ಇಂಜಿನಿಯರ್ ಕೋರ್ಸಿಗೆ 24 ವಾರಗಳ ಕಡ್ಡಾಯ ಇಂಟರ್ನ್ ಶಿಪ್ : ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳಲು ಅವಕಾಶ - Karavali Times ಇಂಜಿನಿಯರ್ ಕೋರ್ಸಿಗೆ 24 ವಾರಗಳ ಕಡ್ಡಾಯ ಇಂಟರ್ನ್ ಶಿಪ್ : ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳಲು ಅವಕಾಶ - Karavali Times

728x90

28 September 2021

ಇಂಜಿನಿಯರ್ ಕೋರ್ಸಿಗೆ 24 ವಾರಗಳ ಕಡ್ಡಾಯ ಇಂಟರ್ನ್ ಶಿಪ್ : ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳಲು ಅವಕಾಶ

ಬೆಂಗಳೂರು, ಸೆಪ್ಟಂಬರ್ 28, 2021 (ಕರಾವಳಿ ಟೈಮ್ಸ್) : ಇಂಜಿನಿಯರಿಂಗ್ ಕೋರ್ಸ್ ಗಳಿಗೆ 24 ವಾರಗಳ ಇಂಟರ್ನ್ ಶಿಪ್ ಕಡ್ಡಾಯಗೊಳಿಸಲಾಗುತ್ತಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗಲು ಅವಕಾಶವಿರುತ್ತದೆ. ಜೊತೆಗೆ ಬಹುಕ್ರಮ ಇಂಟರ್ನ್ ಶಿಪ್‍ಗಳನ್ನು ವಿದ್ಯಾರ್ಥಿಗಳಲ್ಲಿ ಪೆÇ್ರೀತ್ಸಾಹಿಸಲಾಗುತ್ತದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಉಪಕುಲಪತಿ ಬಿ ಕರಿಸಿದ್ದಪ್ಪ ತಿಳಿಸಿದ್ದಾರೆ.

ಸಂಪೂರ್ಣ ಏಕೀಕರಣಕ್ಕಾಗಿ ಕೈಗಾರಿಕೆಗಳು, ಶೈಕ್ಷಣಿಕ, ವಿದ್ಯಾರ್ಥಿಗಳು ಮತ್ತು ಬೋಧಕ ವಲಯದ ನಕ್ಷೆ ಮಾಡಲಾಗುತ್ತಿದ್ದು, ಅಂತರ ಶಿಕ್ಷಣ ಯೋಜನೆಯ ಕೆಲಸಗಳನ್ನು, ‘ಸ್ವಯಂ ಅಧ್ಯಯನ ಘಟಕ’ವನ್ನೂ ಪರಿಚಯಿಸಲಾಗುವುದು ಎಂದು ಕರಿಸಿದ್ದಪ್ಪ ಎಂದವರು ತಿಳಿಸಿದ್ದಾರೆ. 

ಹೊಸ ಪಠ್ಯಕ್ರಮವನ್ನು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿಗೆ ಜೋಡಿಸಲಾಗಿದೆ ಮತ್ತು ಸಂಕ್ಷಿಪ್ತ ಮೌಲ್ಯಮಾಪನದ ಹಿಂದಿನ ಅಭ್ಯಾಸವನ್ನು ಬದಲಿಸಲು ರಚನಾತ್ಮಕ ಮೌಲ್ಯಮಾಪನವನ್ನು ಅನುಸರಿಸಲಾಗುತ್ತದೆ, ಮುಖ್ಯ ಮತ್ತು ಸಣ್ಣ ವಿಷಯಗಳ ಮೇಲೆ ಪದವಿಯನ್ನು ಕಲಿಸಲಾಗುತ್ತದೆ ಎಂದು ಕರಿಸಿದ್ದಪ್ಪ ಹೇಳಿದ್ದಾರೆ.

ನಾಲ್ಕು ಕಾಲೇಜುಗಳು ಪ್ರಾದೇಶಿಕ ಭಾಷಾ ಮಾಧ್ಯಮ ಕನ್ನಡದಲ್ಲಿ ಬಿ.ಇ. ಕೋರ್ಸುಗಳನ್ನು ಕಲಿಸಲು ಮುಂದೆ ಬಂದಿವೆ ಮತ್ತು ಉನ್ನತ ಶಿಕ್ಷಣ ಇಲಾಖೆಯಿಂದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದ ಅವರು  ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಶೀಘ್ರದಲ್ಲಿಯೇ ಅನುಮೋದನೆ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಇಂಜಿನಿಯರ್ ಕೋರ್ಸಿಗೆ 24 ವಾರಗಳ ಕಡ್ಡಾಯ ಇಂಟರ್ನ್ ಶಿಪ್ : ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳಲು ಅವಕಾಶ Rating: 5 Reviewed By: karavali Times
Scroll to Top