ನವೆಂಬರ್ 27ರಂದು ವಿಧಾನಸಭೆ ಚುನಾವಣೆ ಸಾಧ್ಯತೆ : ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಸುಳಿವು ನೀಡಿದ ಡಿಕೇಶಿ  - Karavali Times ನವೆಂಬರ್ 27ರಂದು ವಿಧಾನಸಭೆ ಚುನಾವಣೆ ಸಾಧ್ಯತೆ : ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಸುಳಿವು ನೀಡಿದ ಡಿಕೇಶಿ  - Karavali Times

728x90

29 March 2022

ನವೆಂಬರ್ 27ರಂದು ವಿಧಾನಸಭೆ ಚುನಾವಣೆ ಸಾಧ್ಯತೆ : ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಸುಳಿವು ನೀಡಿದ ಡಿಕೇಶಿ 

 ನಾಳೆಯೇ ಚುನಾವಣೆ ನಡೆದರೂ ಎದುರಿಸಲು ಕೈ ಪಾಳಯ ಸಿದ್ದ, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ : ಕೆಪಿಸಿಸಿ ಅಧ್ಯಕ್ಷರ ಉವಾಚ 

 
ಬೆಂಗಳೂರು, ಮಾರ್ಚ್ 30, 2022 (ಕರಾವಳಿ ಟೈಮ್ಸ್) : ರಾಜ್ಯ ಕಾಂಗ್ರೆಸ್ಸಿನಲ್ಲಿ ಯಾವುದೇ ಬಣಗಳಿಲ್ಲ. ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ವಿಧಾನಸಭೆ ಚುನಾವಣೆಯನ್ನೂ ಸಾಮೂಹಿಕ ನಾಯಕತ್ವದಲ್ಲೇ ಎದುರಿಸುತ್ತೇವೆ. ರಾಜ್ಯ​ದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದ್ದು, ಎಲ್ಲಾ ಮುಂಚೂಣಿ ಘಟಕಗಳ ಬಲವರ್ಧನೆಗೆ ಕ್ರಮ ಕೈಗೊಳ್ಳ​ಲಾ​ಗು​ತ್ತಿ​ದೆ. ಕೇಡರ್‌ ಪಾರ್ಟಿ ಮಾಡಲೂ ಆದ್ಯತೆ ನೀಡ​ಲಾ​ಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

 ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಮೂಲಗಳ ಪ್ರಕಾರ ರಾಜ್ಯದಲ್ಲಿ ನವೆಂಬರ್ 27ಕ್ಕೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಲು ಬಿಜೆಪಿ ಸಿದ್ದತೆ ನಡೆಸುತ್ತಿರುವುದು ತಿಳಿದು ಬಂದಿದೆ. ಯಾವಾಗ ಚುನಾವಣೆ ನಡೆಸಿದರೂ ಎದುರಿಸಲು ಕಾಂಗ್ರೆಸ್‌ ಪಕ್ಷ ಸಿದ್ಧವಾಗಿದೆ ಎಂದರು. ನಾಳೆಯೇ ಚುನಾವಣೆ ನಡೆದರೂ ನಾವು ಸಿದ್ಧವಾಗಿದ್ದೇವೆ. ಅವಧಿಪೂರ್ವ ಚುನಾವಣೆ ಬಗ್ಗೆ ಮಾಹಿತಿ ಬಂದಿದೆ. ಅವರು ಯಾವಾಗ ಬೇಕಾದರೂ ಚುನಾವಣೆ ಮಾಡಲಿ, ಈ ತಿಂಗಳು ಮಾಡಲಿ ಅಥವಾ ನಾಳೆಯೇ ಮಾಡಲಿ. ನವೆಂಬರ್‌ 27ಕ್ಕೆ ಚುನಾವಣೆ ದಿನಾಂಕ ಪ್ರಕಟಿಸಲಿ. ಎಲ್ಲದಕ್ಕೂ ಕಾಂಗ್ರೆಸ್‌ ಪಕ್ಷ ಸರ್ವ ರೀತಿಯಲ್ಲೂ ಸಜ್ಜಾಗಿದೆ ಎನ್ನುವ ಮೂಲಕ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಬಗ್ಗೆ ಮುನ್ಸೂಚನೆ ನೀಡಿದರು.  

ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆಯಲ್ಲಿ ಹೊಸ​ಬ​ರಿಗೆ ಟಿಕೆಟ್‌ ನೀಡ​ಲಾಗು​ವುದು. ಜತೆಗೆ ಸ್ಥಳೀ​ಯ​ವಾಗಿ ಪಕ್ಷಕ್ಕಾಗಿ ದುಡಿ​ದ​ವ​ರಿಗೆ ಆದ್ಯತೆ ನೀಡ​ಲಾ​ಗು​ವುದು ಎಂದು ಇದೇ ವೇಳೆ ಕೆಪಿ​ಸಿಸಿ ಅಧ್ಯಕ್ಷರು ಹೇಳಿ​ದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ನವೆಂಬರ್ 27ರಂದು ವಿಧಾನಸಭೆ ಚುನಾವಣೆ ಸಾಧ್ಯತೆ : ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಸುಳಿವು ನೀಡಿದ ಡಿಕೇಶಿ  Rating: 5 Reviewed By: karavali Times
Scroll to Top