ಅಂಬೇಡ್ಕರ್ ಫೋಟೋ ನಿರಾಕರಿಸಿದ ರಾಯಚೂರು ನ್ಯಾಯಧೀಶರ ವಿರುದ್ದ ಬಂಟ್ವಾಳದ ಪ್ರಗತಿಪರರಿಂದ ಪ್ರತಿಭಟನೆ - Karavali Times ಅಂಬೇಡ್ಕರ್ ಫೋಟೋ ನಿರಾಕರಿಸಿದ ರಾಯಚೂರು ನ್ಯಾಯಧೀಶರ ವಿರುದ್ದ ಬಂಟ್ವಾಳದ ಪ್ರಗತಿಪರರಿಂದ ಪ್ರತಿಭಟನೆ - Karavali Times

728x90

1 February 2022

ಅಂಬೇಡ್ಕರ್ ಫೋಟೋ ನಿರಾಕರಿಸಿದ ರಾಯಚೂರು ನ್ಯಾಯಧೀಶರ ವಿರುದ್ದ ಬಂಟ್ವಾಳದ ಪ್ರಗತಿಪರರಿಂದ ಪ್ರತಿಭಟನೆ

ಬಂಟ್ವಾಳ, ಫೆಬ್ರವರಿ 01, 2022 (ಕರಾವಳಿ ಟೈಮ್ಸ್) : ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಅಂಬೇಡ್ಕರ್ ಪೆÇೀಟೋ ನಿರಾಕರಿಸಿರುವ ಘಟನೆ ಖಂಡಿಸಿ ಇಲ್ಲಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ಬಿ ಸಿ ರೋಡಿನಲ್ಲಿ ಪ್ರತಿಭಟನೆ ನಡೆಯಿತು. 

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಅವರು, ಸಂವಿಧಾನದ ಅಡಿಯಲ್ಲಿ ಆಯ್ಕೆಯಾದ ನ್ಯಾಯಾದೀಶರು ಸಂವಿಧಾನದ ಆಶಯಗಳನ್ನೇ ಮರೆತು ಅಂಬೇಡ್ಕರ್ ಅವರ ಪೆÇೀಟೋ ನಿರಾಕರಿಸುವ ಮೂಲಕ ತನ್ನ ಮನುವಾದಿ ಧೋರಣೆಯನ್ನು ತೋರಿಸಿಕೊಟ್ಟಿದ್ದಾರೆ. ಅವರನ್ನು ತಕ್ಷಣದಿಂದಲೇ ನ್ಯಾಯದೀಶ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. 

ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ರಾಜಾ ಚೆಂಡ್ತಿಮಾರ್ ಮಾತನಾಡಿ ಇಂತಹ ನ್ಯಾಯಾದೀಶರು ಇಡೀ ನ್ಯಾಯಾಂಗ ವ್ಯವಸ್ಥೆಗೆ ಅವಮಾನವಾಗಿದ್ದು ಈ ದೇಶದ ಸಂವಿಧಾನವನ್ನು ಒಪ್ಪದ ನ್ಯಾಯಾದೀಶರನ್ನು ವಜಾಗೊಳಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದರು. 

ಸಿಪಿಐಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ ಶೇಖರ್ ಮಾತನಾಡಿ ಇಂದು ಎಲ್ಲಾ ಕಡೆಗಳಲ್ಲಿ ಈ ದೇಶದ ಸಂವಿಧಾನವನ್ನು ವಿರೋಧಿಸುವ ವ್ಯಕ್ತಿಗಳು ಹೆಚ್ಚಾಗುತ್ತಿದ್ದಾರೆ. ಪ್ಯಾಶಿಸ್ಟ್ ಆಳ್ವಿಕೆಯ ಭಾಗವಾಗಿ ಇಂತಹ ಘಟನೆಗಳು ನಡೆಯುತ್ತಿದ್ದು ಈ ದೇಶದ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವ ಶಕ್ತಿಗಳನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. 

ದಲಿತ್ ಸೇವಾ ಸಮಿತಿಯ ಸ್ಥಾಪಕಾದ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಜಿಲ್ಲಾದ್ಯಕ್ಷ ಚಂದ್ರಶೇಖರ್ ಯು, ನ್ಯಾಯವಾದಿಗಳಾದ ತುಳಸೀದಾಸ್ ವಿಟ್ಲ, ಮಹಮ್ಮದ್ ಕಬೀರ್, ಹಾತಿಮ್ ಅಹ್ಮದ್, ಮುಹಮ್ಮದ್ ಗಝ್ಝಾಲಿ, ಅಂಬೇಡ್ಕರ್ ಯುವ ವೇದಿಕೆಯ ಮುಖಂಡ ಸತೀಶ್ ಅರಳ, ಜನಪರ ಕವಿ  ಜನಾರ್ದನ ಕೆಸರಗದ್ದೆ, ಪ್ರಜಾಪರಿವರ್ತನಾ ವೇದಿಕೆಯ ಅಧ್ಯಕ್ಷ ಕೃಷ್ಣಪ್ಪ ಪುದ್ದೊಟ್ಟು, ಉಪಾದ್ಯಕ್ಷ ಬಿ ಟಿ ಕುಮಾರ್, ಸಿಪಿಐಎಂ ಮುಖಂಡರುಗಳಾದ ಉದಯ ಕುಮಾರ್ ಬಂಟ್ವಾಳ, ಅಪ್ಪು ನಾಯ್ಕ, ನಾರಾಯಣ ಪೆÇಯಿಲೋಡಿ, ದಲಿತ ಮುಖಂಡರಾದ ನಾರಾಯಣ ನಂದಾವರ, ಉಮೇಶ್ ವಾಮದಪದವು, ಪ್ರಸಾದ್ ಬೊಳ್ಮಾರ್, ಸಾದಿಕ್ ಬಂಟ್ವಾಳ, ಎಐವೈಎಫ್ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಅಂಬೇಡ್ಕರ್ ಫೋಟೋ ನಿರಾಕರಿಸಿದ ರಾಯಚೂರು ನ್ಯಾಯಧೀಶರ ವಿರುದ್ದ ಬಂಟ್ವಾಳದ ಪ್ರಗತಿಪರರಿಂದ ಪ್ರತಿಭಟನೆ Rating: 5 Reviewed By: karavali Times
Scroll to Top