ಮಂಗಳೂರು ಅಂಚೆ ವಿಭಾಗದಿಂದ ಆಧಾರ್ ವಿಶೇಷ ಅಭಿಯಾನ ಆಯೋಜನೆಗೆ ವಿವಿಧ ಸಂಸ್ಥೆಗಳಿಗೆ ಅವಕಾಶ - Karavali Times ಮಂಗಳೂರು ಅಂಚೆ ವಿಭಾಗದಿಂದ ಆಧಾರ್ ವಿಶೇಷ ಅಭಿಯಾನ ಆಯೋಜನೆಗೆ ವಿವಿಧ ಸಂಸ್ಥೆಗಳಿಗೆ ಅವಕಾಶ - Karavali Times

728x90

16 March 2022

ಮಂಗಳೂರು ಅಂಚೆ ವಿಭಾಗದಿಂದ ಆಧಾರ್ ವಿಶೇಷ ಅಭಿಯಾನ ಆಯೋಜನೆಗೆ ವಿವಿಧ ಸಂಸ್ಥೆಗಳಿಗೆ ಅವಕಾಶ

ಮಂಗಳೂರು, ಮಾರ್ಚ್ 16, 2022 (ಕರಾವಳಿ ಟೈಮ್ಸ್) : ಮಂಗಳೂರು ಅಂಚೆ ವಿಭಾಗದಿಂದ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ  ಜೋಡಿಸುವ  ವಿಶೇಷ ಶಿಬಿರದ ಅಯೋಜನೆ ಬಗ್ಗೆ ಅವಕಾಶ ಒದಗಿಸಲಾಗುತ್ತಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಮಂದಿಯ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಜೋಡಣೆ ಆಗದಿರುವುದರಿಂದ ಸರಕಾರದ ಸವಲತ್ತುಗಳನ್ನು ಪಡೆಯಲು ಕಷ್ಟ ಸಾಧ್ಯವಾಗಿರುತ್ತದೆ. ಸರಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡುವುದು ಅವಶ್ಯಕವಾಗಿದೆ. 

ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಕನಿಷ್ಠ  50 ಜನರಿಗೆ ಈ ಸೇವೆ ಅವಶ್ಯಕವಿರುವ ಸಂಸ್ಥೆಗಳು,  ಕಾಲೇಜುಗಳು, ಕಂಪೆನಿಗಳು, ಇಲಾಖೆಗಳು ತಮ್ಮ ಆವರಣದಲ್ಲಿಯೇ ಈ ಸೇವೆ ಪಡೆಯಲು, ಶಿಬಿರಗಳನ್ನು ಅಯೋಜಿಸಲು ಅಂಚೆ ಇಲಾಖೆಯ ಮಂಗಳೂರು ವಿಭಾಗ ಅವಕಾಶ ಮಾಡಿಕೊಡುತ್ತಿದೆ. 

ಶಿಬಿರ ಆಯೋಜಿಸಲು ಉದ್ದೇಶಿಸುವ ಸಂಸ್ಥೆಗಳು ಅರವಿಂದ (ಮೊ 9686697814) ಅಥವಾ ಮಂಗಳೂರು ಅಂಚೆ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯ ದೂರವಾಣಿ ಸಂಖ್ಯೆ 0824-2218400ನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

ಪ್ರಸ್ತುತ ವಿಶೇಷ ಶಿಬಿರದಲ್ಲಿ ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆ  ಜೋಡಿಸದೇ ಇರುವವರಿಗೆ, ಪ್ರಸ್ತುತ ಜೋಡಣೆಗೊಂಡಿರುವ ಮೊಬೈಲ್ ಸಂಖ್ಯೆ ಬದಲಿಗೆ ಹೊಸ ಮೊಬೈಲ್ ಸಂಖ್ಯೆ ಜೋಡಣೆ ಮಾಡಲು, ಪ್ರಸ್ತುತ ಆಧಾರ್ ಕಾರ್ಡಿನಲ್ಲಿ ಪೆÇೀಷಕರ ಮೊಬೈಲ್ ಸಂಖ್ಯೆ ಜೋಡಿಸಿದ್ದು, ಇದೀಗ ತಮ್ಮದೇ ಮೊಬೈಲ್ ಸಂಖ್ಯೆಯನ್ನು ಸೇರಿಸಲು ಬಯಸುವವರಿಗೆ, ಪ್ರಸ್ತುತ ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆಯನ್ನು ಜೋಡಿಸದೇ ಇದ್ದು, ಆಯುಷ್ಮಾನ್ ಕಾರ್ಡ್, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡಿಸುವಿಕೆ, ಇ-ಶ್ರಮ್ ಕಾರ್ಡ್ ಮಾಡಿಸುವುದು ಇತ್ಯಾದಿ ಅಗತ್ಯತೆ  ಇರುವವರು, ಇಪಿಎಫ್‍ಒದಿಂದ ಪಿಂಚಣಿ ಪಡೆಯುವವರು ಇ-ನಾಮಿನೇಶನ್ ಸಲ್ಲಿಸಲು, ವಿವಿಧ ನೇರ ನಗದು ವರ್ಗಾವಣೆ ಯೋಜನೆಗಳ ಫಲಾನುಭವಿಗಳು ತಮ್ಮ ಆಧಾರ್ ಸೀಡಿಂಗ್ ಆದ ಬ್ಯಾಂಕ್ ಖಾತೆ ಯಾವುದೆಂದು ತಿಳಿಯಲು, ಡಿಜಿಲಾಕರ್ ಸೌಲಭ್ಯ ಪಡೆಯಲು, ಆನ್ ಲೈನ್ ನಲ್ಲಿಯೇ ಆಧಾರ್ ಸಂಬಂಧಿತ ಸೇವೆಗಳಾದ ಹೆಸರು, ವಿಳಾಸ, ಹುಟ್ಟಿದ ದಿನಾಂಕ ತಿದ್ದುಪಡಿಯ ಸೇವೆಗಳನ್ನು ಪಡೆಯಬಯಸುವವರು, ಇ-ಆಧಾರ್ ಕಾರ್ಡನ್ನು ಡೌನ್ ಲೋಡ್ ಮಾಡಿಕೊಳ್ಳಬಯಸುವವರು, ಈಗಿನ ಆಧಾರ್ ಕಾರ್ಡಿನಲ್ಲಿ ಕೇವಲ ಹುಟ್ಟಿದ ವರ್ಷ ನಮೂದಾಗಿದ್ದು, ಹುಟ್ಟಿದ ದಿನದ ಮಾಹಿತಿ ದಿನಾಂಕ ಸಹಿತವಾಗಿ ನಮೂದಾಗಿರುವ ಆಧಾರ್ ಕಾರ್ಡನ್ನು ಡೌನ್ ಲೋಡ್ ಮಾಡಬಯಸುವವರು, ಈ ಸೇವೆ ಪಡೆಯಲು ನಿಮ್ಮ ಆಧಾರ್ ಸಂಖ್ಯೆ ಹಾಗೂ ಜೋಡಿಸಬೇಕಾಗಿರುವ ಮೊಬೈಲ್ ಸಿಮ್ ಹೊಂದಿರುವ ಮೊಬೈಲಿನೊಂದಿಗೆ ಮಾತ್ರ ಶಿಬಿರಕ್ಕೆ ಹಾಜರಾದರೆ ಸಾಕಾಗುವುದು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಅಂಚೆ ವಿಭಾಗದಿಂದ ಆಧಾರ್ ವಿಶೇಷ ಅಭಿಯಾನ ಆಯೋಜನೆಗೆ ವಿವಿಧ ಸಂಸ್ಥೆಗಳಿಗೆ ಅವಕಾಶ Rating: 5 Reviewed By: karavali Times
Scroll to Top