ಸಾಲೆತ್ತೂರು ಮದುವೆ ಮನೆಯಲ್ಲಿ ವೇಷ ಹಾಕಿ ಧರ್ಮನಿಂದನೆ ಪ್ರಕರಣ : ಇಬ್ಬರ ದಸ್ತಗಿರಿ - Karavali Times ಸಾಲೆತ್ತೂರು ಮದುವೆ ಮನೆಯಲ್ಲಿ ವೇಷ ಹಾಕಿ ಧರ್ಮನಿಂದನೆ ಪ್ರಕರಣ : ಇಬ್ಬರ ದಸ್ತಗಿರಿ - Karavali Times

728x90

11 January 2022

ಸಾಲೆತ್ತೂರು ಮದುವೆ ಮನೆಯಲ್ಲಿ ವೇಷ ಹಾಕಿ ಧರ್ಮನಿಂದನೆ ಪ್ರಕರಣ : ಇಬ್ಬರ ದಸ್ತಗಿರಿ

ಬಂಟ್ವಾಳ, ಜನವರಿ 10, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ನಿವಾಸಿ ಅಬ್ದುಲ್ ಅಝೀಝ್ ಅವರ ಪುತ್ರಿಯ ವಿವಾಹ ಕಾರ್ಯದ ದಿನ ವರನಿಗೆ ಕೊರಗ ವೇಷ ತೊಟ್ಟು ಕುಣಿದು ಕುಪ್ಪಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಧಾರ್ಮಿಕ ನಿಂದನೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ವಿಟ್ಲ ಪೊಲೀಸರು ಮಂಗಳವಾರ ಇಬ್ಬರು ಆರೋಪಿಗಳಾದ ಕುಂಬಳೆ ಸಮೀಪದ ಮಂಗಳಪಾಡೆ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಅಹ್ಮದ್ ಮುಜಿತಾಬು (28) ಹಾಗೂ ಗಾಳಿಯಡ್ಕ ಬಾಯಾರುಪದವು ನಿವಾಸಿ ಮುಹಮ್ಮದ್ ಕುಂಞÂ ಅವರ ಪುತ್ರ ಮೊಯ್ದೀನ್ ಮುನಿಶ್ (19) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. 

ಜನವರಿ 6 ರಂದು ರಾತ್ರಿ ವಧುವಿನ ಮನೆಯಲ್ಲಿ ಘಟನೆ ನಡೆದಿದ್ದು, ವರ ಕೇರಳದ ಉಪ್ಪಳ ಸಮೀಪದ ಸೋಂಕಳು ನಿವಾಸಿ ಉಮರುಲ್ ಬಾಷಿತ್ ಕೊರಗರನ್ನು ಹೋಲುವ ವೇಷ ಧರಿಸಿ ಬಂದಿದ್ದು, ಆತನ ಸ್ನೇಹಿತರು ಕುಣಿದು ಕುಪ್ಪಳಿಸಿದ ವೀಡಿಯೋ ಬಳಿಕ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಇದು ಬಳಿಕ ಧಾರ್ಮಿಕ ನಿಂದನೆ ಹಾಗೂ ಅವಹೇಳನ ಎಂಬ ರೂಪ ತಳೆದು ಈ ಬಗ್ಗೆ ವಿಟ್ಲಪಡ್ನೂರು ಗ್ರಾಮದ ಕಡಂಬು ನಿವಾಸಿ ಚೇತನ್ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2021 ಕಲಂ 153ಎ, 295 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. 

ಆರೋಪಿಗಳನ್ನು ಬಾಯಾರುಪದವು ಹಾಗೂ ಬೆಟ್ಟಂಪಾಡಿಯಲ್ಲಿ ವಿಟ್ಲ ಪೆÇಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಾಲೆತ್ತೂರು ಮದುವೆ ಮನೆಯಲ್ಲಿ ವೇಷ ಹಾಕಿ ಧರ್ಮನಿಂದನೆ ಪ್ರಕರಣ : ಇಬ್ಬರ ದಸ್ತಗಿರಿ Rating: 5 Reviewed By: karavali Times
Scroll to Top