ದ.ಕ. : ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ಜು 12 ರಿಂದ ಶಾಲಾ-ಕಾಲೇಜು ಮರು ಆರಂಭಿಸಲು ಡೀಸಿ ಸೂಚನೆ - Karavali Times ದ.ಕ. : ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ಜು 12 ರಿಂದ ಶಾಲಾ-ಕಾಲೇಜು ಮರು ಆರಂಭಿಸಲು ಡೀಸಿ ಸೂಚನೆ - Karavali Times

728x90

11 July 2022

ದ.ಕ. : ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ಜು 12 ರಿಂದ ಶಾಲಾ-ಕಾಲೇಜು ಮರು ಆರಂಭಿಸಲು ಡೀಸಿ ಸೂಚನೆ



ಮಂಗಳೂರು, ಜುಲೈ 11, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 12ರ ಮಂಗಳವಾರದಿಂದ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಿತ ಎಲ್ಲಾ ಶಾಲಾ-ಕಾಲೇಜುಗಳನ್ನು ಮರು ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಆದೇಶಿಸಿದ್ದಾರೆ.

ಆದರೆ ವಿದ್ಯಾರ್ಥಿಗಳ ಹಿತದೃಷ್ಟಿ ಹಾಗೂ ಸುರಕ್ಷತೆ ಹಿನ್ನಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ಕೆಲವೊಂದು ಸುರಕ್ಷತಾ ಸೂಚನೆಗಳನ್ನು ನೀಡಿದ್ದಾರೆ. ವ

ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯಗೊಳಿಸುವಂತಿಲ್ಲ, ವಿದ್ಯಾರ್ಥಿಗಳು ಬರುವ ದಾರಿ ಹಳ್ಳ, ತೋಡು‌ ಮೊದಲಾದ ನೀರಿನ ಮೂಲ ದಾಟಿ ಬರುವಂತಿದ್ದಲ್ಲಿ ಸುರಕ್ಷತೆಗೆ ಒತ್ತು ನೀಡಿ‌ ವಿದ್ಯಾರ್ಥಿಗಳನ್ನು ಮನೆಯಲ್ಲೇ ಇರುವಂತೆ ಸೂಚಿಸುವುದು, ದುರ್ಬಲ, ಶಿಥಿಲ ಕಟ್ಟಡಗಳಿದ್ದಲ್ಲಿ ಅವುಗಳನ್ನು ಪಾಠ-ಪ್ರವಚನಗಳಿಗೆ ಬಳಸದೆ ಇರುವುದು, ಶಾಲಾ-ಕಾಲೇಜು ಆವರಣದಲ್ಲಿ ಅಪಾಯಕಾರಿ ಮರಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ತೆರವುಗೊಳಿಸಲು ಕ್ರಮ ವಹಿಸುವುದು, ಬಹುಸಂಖ್ಯಾತ ವಿದ್ಯಾರ್ಥಿಗಳು ನೆರೆ ಪೀಡಿತರಾಗಿ ತರಗತಿಗೆ ಹಾಜರಾಗಲು ಸಾಧ್ಯ ಇಲ್ಲ ಎಂದಾದರೆ ಸ್ಥಳೀಯವಾಗಿ ರಜೆ ಘೋಷಿಸುವ ಅವಕಾಶ ನೀಡಲಾಗಿದೆ, ಶಾಲಾ ವಿದ್ಯಾರ್ಥಿಗಳ ವಾಹನಗಳ ಸುರಕ್ಷತೆ‌ ಬಗ್ಗೆ ಗಮನ ಹರಿಸುವುದು, ವಿದ್ಯಾರ್ಥಿಗಳು ತೋಡು, ನದಿ, ಸಮುದ್ರ ತೀರಗಳಿಗೆ ತೆರಳದಂತೆ ಪೋಷಕರು, ಶಾಲಾ‌ ಮುಖ್ಯಸ್ಥರು ಸೂಕ್ತ ಎಚ್ಚರಿಕೆ ವಹಿಸುವುದು, ಪ್ರಾಕೃತಿಕ ವಿಕೋಪ ನಿರ್ವಹಿಸುವ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು, ಈಗಾಗಲೆ ವಾರಪೂರ್ತಿ ನೀಡಲಾಗಿರುವ ರಜೆ ಹಿನ್ನಲೆಯಲ್ಲಿ ಪಠ್ಯಗಳನ್ನು ಸರಿದೂಗಿಸಲು ಶನಿವಾರ ಪೂರ್ಣ ತರಗತಿ‌ ನಡೆಸಲು ಹಾಗೂ ಭಾನುವಾರ ಸಹಿತ ದಸರಾ ರಜಾ ಸಂದರ್ಭದಲ್ಲೂ ತರಗತಿ ನಡೆಸಲು ಶಿಕ್ಷಣ ಇಲಾಖೆ ಕ್ರಮ ವಹಿಸುವಂತೆ ಡೀಸಿ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದ.ಕ. : ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ಜು 12 ರಿಂದ ಶಾಲಾ-ಕಾಲೇಜು ಮರು ಆರಂಭಿಸಲು ಡೀಸಿ ಸೂಚನೆ Rating: 5 Reviewed By: karavali Times
Scroll to Top