ಬಡಗಬೆಳ್ಳೂರು : ಫೇಸ್ ಬುಕ್ ಪೋಸ್ಟ್ ವಿಚಾರದಲ್ಲಿ ತಂಡದಿಂದ ಮನೆಗೆ ನುಗ್ಗಿ ವ್ಯಕ್ತಿ ಮೇಲೆ ತಲವಾರು ದಾಳಿ - Karavali Times ಬಡಗಬೆಳ್ಳೂರು : ಫೇಸ್ ಬುಕ್ ಪೋಸ್ಟ್ ವಿಚಾರದಲ್ಲಿ ತಂಡದಿಂದ ಮನೆಗೆ ನುಗ್ಗಿ ವ್ಯಕ್ತಿ ಮೇಲೆ ತಲವಾರು ದಾಳಿ - Karavali Times

728x90

26 October 2021

ಬಡಗಬೆಳ್ಳೂರು : ಫೇಸ್ ಬುಕ್ ಪೋಸ್ಟ್ ವಿಚಾರದಲ್ಲಿ ತಂಡದಿಂದ ಮನೆಗೆ ನುಗ್ಗಿ ವ್ಯಕ್ತಿ ಮೇಲೆ ತಲವಾರು ದಾಳಿ

ಬಂಟ್ವಾಳ, ಅಕ್ಟೋಬರ್ 27, 2021 (ಕರಾವಳಿ ಟೈಮ್ಸ್) : ಫೇಸ್ ಬುಕ್ ಪೋಸ್ಟ್ ವಿಚಾರವಾಗಿ ತಂಡವೊಂದು ವ್ಯಕ್ತಿಯೋರ್ವರ ಮನೆಗೆ ಅಕ್ರಮ ಪ್ರವೇಶಗೈದು ತಲವಾರು ದಾಳಿ ನಡೆಸಿದ ಘಟನೆ ಮಂಗಳವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಡಗಬೆಳ್ಳೂರುನಲ್ಲಿ ನಡೆದಿರುವುದು ವರದಿಯಾಗಿದೆ. 

ತಾಲೂಕಿನ ಬಡಬೆಳ್ಳೂರು ಗ್ರಾಮದ ಬಡಗಬೆಳ್ಳೂರು ಸೈಟ್ ನಿವಾಸಿ ಪ್ರವಾಸಿ ಪ್ರಬಂಧಕನಾಗಿ ಕಾರ್ಯನಿರ್ವಹಿಸುತ್ತಿರುವ ಜನಾರ್ದನ ಪೂಜಾರಿ ಅವರ ಪುತ್ರ ಪ್ರಕಾಶ್ ಬೆಳ್ಳೂರು (31) ಅವರ ಮನೆಗೆ ನುಗ್ಗಿದ ಆರೋಪಿಗಳಾದ ನಿತಿನ್, ನಿಶಾಂತ್ ಹಾಗೂ ಇತರರ ತಂಡ ತಲವಾರು ಬೀಸಿ ಹಲ್ಲೆ ನಡೆಸಿದ್ದಲ್ಲದೆ ಮನೆ ಮಂದಿಗೂ ಬೆದರಿಕೆ ಒಡ್ಡಿ ಪರಾರಿಯಾಗಿದೆ ಎಂದು ದೂರಲಾಗಿದೆ. 

ಪ್ರಕಾಶ್ ಬೆಳ್ಳೂರು ಅವರು ಆರೋಪಿ ನಿತಿನ್ ಪರವಾಗಿ 25 ಸಾವಿರ ರೂಪಾಯಿ ಹಣ ಪಡೆದುಕೊಂಡು  ಉಜಿರೆಯಲ್ಲಿ ನಡೆದ ಘಟನೆ ಬಗ್ಗೆ ಕೆಲಸ ಮಾಡಿರುತ್ತಾರೆ ಎಂದು ರತ್ನಾಕರ ಕೋಟ್ಯಾನ್ ಎಂನವರು ಅಪಪ್ರಚಾರ ಮಾಡಿದ್ದಾರೆ ಎನ್ನಲಾಗಿದ್ದು, ಇದನ್ನು  ತಿಳಿದ ಪ್ರಕಾಶ್ ಅವರು ಪಣೋಲಿಬೈಲು ದೇವಸ್ಥಾನಕ್ಕೆ ಸತ್ಯಾಸತ್ಯತೆ ಬಗ್ಗೆ ಬರುವಂತೆ ಫೇಸ್ ಬುಕ್ಕಿನಲ್ಲಿ ಫೆÇೀಸ್ಟ್ ಮಾಡಿರುತ್ತಾರೆ. ಸದ್ರಿ ಫೇಸ್ ಬುಕ್ ಪೋಸ್ಟ್ ವಿಚಾರದಲ್ಲಿ ನಿತಿನ್, ನಿಶಾಂತ್ ಹಾಗೂ ರತ್ನಾಕರ ಕೋಟ್ಯಾನ್ ಅವರು ಪ್ರಕಾಶಗೆ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಪ್ರಕಾಶ್ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ  ದೂರು ನೀಡಿರುವುದಾಗಿರುತ್ತದೆ. 

ಈ ಮಧ್ಯೆ ಮಂಗಳವಾರ ಸಂಜೆ 7.30 ಗಂಟೆಗೆ ಪ್ರಕಾಶ್ ಮನೆಯಲ್ಲಿದ್ದ ವೇಳೆ ಆರೋಪಿಗಳಾದ ನಿತಿನ್, ನಿಶಾಂತ್ ಹಾಗೂ ಇತರರು ಮನೆಗೆ ಅಕ್ರಮ ಪ್ರವೇಶ ಮಾಡಿ ನಿತಿನ್ ಕೈಯಲ್ಲಿ ತಲವಾರು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನೀನು ನಮ್ಮ ಬಗ್ಗೆ ಫೇಸ್ ಬುಕ್ಕಿನಲ್ಲಿ ಬಾರಿ ಫೆÇೀಸ್ಟ್ ಮಾಡುತ್ತೀಯಾ ಎಂದು ಪ್ರಶ್ನಿಸಿ ತಲವಾರಿಂದ ಕಡಿಯಲು ಬೀಸಿದ್ದು, ಈ ಸಂದರ್ಭ ಪ್ರಕಾಶ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಎಡ ಕಿವಿಗೆ ತಾಗಿ ಗಾಯವಾಗಿರುತ್ತದೆ. ಬಳಿಕ ಬೆನ್ನು, ಬಲ ತೊಡೆ, ಬಲ ಭುಜ, ತಲೆ ಮೊದಲಾದ ಭಾಗಗಳಿಗೆ ಹಿಗ್ಗಾ ಮುಗ್ಗ ಹಲ್ಲೆ ನಡೆಸಿದ್ದು, ಬಳಿಕ ಪ್ರಕಾಶ್ ನೆಲಕ್ಕೆ ಬಿದ್ದಾಗ ಆರೋಪಿಗಳು ಕಾಲಿನಿಂದ ತುಳಿದು ಗಂಭೀರ ಗಾಯಗೊಳಿಸಿರುತ್ತಾರೆ. ಈ ಸಂದರ್ಭ ಬಿಡಿಸಲು ಬಂದ ಪ್ರಕಾಶ್ ಅವರ ಅಣ್ಣ ರವೀಂದ್ರ, ಅತ್ತಿಗೆ ಲೀಲಾ ಅವರಿಗೂ ಆರೋಪಿಗಳು ಅವಾಚ್ಯವಾಗಿ ನಿಂದಿಸಿ ಹತ್ತಿರ ಬಂದರೆ  ನಿಮ್ಮನ್ನು ಕೂಡ ಜೀವ ಸಹಿತ  ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ ಎಂದು ಗಾಯಾಳು ಪ್ರಕಾಶ್ ದೂರಿಕೊಂಡಿದ್ದಾರೆ. 

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2021 ಕಲಂ 448, 504, 323, 324, 307, 506 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಡಗಬೆಳ್ಳೂರು : ಫೇಸ್ ಬುಕ್ ಪೋಸ್ಟ್ ವಿಚಾರದಲ್ಲಿ ತಂಡದಿಂದ ಮನೆಗೆ ನುಗ್ಗಿ ವ್ಯಕ್ತಿ ಮೇಲೆ ತಲವಾರು ದಾಳಿ Rating: 5 Reviewed By: karavali Times
Scroll to Top