ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ : ಸಾವಿರಾರು ರೂಪಾಯಿ ನಷ್ಟ - Karavali Times ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ : ಸಾವಿರಾರು ರೂಪಾಯಿ ನಷ್ಟ - Karavali Times

728x90

1 July 2022

ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ : ಸಾವಿರಾರು ರೂಪಾಯಿ ನಷ್ಟ

ಬಂಟ್ವಾಳ, ಜುಲೈ 01, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಹಾನಿ ಮುಂದುವರಿದಿದ್ದು, ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಬಿ ಕಸ್ಬಾ ಗ್ರಾಮದ ವಿ ಪಿ ರಸ್ತೆ ನಿವಾಸಿ ಸರಸ್ವತಿ ನಾಯ್ಕ್ ಅವರ ಮನೆಯ ಅವರಣಗೋಡೆ ಕುಸಿತಗೊಂಡಿದೆ. ಅಳಿಕೆ  ಗ್ರಾಮದ ಎರಂಬು ನಿವಾಸಿ ವಸಂತ್ ಬಿನ್ ಪಕೀರ ಮೂಲ್ಯ ಅವರ ಮನೆಗೆ ಹಾನಿ ಸಂಭವಿಸಿದ್ದು, ಸುಮಾರು 80 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿ ಪ್ರಾಕೃತಿಕ ವಿಕೋಪ ವಿಷಯ ನಿರ್ವಾಹಕ ವಿಷು ಕುಮಾರ್ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ : ಸಾವಿರಾರು ರೂಪಾಯಿ ನಷ್ಟ Rating: 5 Reviewed By: karavali Times
Scroll to Top