ಜೂನ್ 1 ರಿಂದ ಶಂಭೂರು ಡ್ಯಾಂನಲ್ಲಿ ಒಳ ಹರಿವು ಹೆಚ್ಚಳ ಸಾಧ್ಯತೆ : ನದೀ ತೀರದ ಜನರಿಗೆ ಎಎಂಆರ್ ಅಧಿಕಾರಿಗಳಿಂದ ಎಚ್ಚರಿಕೆ - Karavali Times ಜೂನ್ 1 ರಿಂದ ಶಂಭೂರು ಡ್ಯಾಂನಲ್ಲಿ ಒಳ ಹರಿವು ಹೆಚ್ಚಳ ಸಾಧ್ಯತೆ : ನದೀ ತೀರದ ಜನರಿಗೆ ಎಎಂಆರ್ ಅಧಿಕಾರಿಗಳಿಂದ ಎಚ್ಚರಿಕೆ - Karavali Times

728x90

31 May 2022

ಜೂನ್ 1 ರಿಂದ ಶಂಭೂರು ಡ್ಯಾಂನಲ್ಲಿ ಒಳ ಹರಿವು ಹೆಚ್ಚಳ ಸಾಧ್ಯತೆ : ನದೀ ತೀರದ ಜನರಿಗೆ ಎಎಂಆರ್ ಅಧಿಕಾರಿಗಳಿಂದ ಎಚ್ಚರಿಕೆ

ಬಂಟ್ವಾಳ, ಮೇ 31, 2022 (ಕರಾವಳಿ ಟೈಮ್ಸ್) : ತಾಲೂಕಿನ ಶಂಭೂರು ಗ್ರಾಮದ ಮಡಿಮುಗೇರಿನಲ್ಲಿ ಎಎಂಆರ್ ಪವರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಎಎಂಆರ್ ಅಣೆಕಟ್ಟಿನಲ್ಲಿ ಮಳೆಯ ಪ್ರಮಾಣಕ್ಕನುಗುಣವಾಗಿ ಜೂನ್ 1 ರಿಂದ ನೀರು ಶೇಖರಿಸಲು ನಿರ್ಧರಿಸಲಾಗಿದೆ. ಮಳೆಗಾಲದಲ್ಲಿ ನದಿ ನೀರಿನ ಮಟ್ಟ ಏರುವುದರಿಂದ ನದಿ ತೀರದ ಹಾಗೂ ಆಸುಪಾಸಿನ ಜನರು ಸೂಕ್ತವಾದ ಮುಂಜಾಗ್ರತೆ ಕೈಗೊಳ್ಳುವಂತೆ ಎಎಂಆರ್ ಸಂಸ್ಥೆ ಸೂಚಿಸಿದೆ. 

ಎಎಂಆರ್ ಅಣೆಕಟ್ಟಿನಲ್ಲಿ ಶೇಖರಿಸಿದ ನೀರನ್ನು ವಿದ್ಯುಚ್ಛಕ್ತಿ ಉತ್ಪಾದನೆಗಾಗಿ ಬಳಸಿ ಬಳಿಕ ಅದೇ ನೀರನ್ನು ಮತ್ತೆ ನದಿಗೆ ಬಿಡಲಾಗುತ್ತದೆ. ಮಳೆಗಾಲ ಆರಂಭದ ನಂತರ ನೀರಿನ ಒಳಹರಿವು ಹೆಚ್ಚಾಗುವುದರಿಂದ ಅಣೆಕಟ್ಟಿನ ಗೇಟನ್ನು ತೆರೆದು ಹೊರಬಿಡುವ ನೀರಿನ ಪ್ರಮಾಣದಲ್ಲೂ ಏರಿಕೆಯಾಗುವುದರಿಂದ ನದಿಯ ಅಣಿಕಟ್ಟು ಕೆಳಭಾಗದ ಹಾಗೂ ಮೇಲ್ಭಾಗದ ಜಾಗಗಳಲ್ಲಿ ನೀರಿನ ಮಟ್ಟವು ಮಳೆಯ ಪ್ರಮಾಣಕ್ಕನುಗುಣವಾಗಿ ಏರಿಳತವಾಗುವುದರಿಂದ ನದಿ ದಡದಲ್ಲಿ ವಾಸಿಸುವ ಜನರು ಮತ್ತು ಅವರ ಸಾಕುಪ್ರಾಣಿಗಳ ಸಂರಕ್ಷಣೆಯ ವಿಷಯವಾಗಿ ಜನರಿಗೆ ಮುಂಜಾಗ್ರತೆ ವಹಿಸಲು ಸೂಕ್ತ ನಿರ್ದೇಶನ ನೀಡುವಂತೆ ಎಎಂಆರ್ ಅಧಿಕಾರಿಗಳು ಬಂಟ್ವಾಳ ತಹಶೀಲ್ದಾರ್ ಅವರಿಗೆ ಲಿಖಿತವಾಗಿ ಕೋರಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜೂನ್ 1 ರಿಂದ ಶಂಭೂರು ಡ್ಯಾಂನಲ್ಲಿ ಒಳ ಹರಿವು ಹೆಚ್ಚಳ ಸಾಧ್ಯತೆ : ನದೀ ತೀರದ ಜನರಿಗೆ ಎಎಂಆರ್ ಅಧಿಕಾರಿಗಳಿಂದ ಎಚ್ಚರಿಕೆ Rating: 5 Reviewed By: karavali Times
Scroll to Top