ತುಂಬೆಯಲ್ಲಿ ಹೋಟೆಲ್ ತ್ಯಾಜ್ಯ ನೀರು ಹೆದ್ದಾರಿಗೆ : ತಾ ಪಂ ಇಒ ರಾಜಣ್ಣ ನೇತೃತ್ವದ ಅಧಿಕಾರಿಗಳಿಂದ ಕಾರ್ಯಾಚರಣೆ - Karavali Times ತುಂಬೆಯಲ್ಲಿ ಹೋಟೆಲ್ ತ್ಯಾಜ್ಯ ನೀರು ಹೆದ್ದಾರಿಗೆ : ತಾ ಪಂ ಇಒ ರಾಜಣ್ಣ ನೇತೃತ್ವದ ಅಧಿಕಾರಿಗಳಿಂದ ಕಾರ್ಯಾಚರಣೆ - Karavali Times

728x90

18 October 2021

ತುಂಬೆಯಲ್ಲಿ ಹೋಟೆಲ್ ತ್ಯಾಜ್ಯ ನೀರು ಹೆದ್ದಾರಿಗೆ : ತಾ ಪಂ ಇಒ ರಾಜಣ್ಣ ನೇತೃತ್ವದ ಅಧಿಕಾರಿಗಳಿಂದ ಕಾರ್ಯಾಚರಣೆ

ಂಟ್ವಾಳ, ಅಕ್ಟೋಬರ್ 18, 2021 (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡೆಗೋಳಿಯಲ್ಲಿ ಹೋಟೆಲ್ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿಗೆ ಬಿಡುವುದರ ವಿರುದ್ಧ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ನೇತೃತ್ವದ ಅಧಿಕಾರಿಗಳು ಪಂಚಾಯತ್ ಜನಪ್ರತಿನಿಧಿಗಳ ಸಹಕಾರದಿಂದ ಸೋಮವಾರ ಕಾರ್ಯಾಚರಣೆ ನಡೆಸಿದ್ದು, ತ್ಯಾಜ್ಯ ನೀರನ್ನು ಬಿಡುತ್ತಿದ್ದ ಪೈಪನ್ನು ಮುಚ್ಚಿ ಸೋಕ್‍ಫಿಟ್ ಅಳವಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. 

ಈ ಕಾರ್ಯಾಚರಣೆ ತುಂಬೆ ಪಂಚಾಯತ್ ವ್ಯಾಪ್ತಿಯಲ್ಲಿ ಆರಂಭ ಅಷ್ಟೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಕಡೆಯು ಮುಂದುವರಿಯಲಿದೆ ಎಂದಿದ್ದಾರೆ. ಆರಂಭದಲ್ಲಿ ಇದು ಕುಡಿಯುವ ನೀರು ಪೋಲಾಗುತ್ತಿರುವುದಾಗಿ ಭಾವಿಸಲಾಗಿತ್ತು. ಇದೀಗ ಅಧಿಕಾರಿಗಳ ಕಾರ್ಯಾಚರಣೆಯಿಂದ ಹೊಟೇಲ್ ಗಳ ತ್ಯಾಜ್ಯ ನೀರು ಹರಿಯಬಿಡುತ್ತಿರುವುದು ಬೆಳಕಿಗೆ ಬಂದಿದೆ. 

 ಗ್ರಾ ಪಂ ಅಧ್ಯಕ್ಷ ಪ್ರವೀಣ್ ತುಂಬೆ, ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು, ಸದಸ್ಯರಾದ ಗಣೇಶ್ ಸಾಲಿಯಾನ್, ಅಬ್ದುಲ್ ಅಝೀಝ್, ಮುಹಮ್ಮದ್ ಝಹೂರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಲೆಕ್ಕ ಸಹಾಯಕಿ ಚಂದ್ರಕಲಾ, ಸಿಬಂದಿ ಮೀನಾಕ್ಷಿ, ಪಂಪ್ ಆಪರೇಟರ್ ಶ್ರೀಧರ್, ಬಂಟ್ವಾಳ ಗ್ರಾಮಾಂತರ ಎಎಸ್ಸೈ ರಮೇಶ್, ಮಾಧವ ಕಾರ್ಯಾಚರಣೆಯ ತಂಡದಲ್ಲಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ತುಂಬೆಯಲ್ಲಿ ಹೋಟೆಲ್ ತ್ಯಾಜ್ಯ ನೀರು ಹೆದ್ದಾರಿಗೆ : ತಾ ಪಂ ಇಒ ರಾಜಣ್ಣ ನೇತೃತ್ವದ ಅಧಿಕಾರಿಗಳಿಂದ ಕಾರ್ಯಾಚರಣೆ Rating: 5 Reviewed By: karavali Times
Scroll to Top