ತುಳುನಾಡಿನ ಕಲೆ-ಸಾಹಿತ್ಯ, ಸಂಸ್ಕøತಿಗಳು ಜಾತಿ ಬೇಧ ಮರೆತು ನಾಡಹಬ್ಬವಾಗಿ ಆಚರಿಸಲ್ಪಡುತ್ತಿರುವುದು ತುಳುವರ ಹೆಮ್ಮೆ : ಮಾಜಿ ಸಚಿವ ರೈ - Karavali Times ತುಳುನಾಡಿನ ಕಲೆ-ಸಾಹಿತ್ಯ, ಸಂಸ್ಕøತಿಗಳು ಜಾತಿ ಬೇಧ ಮರೆತು ನಾಡಹಬ್ಬವಾಗಿ ಆಚರಿಸಲ್ಪಡುತ್ತಿರುವುದು ತುಳುವರ ಹೆಮ್ಮೆ : ಮಾಜಿ ಸಚಿವ ರೈ - Karavali Times

728x90

30 April 2022

ತುಳುನಾಡಿನ ಕಲೆ-ಸಾಹಿತ್ಯ, ಸಂಸ್ಕøತಿಗಳು ಜಾತಿ ಬೇಧ ಮರೆತು ನಾಡಹಬ್ಬವಾಗಿ ಆಚರಿಸಲ್ಪಡುತ್ತಿರುವುದು ತುಳುವರ ಹೆಮ್ಮೆ : ಮಾಜಿ ಸಚಿವ ರೈ

ಬಂಟ್ವಾಳ : ಎಪ್ರಿಲ್ 30, 2022 (ಕರಾವಳಿ ಟೈಮ್ಸ್) : ತುಳುನಾಡಿನ ಕಲೆ-ಸಾಹಿತ್ಯ, ಸಂಸ್ಕøತಿಗಳು ಜಾತಿ-ಧರ್ಮ-ಭಾಷೆ-ವರ್ಗಗಳ ವ್ಯಾಪ್ತಿ ಮೀರಿದ್ದಾಗಿದ್ದು, ಇಲ್ಲಿನ ಸಂಸೃತಿಯ ಸೊಬಗಿನಲ್ಲಿ ಎಲ್ಲ ವರ್ಗದ ಜನ ಬೇಧ ಮರೆತು ಭಾಗವಹಿಸುವ ಮೂಲಕ ನಾಡ ಹಬ್ಬವಾಗಿ ಆಚರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಕೊಂಡಾಡಿದರು. 

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಿ ಸಿ ರೋಡು ಇದರ ಆಶ್ರಯದಲ್ಲಿ ಒಂದು ತಿಂಗಳ ಕಾಲ ಬಿ ಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುವ “ಕರಾವಳಿ ಕಲೋತ್ಸವ-2022” ಕಾರ್ಯಕ್ರಮಕ್ಕೆ ಶುಕ್ರವಾರ ಇಲ್ಲಿನ ಕೀರ್ತಿಶೇಷ ಏರ್ಯ ಲಕ್ಮೀನಾರಾಯಣ ಆಳ್ವ ವೇದಿಕೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ತುಳುನಾಡು ಅತ್ಯಂತ ಎಲ್ಲ ಕ್ಷೇತ್ರ-ವಿಭಾಗಗಳಲ್ಲೂ ಅತ್ಯಂತ ಸುಂದರ, ಸೊಬಗನ್ನು ಹೊಂದಿದ್ದು, ಇಲ್ಲಿ ಯಾವುದೇ ಭಿನ್ನತೆಗೆ ಅವಕಾಶ ಇಲ್ಲ ಎಂದರು. 

ಧಾರ್ಮಿಕ ಹಾಗೂ ಸಾಂಸ್ಕøತಿಕ ಕ್ಷೇತ್ರಕ್ಕೂ ಇತ್ತೀಚೆಗೆ ಕೆಲ ಕಿಡಿಗೇಡಿಗಳು ಭಿನ್ನತೆಯನ್ನು ತುರುಕಿಸುವ ಪ್ರಯತ್ನ ನಡೆಸುತ್ತಿದ್ದು ಇದು ಅಕ್ಷಮ್ಯ, ಇದಕ್ಕೆ ತುಳುನಾಡಿನ ಜನ ಅವಕಾಶ ನೀಡುವುದಿಲ್ಲ ಎಂದರು. ತುಳುನಾಡಿನ ಕಲೆ ಸಾಹಿತ್ಯಕ್ಕೆ ಜಾತಿ-ಧರ್ಮದ ವ್ಯಾಪ್ತಿ ಇಲ್ಲ. ಸಾಂಸ್ಕ್ರತಿಕ, ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಉತ್ಸವ ರೀತಿಯಲ್ಲಿ ವರ್ಷ ಪೂರ್ತಿ ನಡೆಯುತ್ತಿರುವುದು ಇಲ್ಲಿನ ಸಂಸ್ಕøತಿ ಸೊಬಗಿಗೆ ಸಾಕ್ಷಿಯಾಗಿದೆ ಎಂದರು. 

ಇದಕ್ಕೂ ಮೊದಲು ಬಿ ಸಿ ರೋಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರಂಭಗೊಂಡ ಕಲೋತ್ಸವ ದಿಬ್ಬಣಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಚಾಲನೆ ನಿಡಿದರು. ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ, ಬಾಲಪ್ರತಿಭೆಗಳಾದ ಝೀ ಕನ್ನಡ ಸರಿಗಮಪ ಹಾಗೂ ಡ್ಯಾನ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಕುಮಾರಿ ಕ್ಷಿತಿ ಕೆ ರೈ ಧರ್ಮಸ್ಥಳ ಹಾಗೂ ಸಂಗೀತ, ಯಕ್ಷಗಾನ, ಭರತನಾಟ್ಯ, ಜಾನಪದ, ನಾಟಕ ಕ್ಷೇತ್ರದ ಕುಮಾರಿ ಶೃತಿ ದೇವಾಡಿಗ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಇದೇ ಸಂದರ್ಭ ಚಿಣ್ಣರಲೋಕ ಸೇವಾಶ್ರಮ ನಿರ್ಮಾಣದ ನೀಲನಕ್ಷೆ ಮಾಜಿ ಸಚಿವ ಬಿ ರಮಾನಾಥ ರೈ ಬಿಡುಗಡೆ ಮಾಡಿದರು. 

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ಉದ್ಯಮಿ ದೇವಿಚರಣ್ ಶೆಟ್ಟಿ, ಚಿಣ್ಣರ ಅಧ್ಯಕ್ಷೆ ಜನ್ಯಪ್ರಸಾದ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕಲಾಮೇಳದ ಪ್ರಧಾನ ಸಂಚಾಲಕ ಮೋಹನ್ ದಾಸ ಕೊಟ್ಟಾರಿ, ಸ್ವಾಗತ ಸಮಿತಿ ಅಧ್ಯಕ್ಷ ಆಶೋಕ್ ಶೆಟ್ಟಿ ಸರಪಾಡಿ, ಕರಾವಳಿ ದಫ್ ಸಂಚಾಲಕ ಮಹಮ್ಮದ್ ನಂದಾವರ, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸಂಸ್ಥೆಯ ಮಂಗಳೂರು ಸಂಚಾಲಕಿ ವಿಶಾಲಾಕ್ಷಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕಿರು ತುಳು ಚಿತ್ರನಟ ಚೇತಕ್ ಪೂಜಾರಿ, ದಿನೇಶ್ ರಾಯಿ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ತುಳುನಾಡಿನ ಕಲೆ-ಸಾಹಿತ್ಯ, ಸಂಸ್ಕøತಿಗಳು ಜಾತಿ ಬೇಧ ಮರೆತು ನಾಡಹಬ್ಬವಾಗಿ ಆಚರಿಸಲ್ಪಡುತ್ತಿರುವುದು ತುಳುವರ ಹೆಮ್ಮೆ : ಮಾಜಿ ಸಚಿವ ರೈ Rating: 5 Reviewed By: karavali Times
Scroll to Top