ಪಾಕ್ ಪರ ಗರಿಷ್ಠ ಭಾಗೀದಾರಿಕೆ ದಾಖಲೆ ಬರೆದ ಬಾಬರ್-ರಿಝ್ವಾನ್ ಜೋಡಿ : ಪಾಕ್ ಪರ ವಿಶ್ವದಾಖಲೆ - Karavali Times ಪಾಕ್ ಪರ ಗರಿಷ್ಠ ಭಾಗೀದಾರಿಕೆ ದಾಖಲೆ ಬರೆದ ಬಾಬರ್-ರಿಝ್ವಾನ್ ಜೋಡಿ : ಪಾಕ್ ಪರ ವಿಶ್ವದಾಖಲೆ - Karavali Times

728x90

25 October 2021

ಪಾಕ್ ಪರ ಗರಿಷ್ಠ ಭಾಗೀದಾರಿಕೆ ದಾಖಲೆ ಬರೆದ ಬಾಬರ್-ರಿಝ್ವಾನ್ ಜೋಡಿ : ಪಾಕ್ ಪರ ವಿಶ್ವದಾಖಲೆ

ದುಬೈ, ಅಕ್ಟೋಬರ್ 25, 2021 (ಕರಾವಳಿ ಟೈಮ್ಸ್) : ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಭರ್ಜರಿ ಜಯಕ್ಕೆ ಕಾರಣರಾದ ನಾಯಕ ಬಾಬರ್ ಅಝಂ-ಮಹಮದ್ ರಿಝ್ವಾನ್ ಜೋಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಬಾಬರ್-ರಿಝ್ವಾನ್ ಅವರ ಅಮೋಘ ಬ್ಯಾಟಿಂಗ್ ಸದ್ಯ ವಿಶ್ವ ದಾಖಲೆಯ ಪಾಟ್ನರ್‍ಶಿಪ್ ಆಗಿ ದಾಖಲೆಯಲ್ಲಿ ಸೇರಿಕೊಂಡಿದೆ. ಬಾಬರ್-ರಿಝ್ವಾನ್ ಜೋಡಿಯ ಅಜೇಯ 152 ರನ್ ಜೊತೆಯಾಟ ಪಾಕಿಸ್ತಾನದ ಪರ ಟಿ-20 ಯಲ್ಲಿ ಯಾವುದೇ ಕ್ರಮಾಂಕದಲ್ಲಿ ಗರಿಷ್ಠ ಪಾಟ್ನರ್‍ಶಿಪ್ ಎಂಬ ಖ್ಯಾತಿಗೆ ಪಾತ್ರವಾಯಿತು. ಈ ಹಿಂದೆ 2012ರಲ್ಲಿ ಮುಹಮ್ಮದ್ ಹಫೀಝ್-ಶೊಯೆಬ್ ಮಲ್ಲಿಕ್ ಜೋಡಿ ಗಳಿಸಿದ್ದ 106 ರನ್ ಜೊತೆಯಾಟ ಈವರೆಗಿನ ಪಾಕ್ ಪರ ಗರಿಷ್ಠ ರನ್ ಜೊತೆಯಾಟವಾಗಿತ್ತು. ಇದೀಗ ಈ ದಾಖಲೆಯನ್ನು ಬಾಬರ್ ಅಝಂ-ರಿಝ್ವಾನ್ ಜೋಡಿ ಮುರಿದು ಹಾಕಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. 

ಭಾರತ ನಿಗದಿಪಡಿಸಿದ್ದ 152 ರನ್ ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಬರ್-ರಿಝ್ವಾನ್ ಜೋಡಿ ಅಜೇಯ ಆಟವಾಡಿತು. ನಾಯಕ ಬಾಬರ್ ಅಝಂ 52 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರೆ, ಮಹಮದ್ ರಿಝ್ವಾನ್ 55 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದರು. ಆ ಮೂಲಕ ಈ ಜೋಡಿ ಬರೊಬ್ಬರಿ 152 ರನ್ ಗಳ ಬೃಹತ್ ಜೊತೆಯಾಟವಾಡಿತು. 

  • Blogger Comments
  • Facebook Comments

0 comments:

Post a Comment

Item Reviewed: ಪಾಕ್ ಪರ ಗರಿಷ್ಠ ಭಾಗೀದಾರಿಕೆ ದಾಖಲೆ ಬರೆದ ಬಾಬರ್-ರಿಝ್ವಾನ್ ಜೋಡಿ : ಪಾಕ್ ಪರ ವಿಶ್ವದಾಖಲೆ Rating: 5 Reviewed By: karavali Times
Scroll to Top