ಜನರ ಪ್ರಾಣಕ್ಕಾಗಿ ಪ್ರಾಣವಾಯು ಬೇಕು, ಪ್ರಾಣವಾಯುಗಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಡಬೇಕು - Karavali Times ಜನರ ಪ್ರಾಣಕ್ಕಾಗಿ ಪ್ರಾಣವಾಯು ಬೇಕು, ಪ್ರಾಣವಾಯುಗಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಡಬೇಕು - Karavali Times

728x90

4 June 2022

ಜನರ ಪ್ರಾಣಕ್ಕಾಗಿ ಪ್ರಾಣವಾಯು ಬೇಕು, ಪ್ರಾಣವಾಯುಗಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಡಬೇಕು

ಡಿ.ಎಸ್.ಐ.ಬಿ. ಪಾಣೆಮಂಗಳೂರು

 


ವನಮಹೋತ್ಸವ ಎಂದೂ ಕರೆಯುವ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್‌ 5ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. 1974ರಿಂದ ಆಚರಿಸಲ್ಪಡುತ್ತಿರುವ ಪರಿಸರ ದಿನದಂದು ಪರಿಸರ ಕುರಿತು ಜಾಗೃತಿ ಮೂಡಿಸುವುದು, ಪರಿಸರವನ್ನು ಸಂರಕ್ಷಿಸುವ ಕಾರ್ಯಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ವಿಶ್ವಸಂಸ್ಥೆ ಹೊಂದಿದೆ. 

 ಇಂದು ಕೃಷಿ, ತೋಟಗಾರಿಕೆ ಮಾಡೋಣ ಅಂದರು ಸರಿಯಾದ ಜಾಗ ಕೂಡ ಸಿಗುತ್ತಿಲ್ಲ ಕಟ್ಟಡಗಳೆ ತಲೆ ಎತ್ತಿ ನಿಂತಿವೆ. ಕಟ್ಟಡಗಳ ಕಲುಷಿತವಾದ ನೀರುಗಳಿಂದಲೂ ಪರಿಸರ, ಕೃಷಿ ಭೂಮಿ ಕೆಡುತ್ತಿವೆ. ರೈತ ಕೃಷಿ ಭೂಮಿ ನಾಶದಿಂದಾಗಿ ಆತ್ಮಹತ್ಯೆಗೂ ದಾರಿಯಾಗುತ್ತಿವೆ. ಮಾ

ಮಾನವ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳು ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತಿಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. 

 ಜಾಗತಿಕವಾಗಿ ಏರುತ್ತಿರುವ ತಾಪಮಾನ, ಇಳಿಮುಖವಾಗುತ್ತಿರುವ ಮಳೆ, ಪರಿಸರ ಮಾಲಿನ್ಯಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತಿದೆ. ಕೈಗಾರಿಕೀಕರಣ, ನಗರೀಕರಣ ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ ಜತೆಗೆ ಪರಿಸರ ಮಾಲಿನ್ಯದ ಪ್ರಮಾಣ, ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರ ಬಗ್ಗೆ ಜನರಿಗೆ ಅರಿವಿದ್ದರೂ ಕೈಗೊಳ್ಳುವ ಜಾಗೃತಿ ಕ್ರಮಗಳು ಕಡಿಮೆ. 

 ವಿಶ್ವಪರಿಸರ ದಿನಾಚರಣೆಗೆ ವಿಶ್ವಾದ್ಯಂತ ಸಾಕಷ್ಟು ಬೆಂಬಲ ಸಿಗುತ್ತಿದೆ. ಸಾರ್ವಜನಿಕರು, ಲಾಭ ರಹಿತ ಸಂಸ್ಥೆಗಳು, ಸರಕಾರಗಳಿಂದ ಬೆಂಬಲ ವ್ಯಕ್ತವಾಗುತ್ತದೆ. ಈ ದಿನದಂದು ಹಲವಾರು ಜಾಗೃತಿ ಕಾರ್ಯಕ್ರಮಗನ್ನು ಹಮ್ಮಿಕೊಳ್ಳಲಾಗುತ್ತದೆ. ಕಡಲ ತೀರದ ಸ್ವಚ್ಛತೆ ನಿರ್ವಹಣೆ, ಸಂಗೀತ ಕಾರ್ಯಕ್ರಮ, ವಸ್ತುಪ್ರದರ್ಶನ, ಚಲನಚಿತ್ರೋತ್ಸವ, ಸಮುದಾಯ ಕಾರ್ಯಕ್ರಮಗಳು ಅಲ್ಲದೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ಪರಿಸರ ದಿನಾಚರಣೆಯ ಮಹತ್ವದ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ. 

 ಪರಿಸರ ಸ್ನೇಹಿಯೆಂದು ಗಿಡವೊಂದು ನೆಡುವ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಪ್ರತಿಯೊಂದು ನಿಮಿಷ ಆ ಫೋಟೋಗೆ ಎಷ್ಟು ಲೈಕ್, ಕಾಮೆಂಟ್ ಗಳು ಬಂದಿವೆಂದು ನೋಡುವ ಹಾಗೆ ನೆಟ್ಟ ಗಿಡವನ್ನು ಕೂಡ ನೋಡುತ್ತಲೇ ಇರಬೇಕು. ಇನ್ನೂ ಗಿಡಗಳನ್ನು ರಸ್ತೆ ಬದಿ ಅಥವಾ ಗಿಡ ಕಳೆದುಕೊಳ್ಳುವ ಸಾಧ್ಯತೆ ಇರುವಂತಹ ಸ್ಥಳಗಳಲ್ಲಿ ನೆಡಬೇಡಿ ಮುಂದೆ ಮರವಾಗಿ ಬೆಳೆದಾಗ ಕಡಿಯಬೇಕಾಗಿ ಬರುವುದು ಅತೀ ಹೆಚ್ಚು ಅದಕ್ಕಾಗಿ ಸೂಕ್ತ ಸ್ಥಳಗಳಲ್ಲಿ ಬೆಳೆಸಿರಿ. ಯಾವ ವಸ್ತುವನ್ನು ಪುನರ್ಬಳಕೆ ಮಾಡಲು ಸಾಧ್ಯವಿಲ್ಲವೋ ಆ ವಸ್ತುವನ್ನು ಬಳಸಲೇಬೇಡಿ. ಪ್ರಕೃತಿಯನ್ನು ನಮ್ಮ ಹಿರಿಯರು ನಮಗಾಗಿ ಬಿಟ್ಟುಕೊಟ್ಟಿದ್ದಾರೆ, ನಾವೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಳಿಸಬೇಕಾಗಿದೆ. ಪರಿಸರದ ಸಮಸ್ಯೆಗಳನ್ನು ನಾವು ಪರಿಹರಿಸಿದರೆ, ನಮ್ಮ ನೂರಾರು ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. ಇಷ್ಟು ದಿನ ಮಾನವ ಪರಿಸರದ ವಿರುದ್ಧವೇ ವರ್ತಿಸಿದ್ದಾನೆ, ಆದರೆ ಇನ್ನು ಮುಂದೆ ಪರಿಸರಕ್ಕಾಗಿ ತನ್ನ ವರ್ತನೆಯ ವಿರುದ್ಧವೇ ವರ್ತಿಸಬೇಕಿದೆ. ಪರಿಸರದಲ್ಲಿ ಸಾಕಷ್ಟು ವಾಯುಮಾಲಿನ್ಯವಿದೆ, ಅದಕ್ಕೆ ನಮ್ಮ ಶ್ವಾಸಕೋಶದ ಹೊರತು ಬೇರೆ ಎಲ್ಲೂ ಇರಲು ಜಾಗವಿಲ್ಲ. ನಾವು ಆಯ್ಕೆ ಮಾಡುವ ಪ್ರತಿಯೊಂದು ವಸ್ತುವಿನ ಮೂಲಕ ಈ ಪರಿಸರವನ್ನು ನಾವು ರಕ್ಷಿಸಬಹುದು. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗವಷ್ಟೇ. ಎ

ಎರಡು ಮಾತು ಹೇಳಿ ನಾಲ್ಕು ಮಂದಿಯ ಚಪ್ಪಾಲೆಗೆ ದೊಡ್ಡವನಾದರೆ ಸಾಲದು. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ನಿತ್ಯ ನಿರಂತರವಾಗಿರಬೇಕು. ಅವಾಗ ಮಾತ್ರ ಪರಿಸರ ದಿನಾಚರಣೆಗೊಂದು ಅರ್ಥ ಸಿಗುವುದು. ಮನೆಗೊಂದು ಮರ, ಮನಸ್ಸಿಗೊಂದು ನೆಮ್ಮದಿ ಗಿಡ ನೆಟ್ಟು ಧರೆಯ ಗಟ್ಟಿತನವನ್ನು ಸಾರೋಣ.... ಜನರ ಪ್ರಾಣಕ್ಕಾಗಿ ಪ್ರಾಣವಾಯು ಬೇಕು, ಪ್ರಾಣವಾಯುವಿಗಾಗಿ ಪ್ರತಿಯೊಬ್ಬರು ಒಂದು ಗಿಡ ನೆಡಬೇಕು. ಈ ಭೂಮಿಗಿಂತ ಅತ್ಯುತ್ತಮವಾದ ಸ್ಥಳ ಬೇರೊಂದಿಲ್ಲ, ಆದ್ದರಿಂದ ಶ್ರಮವಾದರೂ ಸರಿಯೇ ನಮ್ಮ ಭೂಮಿಯನ್ನು ರಕ್ಷಿಸೋಣ... ಸರ್ವರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು. 

  • Blogger Comments
  • Facebook Comments

0 comments:

Post a Comment

Item Reviewed: ಜನರ ಪ್ರಾಣಕ್ಕಾಗಿ ಪ್ರಾಣವಾಯು ಬೇಕು, ಪ್ರಾಣವಾಯುಗಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಡಬೇಕು Rating: 5 Reviewed By: karavali Times
Scroll to Top