ಸಂತ ಶ್ರೀ ಸೇವಾಲಾಲರ ಚಿಂತನೆಗಳು ಸಾರ್ವತ್ರಿಕ-ಸಾರ್ವಕಾಲಿಕ : ತಹಶೀಲ್ದಾರ್ ರಶ್ಮಿ  - Karavali Times ಸಂತ ಶ್ರೀ ಸೇವಾಲಾಲರ ಚಿಂತನೆಗಳು ಸಾರ್ವತ್ರಿಕ-ಸಾರ್ವಕಾಲಿಕ : ತಹಶೀಲ್ದಾರ್ ರಶ್ಮಿ  - Karavali Times

728x90

15 February 2022

ಸಂತ ಶ್ರೀ ಸೇವಾಲಾಲರ ಚಿಂತನೆಗಳು ಸಾರ್ವತ್ರಿಕ-ಸಾರ್ವಕಾಲಿಕ : ತಹಶೀಲ್ದಾರ್ ರಶ್ಮಿ 

 ಬಂಟ್ವಾಳ, ಫೆಬ್ರವರಿ 15, 2022 (ಕರಾವಳಿ ಟೈಮ್ಸ್) : ಸಂತ ಸೇವಾಲಾಲ್ ಅವರ ಚಿಂತನೆಗಳು ಬಂಜಾರ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಅವರು ಪ್ರತಿಯೊಬ್ಬರೂ ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕಾದ ಮಾನವೀಯ ಮೌಲ್ಯಗಳನ್ನು ಬೋಧಿಸಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಗುಣಗಾನಗೈದರು.

 ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಬಂಟ್ವಾಳ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. 

 ಬಂಜಾರ (ಲಮಾನಿ) ಸಂಘದ ಜಿಲ್ಲಾ ಪ್ರತಿನಿಧಿ ಶ್ರೀನಿವಾಸ್ ನಾಯ್ಕ ಮಾತನಾಡಿ, ಸುಮಾರು 280 ವರ್ಷಗಳ ಹಿಂದೆ ಸಂತ ಸೇವಾಲಾಲ್ ಅವರು ಸಾರಿದ ತತ್ವಗಳು ಇಂದಿಗೂ ಪ್ರಸ್ತುತ. ಅವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತ ಸಮಾಜದ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದರು ಎಂದರು. 

 ಈ ಸಂದರ್ಭ ಕೇಂದ್ರ ಶಿರಸ್ತೇದಾರ್ ನರೇಂದ್ರ ನಾಥ್ ಮಿತ್ತೂರು, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ಆರ್ ವಿಜಯ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ಸೇವಾಲಾಲ ಸಂಘದ ಸಲಹಾ ಸಮಿತಿ ಸದಸ್ಯರಾದ ಲೋಕನಾಯ್ಕ, ಕರಿಬಸಪ್ಪ ನಾಯ್ಕ, ರಾಜು ಲಮಾನಿ, ತಾಲೂಕು ಕಚೇರಿ ಸಿಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಸ್ವಾಗತಿಸಿ, ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸಂತ ಶ್ರೀ ಸೇವಾಲಾಲರ ಚಿಂತನೆಗಳು ಸಾರ್ವತ್ರಿಕ-ಸಾರ್ವಕಾಲಿಕ : ತಹಶೀಲ್ದಾರ್ ರಶ್ಮಿ  Rating: 5 Reviewed By: karavali Times
Scroll to Top