಹೆತ್ತವರೊಂದಿಗೆ ಭೇಟಿಯಾಗುತ್ತಾರೆ ಮತ್ತು ಶಾಲೆಯ ಸಿಬ್ಬಂದಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಆದರೆ, ಶಿಕ್ಷಕರಾಗಿ ಪಾಠ ಯೋಜನೆಗಳನ್ನು ನಿರ್ವಹಿಸುವುದಕ್ಕಿಂತ ಹೆಚ್ಚು: ಇಂದಿನ ಜಗತ್ತಿನಲ್ಲಿ. ಇಂದು ಬೋಧನೆಯು ಬಹುಮುಖಿ ವೃತ್ತಿಯಾಗಿದೆ; ಶಿಕ್ಷಕರು ಹೆಚ್ಚಾಗಿ ಪೋಷಕ ಪೋಷಕರು, ವರ್ಗ ಶಿಸ್ತು, ಮಾರ್ಗದರ್ಶಿ, ಸಲಹೆಗಾರ, ಬುಕ್ಕೀಪರ್, ಪಾತ್ರನಿರ್ವಹಣೆ, ಯೋಜಕ ಮತ್ತು ಇತರ ಸಂಬಂಧಿತ ಪಾತ್ರಗಳ ಪಾತ್ರಗಳನ್ನು ನಿರ್ವಹಿಸುತ್ತಾರೆ. ಒಬ್ಬ ವಿದ್ಯಾರ್ಥಿ ಉತ್ತಮವಾಗಿ ಬೆಳೆದರು, ಕೆಟ್ಟ ದಾರಿಯಲ್ಲಿ ನಡೆದರು ಎಲ್ಲದಕ್ಕೂ ನೇರವಾಗಿ ಶಿಕ್ಷಕರನ್ನೇ ತೋರಿಸುತ್ತಾರೆ. ಯಾವ ಶಿಕ್ಷಕ ಕೂಡ ತಮ್ಮ ವಿದ್ಯಾರ್ಥಿಗಳನ್ನು ಕೆಟ್ಟ ದಾರಿಗೆ ತಲುಪಿಸಲು ಇಷ್ಟಪಡಲ್ಲ. 

ಶಿಕ್ಷಕ ಎಂಬುದು ಒಂದು ಹುದ್ದೆಯಾದರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಪೋಷಕರಿಗಿಂತ ಶಿಕ್ಷಕರೆ ಮಕ್ಕಳನ್ನು ಹೆಚ್ಚು ಸಮಯ ನೋಡಿಕೊಳ್ಳುತ್ತಾರೆ. ಅಂದು ಗುರು ಕೊಟ್ಟ ಪೆಟ್ಟು ಯಾಕಾಗಿ ಎಂದು ಪ್ರತಿಯೊಬ್ಬ ಕೂಡ ಸ್ವತಃ ಕಾಲಿನ ಮೇಲೆ ನಿಂತಾಗ ಅರ್ಥೈಸುತ್ತಾನೆ. ಶಿಕ್ಷಕರು ಅವರಿಗಿಂತ ನಮ್ಮ ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ಬಾಳಬೇಕೆಂದು ಶ್ರಮಪಡುತ್ತಿರುತ್ತಾರೆ. ಎಲ್ಲವೂ ಉತ್ತಮ ಶಿಕ್ಷಕರೆಂದು ಹೇಳಲು ಸಾಧ್ಯವಿಲ್ಲ. ಅರ್ಧದಷ್ಟು ಕೆಟ್ಟ ಶಿಕ್ಷಕರಿಂದಾಗಿ ಉತ್ತಮ ಶಿಕ್ಷಕನ ಹೆಸರಿಗೆ ಮಸಿ ಬಳಸುವಂತಾಗಿದೆ. ತಮ್ಮ ಕಾಮದ ಆಸೆಯನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಬಳಸುವಂತಹ ಶಿಕ್ಷಕರು ಕೂಡ ಇದ್ದಾರೆ. ಇಂತಹವರಿಂದ ಶಾಲಾ ಕಾಲೇಜುಗಳಿಗೆ ಹೋಗಲು ಭಯಪಡುವಂತಾಗಿದೆ.

 ಓರ್ವ ಉತ್ತಮ ಶಿಕ್ಷಕ ಎಲ್ಲಿ ಇರುತ್ತಾನೊ ಅಲ್ಲಿ ಯಾವ ಕೆಟ್ಟ ಪರಿಣಾಮ ಬೀರುವುದಿಲ್ಲ. ಶಿಕ್ಷಕರು ವಿದ್ಯಾರ್ಥಿಗಳು ಉತ್ತಮ ಸ್ನೇಹಿತರಂತೆ ಜೀವಿಸಲು ಸಹಕಾರಿಯಾಗುತ್ತವೆ. ಹಳೆ ಕಾಲದ ಇಂಜಿನ್‌ಗಳು ಉತ್ತಮವಾಗಿದೆ ಇವಾಗ ಬರುವಂತಹ ಇಂಜಿನ್ ಕೆಲವು ದಿನಗಳಷ್ಟೆ ಎಂಬಂತೆ ಇಂದಿನ ಕೆಲವು ಶಿಕ್ಷಕರು ಕೂಡ ಇದ್ದಾರೆ. ಶಿಕ್ಷಕರು ನೀಡಿದ ಕೊಡುಗೆಗಳು ಮತ್ತು ಪ್ರಯತ್ನಗಳು ಎಂದಿಗೂ ಗಮನಕ್ಕೆ ಬರುವುದಿಲ್ಲ. ಅವರು ಕೊಟ್ಟ ಅಕ್ಷರ ನಮ್ಮ ಜೀವನದ ದಾರಿಯಾದರೂ ಎತ್ತರದ ಮೆಟ್ಟಿಲುಗಳನ್ನು ಏರಿದಾಗ ಮರೆತು ಬಿಡುವವರೆ ಹೆಚ್ಚು. ಏ

ಏಕಲವ್ಯ ಬಿಲ್ವಿದ್ಯೆ ಕಲಿಯಲು ದ್ರೋಣಾಚಾರ್ಯರನ್ನು ವಿನಂತಿಸುತ್ತಾನೆ. ಆದರೆ ದ್ರೋಣಾಚಾರ್ಯರು ಕ್ಷತ್ರೀಯರ ಹೊರತು ಬೇರೆಯವರಿಗೆ ವಿದ್ಯೆ ಕಲಿಸುವುದಿಲ್ಲವೆಂದು ಅವನ ವಿನಂತಿಯನ್ನು ನಿರಾಕರಿಸುತ್ತಾರೆ. ಆದರೆ ನಿರಾಶನಾಗದ ಏಕಲವ್ಯ ಅವರ ಮಣ್ಣಿನ ಮೂರ್ತಿ ಮಾಡಿ ಮಾನಸಿಕವಾಗಿ ಅವರನ್ನು ಗುರುಗಳಾನ್ನಾಗಿ ಸ್ವೀಕರಿಸಿ ಬಿಲ್ವಿದ್ಯೆ ಕಲಿಯುತ್ತಾನೆ ಎಂಬುದು ಎಲ್ಲರಿಗೂ ತಿಳಿದ ಪುರಾಣದ ಕತೆ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಶಿಕ್ಷಕ. ದೇಶದ ಪ್ರಗತಿಯಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಶಿಕ್ಷಕನಿಗೂ ಇದೆ. ವಿದ್ಯಾರ್ಥಿಗಳ ಭವಿಷ್ಯವು ಶಿಕ್ಷಣದಲ್ಲಿದ್ದರೆ ಅದನ್ನು ಸಾಕಾರಗೊಳಿಸುವ ಸೂತ್ರ ಶಿಕ್ಷಕರಲ್ಲಿರುತ್ತದೆ. 

ನಾನು ಕೂಡ ಇಂದು ಒಂದು ಬರಹ ಬರೆದು ಹೆಸರು ನನ್ನದಾರೂ ಅದರಲ್ಲಿರುವ ಅಕ್ಷರಗಳೆಲ್ಲವೂ ನನ್ನ ಶಿಕ್ಷಕರು ನನಗೆ ಕೊಟ್ಟ ಕಾಣಿಕೆ. ಅವರು ಅಕ್ಷರ ಕಲಿಸಿಕೊಟ್ಟಿರುವುದರಿಂದ ಇಂದು ಎಲ್ಲವೂ ಸಾಧ್ಯವಾಗುತ್ತಿವೆ. ನನ್ನ ಎಲ್ಲಾ ಶಿಕ್ಷಕರನ್ನು ಸ್ಮರಿಸುತ್ತ ಸರ್ವ ಶಿಕ್ಷಕರಿಗೂ ಶಿಕ್ಷಕ ದಿನದ ಹಾರ್ದಿಕ ಶುಭಾಶಯಗಳು.




  • Blogger Comments
  • Facebook Comments

0 comments:

Post a Comment

Item Reviewed: ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಶಿಕ್ಷಕ Rating: 5 Reviewed By: karavali Times
Scroll to Top