2021ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕøತರು ಹಾಗೂ ಪುಸ್ತಕ ಬಹುಮಾನ ವಿಜೇತರ ಪಟ್ಟಿ ಪ್ರಕಟಿಸಿದ ತುಳು ಸಾಹಿತ್ಯ ಅಕಾಡೆಮಿ - Karavali Times 2021ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕøತರು ಹಾಗೂ ಪುಸ್ತಕ ಬಹುಮಾನ ವಿಜೇತರ ಪಟ್ಟಿ ಪ್ರಕಟಿಸಿದ ತುಳು ಸಾಹಿತ್ಯ ಅಕಾಡೆಮಿ - Karavali Times

728x90

21 July 2022

2021ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕøತರು ಹಾಗೂ ಪುಸ್ತಕ ಬಹುಮಾನ ವಿಜೇತರ ಪಟ್ಟಿ ಪ್ರಕಟಿಸಿದ ತುಳು ಸಾಹಿತ್ಯ ಅಕಾಡೆಮಿ

ಮಂಗಳೂರು, ಜುಲೈ 21, 2022 (ಕರಾವಳಿ ಟೈಮ್ಸ್) : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 3 ಮಂದಿ ಹಿರಿಯ ಸಾಧಕರನ್ನು ಆಯ್ಕೆ ಮಾಡಲಾಗಿದೆ ಹಾಗೂ ವಿಶೇಷ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪುರಸ್ಕಾರ, ಮಾಧ್ಯಮ ಪುರಸ್ಕಾರ, ಸಂಘಟನಾ ಪುರಸ್ಕಾರಕ್ಕೆ ರಾಜ್ಯ, ಹೊರ ರಾಜ್ಯ, ಹೊರ ರಾಷ್ಟ್ರ ಮಟ್ಟದಲ್ಲಿ ವಿಶೇಷವಾಗಿ ಗುರುತಿಸಿ ಆಯ್ಕೆ ಮಾಡಲಾಗಿದೆ.

ತುಳು ಜಾನಪದ ಕ್ಷೇತ್ರದಲ್ಲಿ ಸಂಜೀವ ಬಂಗೇರ ತಲಪಾಡಿ, ತುಳು ನಾಟಕ/ ಸಿನಿಮಾ ವಿಭಾಗದಲ್ಲಿ  ಕೃಷ್ಣಪ್ಪ ಉಪ್ಪೂರು, ತುಳು ಸಾಹಿತ್ಯ ವಿಭಾಗದಲ್ಲಿ ಉಲ್ಲಾಸ ಕೃಷ್ಣ ಪೈ ಪುತ್ತೂರು, ಇದೇ ಸಂಧರ್ಭದಲ್ಲಿ 2021 ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಪ್ರಶಸ್ತಿಗಾಗಿ 3 ಬೇರೆ ಬೇರೆ ವಿಭಾಗಗಳ ತಲಾ 1 ಪುಸ್ತಕವನ್ನು ತೀರ್ಪುಗಾರರ ಮೂಲಕ ಆಯ್ಕೆ ಮಾಡಲಾಗಿದೆ. ಕವನ ಸಂಕಲನ ವಿಭಾಗದಲ್ಲಿ ಯೋಗೀಶ್ ಕಾಂಚನ್, ಬೈಕಂಪಾಡಿ ಅವರ “ತಂಞನ ಬೊಳ್ಳಿ”, ನಾಟಕ ವಿಭಾಗದಲ್ಲಿ ಶ್ರೀಮತಿ ಅಕ್ಷತಾರಾಜ್ ಪೆರ್ಲ ಅವರ “ಬೇಲಿ, ಸಾಪೆÇದ ಕಣ್ಣ್”,  

ಅಧ್ಯಯನ ವಿಭಾಗದಲ್ಲಿ ಡಾ ಅಶೋಕ ಆಳ್ವ ಸುರತ್ಕಲ್ ಅವರ “ತುಳುನಾಡಿನ ಪ್ರಾಣಿ ಜಾನಪದ” ಆಯ್ಕೆಯಾಗಿದೆ. 

2021ನೇ ಸಾಲಿನ ಗೌರವ ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಪುಸ್ತಕ ಬಹುಮಾನಕ್ಕೆ 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

2021 ನೇ ಸಾಲಿನ ವಿಶೇಷ ಪುರಸ್ಕಾರ : ಬಾಲ ಪ್ರತಿಭಾ ಪುರಸ್ಕಾರ ಕು. ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ, ಕು ಜೀವಿಕಾ ಶೆಟ್ಟಿ ಮುಂಬೈ (ಹೊರ ರಾಜ್ಯ), ಕು ಸಾನ್ವಿ ಯು.ಎಸ್.ಎ. (ಹೊರ ರಾಷ್ಟ್ರ) ಅವರನ್ನು ಆಯ್ಕೆ ಮಾಡಲಾಗಿದೆ. 

ಯುವ ಸಾಧಕ ಪುರಸ್ಕಾರ ವಿಭಾಗದಲ್ಲಿ ಹರಿಪ್ರಸಾದ್ ನಂದಳಿಕೆ, ಚಿನ್ಮಯಿ ಮೋಹನ್ ಸಾಲಿಯಾನ್ ಮುಂಬೈ (ಹೊರ ರಾಜ್ಯ), ರಮಾನಂದ ಶೆಟ್ಟಿ ಓಮಾನ್ (ಹೊರ ರಾಷ್ಟ್ರ), ಮಾಧ್ಯಮ ಪುರಸ್ಕಾರ ಶಶಿ ಬಂಡಿಮಾರ್ (“ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆ) ಹಾಗೂ ರೋನ್ಸ್ ಬಂಟ್ವಾಳ್, ಮುಂಬೈ (ಹೊರ ರಾಜ್ಯ) ಅವರನ್ನು ಆರಿಸಲಾಗಿದೆ. 

ಸಂಘಟನಾ ಪುರಸ್ಕಾರ ವಿಭಾಗದಲ್ಲಿ ಜೈ ತುಳುನಾಡು (ರಿ), ತುಳು ಕೂಟ ಫೌಂಡೇಶನ್ ನಾಲಸೋಪಾರ (ರಿ) ಮುಂಬೈ(ಹೊರ ರಾಜ್ಯ), ತುಳು ಕೂಟ ಕತಾರ್ (ಹೊರ ರಾಷ್ಟ್ರ) ಆಯ್ಕೆಯಾಗಿದೆ. 

2021ನೇ ಸಾಲಿನ ವಿಶೇಷ ಪುರಸ್ಕಾರವು 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಪುರಸ್ಕೃತರ ವಿವರ : 

ಸಂಜೀವ ಬಂಗೇರ ತಲಪಾಡಿ (ಜಾನಪದ ಕ್ಷೇತ್ರ) : ಇವರು ಬಹಳಷ್ಟು ವರ್ಷಗಳ ಕಾಲ ತುಳುನಾಡಿನ ಆರಾಧನಾ ಪರಂಪರೆಯಾದ ದೈವಾರಾಧನೆಯಲ್ಲಿ ಪ್ರಮುಖವಾದ ದೈವಗಳ ನೇಮಕಟ್ಟುವ ಕಾಯಕದಲ್ಲಿ ತನ್ನನ್ನು ತಾನು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುತ್ತಾರೆ. ಅಷ್ಟು ಮಾತ್ರವಲ್ಲದೆ, ತುಳುನಾಡಿನ ಮೂಲ ಜನಪದ ಸಾಹಿತ್ಯವಾಗಿರುವಂತಹ ಪಾರ್ದನ ಗಾಯಕರಾಗಿದ್ದಾರೆ. ಹಾಗೂ ಅಸಂಖ್ಯ ಪಾರ್ದನಗಳನ್ನು ಬಲ್ಲವರಾಗಿದ್ದಾರೆ. ಪುರಾಣ ಐತಿಹಾಸಿಕ ಕಥಾನಕಗಳ ಪಾರ್ದನ ಇವರ  ನಾಲಿಗೆ ತುದಿಯಲ್ಲಿದೆ, ಇವರು ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಾದ ಪಾವೂರು, ಬೆಳ್ಮ ದೆಬ್ಬೆಲಿ, ಕುದುಕೋಳಿ, ಕುರ್ನಾಡು ಗುರುಪುರ, ಮಂಜೇಶ್ವರ, ವರೇಕಳ, ಕೋಟ್ರಗುತ್ತು, ಪಟ್ಟೋರಿ, ಇಲ್ಲಿ ಹಲವಾರು ವರ್ಷಗಳಿಂದ ದೈವಾರಾಧನೆಯ ಜಾನಪದ ಕ್ಷೇತ್ರದ £ಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಉದ್ಯಾವರ ಅರಸು ಮಂಜಿಷ್ಣಾರ್ ಮಾಡದ ಅರಸು ದೈವಗಳ ಪಾಡ್ದನ, (ಮೂಡದಾಯ) ವೈದ್ಯನಾಥ ದೈವದ, ಜುಮಾದಿ, ಜಾರಂದಾಯ, ಪಂಜುರ್ಲಿ, ಉಗೆದಲ್ತಾಯ, ಬಂಟ ಹೀಗೆ ಅನೇಕ ರಾಜ ದೈವಗಳ ನೇಮ ಕಟ್ಟುವ ಸೇವೆ ಸಾಂಪ್ರದಾಯಬದ್ಧವಾಗಿ ಮಾಡಿದವರು. ಹೊಸ ಪೀಳಿಗೆಗೆ ದೈವಾರಾಧನೆಯ ಪಾಡ್ದನ ಸಾಹಿತ್ಯ, ನೇಮದ ಕಟುಹಾಡು ಪರಂಪರೆಗಳನ್ನು ಬೋಧಿಸುತ್ತಿದ್ದಾರೆ. ಅರ್ಕುಳ ತುಪ್ಪೆಕಲ್ಲು ಬಂಗೇರ ಮನೆತನದ ಪಂಜುರ್ಲಿ ದೈವದ ಪಾತ್ರಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ.


ಉಲ್ಲಾಸ ಕೃಷ್ಣ ಪೈ ಪುತ್ತೂರು (ಸಾಹಿತ್ಯ ಕ್ಷೇತ್ರ) : ಇವರು ದಿನಾಂಕ 04-07-1963 ರಲ್ಲಿ ಪಿ. ಕೃಷ್ಣ ಪೈ ಮತ್ತು ಶ್ರೀಮತಿ ರಾಧಾ ಪೈ ಇವರ ಮಗನಾಗಿ ಹಾರಾಡಿ ಪುತ್ತೂರಿನಲ್ಲಿ ಜನಿಸಿದರು. ವಿಜ್ಞಾನ ಪಧವೀಧರರಾದ ಇವರು ವೃತ್ತಿಯಲ್ಲಿ ಗೌರವ ಸಂದರ್ಶಕ ಶಿಕ್ಷಕರಾಗಿದ್ದು ಮೂರು ದಶಕಗಳಿಂದ ಉಚಿತ ಸೇವೆ ಮಾಡುತ್ತಿದ್ದಾರೆ. ಭಾರತದ ಬಾಲ ಸಾಹಿತ್ಯ ಕ್ಷೇತ್ರದಲ್ಲಿ 6 ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ ರಚಿಸಿರುವ ಏಕೈಕ ವ್ಯಕ್ತಿ. 25ಕ್ಕೂ ಮಿಕ್ಕಿ ಭಾಷೆಗಳಲ್ಲಿ ಶಿಶು ಪ್ರಾಸಗಳನ್ನು, ಅಭಿನಯ ಗೀತೆಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ. ಇವರು 20ಕ್ಕೂ ಮಿಕ್ಕಿ ತುಳು ವಿಕಾಸಮಾಲೆಯ ಕೃತಿಗಳನ್ನು, ಇತರ ಭಾಷೆಯ ನೂರಾರು ಕೃತಿಗಳನ್ನು ರಚಿಸಿದ್ದಾರೆ. ಇವರ ತುಳು ವಿಕಾಸ ಮಾಲೆಯ ಕೃತಿಗಳು : ಕಡ್ಲೆಪುಂಡಿ, ಪುಳಿಂಕೊಟೆ ಬಾಂಬೆ ಮಿಠಾಯಿ, ಸಾಂತಾಣಿ, ಚಿತ್ರಾಕ್ಷರ ಶಬ್ದ ಬಂಧ, ಅಕ್ರೋಟು, ಚಿಲಿಪಿಲಿ ಗುರ್ಬಿ ಪಕ್ಕಿ, ಕಿಟ್ಟಣ್ಣ ಕುರ್ಲರಿ, ಮೋಕೆದ ಜೋಸ್ತಿ, ಕಮಲನ ಕಿಲಕಿಲ, ಇತರ ಕೃತಿಗಳು: ಅಕ್ಷರ ಮೋಜು, ಅಕ್ಷರ ವಿನೋದ, ಮೋಜಿನ ಕಲಿಕೆ, ಅಕ್ಷರ ಬರಿ ಚಿತ್ರ ಕಲಿ, ಹಾಡು ಬನ್ನಿ ಮಕ್ಕಳೆ ಮುಂತಾದವುಗಳು.  ಇವರು ಲೇಖಕ, ಕವಿ, ಹಾಡುಗಾರ, ಶಿಕ್ಷಕ, ಸಾಹಿತಿ, ಚಿತ್ರಕಾರ, ಸಂಘಟಕ, ಬಹುಭಾಷಾ ಜ್ಞಾನ ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಕರ್ನಾಟಕದ ಬಲು ಅಪರೂಪದ ವ್ಯಕ್ತಿ. ಕೊಂಕಣಿ, ಕನ್ನಡ, ಇಂಗ್ಲೀಷ್, ಹಿಂದಿ, ಮಲಯಾಳಂ, ಸಂಸ್ಕøತ, ತೆಲುಗು, ಪಂಜಾಬಿ, ತುಳು, ಗುಜರಾತಿ ಭಾಷಾ ಪ್ರವೀಣರಾಗಿದ್ದಾರೆ. ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ, ಪುಟಾಣಿ ರತ್ನ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿಯ ಗೌರವ ಪಡೆದಿದ್ದಾರೆ. 


ಕೃಷ್ಣಪ್ಪ ಉಪ್ಪೂರು (ಸಿನೆಮಾ/ ನಾಟಕ ಕ್ಷೇತ್ರ) : ಇವರು 04-03-1948 ರಲ್ಲಿ ತನಿಯ ಮರಕಾಲ ಮತ್ತು ತಜಂಕು ದಂಪತಿಯ ಮಗನಾಗಿ ಉಡುಪಿ ಬಾರಕೂರಿನ ಚೌಳಿಕೇರಿ ಎಂಬಲ್ಲಿ ಜನಿಸಿದ ಇವರು ಸ್ನಾತಕೋತ್ತರ ಪದವೀಧರರಾಗಿ ವಿದ್ಯಾರ್ಜನೆಯನ್ನು ಮಾಡಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. ಚಲನಚಿತ್ರಗಳಲ್ಲಿ ವೃತ್ತಿಪರರಾಗಿ ಹಾಗೂ ನಾಟಕಗಳಲ್ಲಿ ಹವ್ಯಾಸಿ ಕಲಾವಿದನಾಗಿ ಕಲಾಸೇವೆ ಮಾಡಿದ್ದಾರೆ.  ಇವರ ವಿಶೇಷ ಸಾಮಾಜಿಕ ಪರಿಣಾಮ ಬೀರಿದ “ಮಾರಿಬಲೆ” ಎನ್ನುವ ತುಳು ಚಿತ್ರಕ್ಕೆ 1997-98ನೇ ಸಾಲಿನ “ರಾಜ್ಯ ಚಲನಚಿತ್ರ ಪ್ರಶಸ್ತಿ” ಲಭಿಸಿದೆ. ಕರ್ನಾಟಕ ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮ (ವಿ) ಬೆಂಗಳೂರು ಇದರ ನೊಂದಾಯಿತ ನಿರ್ದೇಶಕರಾಗಿದ್ದು. ಹಲವಾರು ತುಳು ಸಿನಿಮಾ-ನಾಟಕಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಪಶ್ಚಿಮ ಘಟ್ಟ ಅಭಿವೃದ್ದಿ ಯೋಜನೆಯಡಿಯಲ್ಲಿ ಜಲಾನಯನ, ಆರೋಗ್ಯ, ಶಿಕ್ಷಣ, ಮೀನುಗಾರಿಕೆ, ಸಾರಿಗೆ, ಪಶು ಸಂಗೋಪನೆ, ಪ್ರವಾಸೋದ್ಯಮ  ವಿಷಯಗಳ ಬಗ್ಗೆ ಹಾಗೂ ತುಳುನಾಡಿನ ಅನೇಕ ಸಾಕ್ಷ್ಯಚಿತ್ರ ನಿರ್ದೇಶಿಸಿ ನಿರ್ಮಿಸಿರುತ್ತಾರೆ. ಇವರು ನಿರ್ಮಿಸಿ, ನಿರ್ದೇಶಿಸಿದ ಸಾಕ್ಷ್ಯಚಿತ್ರಗಳು, ದೂರದರ್ಶನ ಚಂದನದಲ್ಲಿ ಪ್ರಸಾರಗೊಂಡಿರುತ್ತದೆ. ಇವರು ರಚಿಸಿ ನಿರ್ದೇಶಿಸಿರುವ “ನಂಬುಲೆ ನಂಬಾದ್ ಕೊರ್ಪೆ” ನಾಟಕವು ಅಖಿಲ ಭಾರತ ತುಳು ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಉತ್ತಮ ಪ್ರಶಸ್ತಿಯ ಜೊತೆಗೆ ಅಭಿನಯ ಹಾಗೂ ನಿರ್ದೇಶನದ ಅವಳಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು ರಚಿಸಿದ ಇತರ ನಾಟಕಗಳು “ಹೌಂದ್ರಾಯಣ ಕಾಳಗ”, “ಗುಂಪುಡೊರಿ ಗೋವಿಂದೆ”, “ಬಾಲೆಮಾನಿ” ಇತ್ಯಾದಿ.


(ಬಾಲ ಪ್ರತಿಭಾ ಪುರಸ್ಕಾರ)


ಕು. ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ : ಬಾಲಕೃಷ್ಣ ಹಾಗೂ ಸುಕನ್ಯ ದಂಪತಿಗಳ ಮಗಳಾಗಿ ಜನಿಸಿದ ಇವರು ಪ್ರಸ್ತುತ ವಿದ್ಯಾನಗರ ಕುಳಾಯಿಯಲ್ಲಿ  ನೆಲೆಸಿದ್ದಾರೆ. ಭಾರತೀ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ಇವರು ತನ್ನ ನಾಲ್ಕನೇ ವಯಸ್ಸಿನಿಂದ ಶಾಲಾ ಕಾರ್ಯಕ್ರಮ, ಪ್ರತಿಭಾ ಕಾರಂಜಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕಲಾ ಕುಂಭ ಸಾಂಸ್ಕೃತಿಕ ವೇದಿಕೆಯಲ್ಲಿ ಹೆಜ್ಜೆ ಹಾಕಲು ಪ್ರಾರಂಭಿಸಿದ ಇವರು ಇದೇ ವೇದಿಕೆಯಿಂದ ರಾಜ್ಯದ ಮೂಲೆ ಮೂಲೆಗಳಲ್ಲಿ ತುಳುನಾಡ ಸಂಸ್ಕೃತಿ ಎಂಬ ವೇದಿಕೆಯಲ್ಲಿ ಬಾಲ ಕಲಾವಿದೆಯಾಗಿ ಮಿಂಚಿದ್ದಾರೆ. ಯಕ್ಷಗಾನ ಕಲಾವಿದರೂ ಆಗಿರುವ ಇವರು ಚಂಡ-ಮುಂಡ, ಗರುಡ, ಕೃಷ್ಣ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಪಡೆದಿರುತ್ತಾರೆ. ತುಳುನಾಡಿನ ಹುಲಿವೇಷ ಧರಿಸಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಹೆಜ್ಜೆ ಹಾಕಿರುತ್ತಾರೆ, ಹಾಗೂ ಝೀ ಟಿ.ವಿ.ಯ ಡ್ರಾಮಾ ಫಂಟರ್ಸ್ ಶೋನಲ್ಲಿಯೂ ಭಾಗವಹಿಸಿರುತ್ತಾರೆ. ತುಳುಲಿಪಿ ಕಲಿಕೆಯಲ್ಲಿ 99 ಶೇಕಡ ಅಂಕವನ್ನೂ  ಎಸ್.ಎಸ್.ಎಲ್.ಸಿಯಲ್ಲಿ 92 ಶೇಕಡ ಅಂಕವನ್ನು ಪಡೆದಿರುತ್ತಾರೆ. 

(ಬಾಲ ಪ್ರತಿಭಾ ಪುರಸ್ಕಾರ : ಹೊರ ರಾಜ್ಯ)

ಕು. ಜೀವಿಕಾ ಶೆಟ್ಟಿ ಮುಂಬೈ : ಮುಂಬೈ ನಿವಾಸಿ ಮೂಲತ: ಉಪ್ಪೂರು ದೊಡ್ದ ಮನೆಯ ಪೇತ್ರಿ ವಿಶ್ವನಾಥ ಶೆಟ್ಟಿಯವರ ಹಾಗೂ ಚಿತ್ರಾ ದಂಪತಿಯವರ ದ್ವೀತಿಯ ಪುತ್ರಿ. 11-4-2007 ರಂದು ಜನನ. ಪ್ರಾಥಮಿಕ ಶಿಕ್ಷಣದಿಂದಲೂ ಸಾಂಸ್ಕ್ರತಿಕ ರಂಗದೊಂದಿಗೆ ಗುರುತಿಸಿಕೊಂಡಿರುವ ಇವರು. ಚಿಣ್ಣರ ಬಿಂಬದ ಪ್ರತಿಭಾವಂತ ವಿದ್ಯಾರ್ಥಿ ಭಾಳಣ ಸ್ಪರ್ಧೆ, ಏಕಪಾತ್ರಾಭಿನಯ, ಭಗವದ್ಗೀತೆಯ ವಾಚನ, ನಾಟಕದಲ್ಲಿ ಅಭಿನಯ, ಭಜನೆ, ಭಾವಗೀತೆ, ಶ್ಲೋಕ ಎಲ್ಲವೂಗಳಲ್ಲಿಯೂ ಅಭಿರುಚಿಯನ್ನಿಟ್ಟುಕೊಂಡವರು. ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿದ್ದಾರೆ, ಮುಂಬೈಯ ಪ್ರಸಿದ್ಧ ಚಿಣ್ಣರ ಬಿಂಬದಲ್ಲಿ ಅಮರ ವೀರರು ನಾಟಕದ ಭಗತ್ ಸಿಂಗ್ ಪಾತ್ರ, ಕನ್ನಡ ಸಾಹಿತ್ಯ ಪರಿಳತ್ತು, ಮಹಾರಾಷ್ಟ್ರ ಘಟಕದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಕ್ಕಳ ಕವಿಗೋಷ್ಠಿ, ವಿಶ್ವ ಬಂಟರ ಸಮ್ಮೇಳನದ ನಾಟಕ, ಯಕ್ಷಗಾನದಲ್ಲಿಯೂ ಅಭಿರುಚಿ ಬಹಳವಾಗಿದ್ದು, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರ ಕೃಷ್ಣ ಸಂಧಾನದ ಅವರ ಅರ್ಧಗಂಟೆಯ ಮಾತುಗಳು ಜೀವಿಕಾರು ನಿರರ್ಗಳವಾಗಿ ಆಡಬಲ್ಲವರಾಗಿದ್ದಾರೆ. ತೋನ್ಸೆ ವಿಜಯಕುಮಾರ ಶೆಟ್ಟಿಯವರ ನಾಟಕ ಈ ಬಾಲೆ ನಮ್ಮವು ಇದರಲ್ಲಿ ಅಭಿನಯ, ತುಳುನಾಡಿನ ಸಂಸ್ಕ್ರತಿ ಸಂಸ್ಕಾರದ ಬಗ್ಗೆ ನಿರರ್ಗಳ ಮಾತು, ತುಳು, ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ ಬಹು ಭಾಷಾ ಪ್ರವೀಣೆ, ತುಳು ಲಿಪಿ ಕಲಿಯುವಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.


(ಬಾಲ ಪ್ರತಿಭಾ ಪುರಸ್ಕಾರ: ಹೊರ ರಾಷ್ಟ್ರ)

ಕು. ಸಾನ್ವಿ ಯು.ಎಸ್.ಎ. : ಯುನೈಟೆಡ್ ಸ್ಟೇಟ್‍ನ ಉತ್ತರ ಕೆರೋಲಿನಾದ ರೇಲಿಗ್ ನಿವಾಸಿ ಮೂಲತಃ ಮಂಗಳೂರಿನ ಅಸೈಗೋಳಿಯ ಸಾನ್ವಿ, ತುಳು, ಕನ್ನಡ, ಸಂಸ್ಕøತ, ಹಿಂದಿ, ಇಂಗ್ಲೀಷ್, ಸ್ಪಾನಿಶ್ ಭಾಷೆಯ ಪ್ರವೀಣೆಯಾಗಿದ್ದಾರೆ. 7ನೇ ಗ್ರೇಡ್‍ನಲ್ಲಿ ಕಲಿಯುತ್ತಿರುವ ಇವರು, ಯಕ್ಷಗಾನ, ಭಗವದ್ಗೀತೆಯನ್ನು ಅಭ್ಯಸಿಸಿದ್ದಾರೆ. ಉತ್ತಮ ಹಾಡುಗಾರ್ತಿ, ದೇಶೀಯ ಹಾಗೂ ಸಾಂಸ್ಕøತಿಕ ನೃತ್ಯ ಪ್ರಕಾರದಲ್ಲಿ ಉತ್ತಮ ಪರಿಣತಿ ಹೊಂದಿದ್ದಾರೆ. ಕಥಕ್‍ನಲ್ಲಿಯೂ ಆಸಕ್ತಿಯಿದ್ದು, ಸ್ಥಳೀಯವಾಗಿ ವಾಗ್ಮಿಯಾಗಿ ಭಾಷಣ, ಪ್ರಬಂಧ ರಚನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಕ್ರೀಡಾ ಚಟುವಟಿಕೆಯೊಂದಿಗೆ ಮಕ್ಕಳಿಗೆ ತನ್ನದೇ ಆದ ಶೈಲಿಯಲ್ಲಿ ಮಾರ್ಗದರ್ಶನ ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಬಲೆ ತುಳು ಪಾತೆರುಗ, ತುಳು ಕೂಟ, ಪ್ರಾದೇಶಕ ಭಾಷಾಜ್ಞಾನ ಸ್ಪರ್ಧೆ, ಸಾಂಸ್ಕøತಿಕ ಚಟುವಟಿಕೆ, ತುಳುವೆರೆ ಚಾವಡಿಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. 


(ಯುವ ಸಾಧಕ ಪುರಸ್ಕಾರ)

ಹರಿಪ್ರಸಾದ್ ನಂದಳಿಕೆ : ಇವರು ಕಾರ್ಕಳ ತಾಲೂಕಿನ ಉಡುಪಿಯಲ್ಲಿ 30-01-1990 ರಂದು ಸಿದ್ದಪ್ಪ ಕೆ. ಮತ್ತು ಲಲಿತಾ ಇವರ ಮಗನಾಗಿ ಜನಿಸಿದರು. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಇದೀಗ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಹವ್ಯಾಸಿ  ನಾಟಕ ಕಲಾವಿದನಾಗಿ ಅಭಿನಯದಲ್ಲಿ ತೊಡಗಿಸಿಕೊಂಡ ಇವರು ರಂಗಭೂಮಿ, ಸಿನಿಮಾ, ಧಾರವಾಹಿಗಳಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ವಿವಿಧ ನಾಟಕ ತಂಡಗಳ ಸಹಿತ ವಿಜಯ ಕಲಾವಿದರು ಕಿನ್ನಿಗೋಳಿ ನಾಟಕ ತಂಡದಲ್ಲಿ ಇವರು ಕಳೆದ 15 ವರುಷಗಳಿಂದ ತನ್ನ ಪ್ರತಿಭೆಯಿಂದ ಜನರನ್ನು ರಂಜಿಸುತ್ತಿದ್ದಾರೆ. ತುಳುವ ಸಿರಿ ಕಲಾವಿದರು ಎಂಬ ನಾಟಕ ತಂಡವನ್ನು ಕಟ್ಟಿಕೊಂಡು 25ಕ್ಕೂ ಅಧಿಕ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರು ಅಭಿನಯಿಸಿದ ನಾಟಕಗಳು ತೂಪಿನಾಯೆ ಒರಿಯುಲ್ಲೆ, ತೆರಿಯಂದಿ ತಿರ್ಲ್, ಒಯಿಕ್ಲ ಕಾಸ್ ಬೋಡು, ಲೆಕ್ಕ ತತ್ತಿ ಬೊಕ್ಕ, ತೂಪಿನಾರೆ ಆಪಿನಾರ್, ಕಂಡಡೊರಿ ದಂಡ್‍ಡೊರಿ, ಬಿಲೆ ಕಟ್ಟರೆ ಆವಂದಿನ, ಬೈರಾಸ್ ಭಾಸ್ಕರೆ, ಊರುಗು ಬರೊಡ್ಚಿ, ಅಜ್ಜಿಗ್ ಏರ್ಲ ಇಜ್ಜಿ, ಪಿರಬನ್ನಗ, ಆಲ್ ಎನ್ನಾಲ್ ಪ್ರಮುಖವಾಗಿದೆ. ಇವರಿಗೆ ತುಳುವೆರ ಬೊಳ್ಳಿ ಪ್ರಶಸ್ತಿ, ಮುಟ್ಟಿಕಲ್ಲು ನಾರಾಯಣ ಶೆಟ್ಟಿ ಪ್ರಶಸ್ತಿ, ಕಲಾ ಸೌರಭ ಪ್ರಶಸ್ತಿ, ರಂಗ ಸಾಧಕ ಪುರಸ್ಕಾರ, ಅಬ್ಬನಡ್ಕ ಸೌರಭ ಪ್ರಶಸ್ತಿ, ಕಲಾ ಪುರಸ್ಕಾರ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 


(ಯುವ ಸಾಧಕ ಪುರಸ್ಕಾರ : ಹೊರ ರಾಜ್ಯ)

ಚಿನ್ಮಯಿ ಮೋಹನ್ ಸಾಲಿಯಾನ್, ಮುಂಬೈ : ಮೂಲತಃ ಉಡುಪಿ ಜಿಲ್ಲೆಯ ಹೆಜಮಾಡಿಯವರಾಗಿದ್ದು,  ಪ್ರಸ್ತುತ ಮುಂಬೈ ಡೊಂಬಿವಿಲ್ ನಿವಾಸಿ ಮೋಹನ್ ಗುರುವ ಸಾಲಿಯಾನ್ ಮತ್ತು ಲಕ್ಮೀ ಮೋಹನ್ ಗುರುವ ಸಾಲಿಯಾನ್ ರವರ ಪುತ್ರ ಚಿನ್ಮಯ್ ರವರು  2003ರ ಡಿಸೆಂಬರ್ 4 ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ದಕ್ಷಿಣ ಭಾರತದ ಸಂಘ ಡೊಂಬಿವಿಲಿಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಪ್ರಸ್ತುತ ಬಂಟ್ಸ್ ಸಂಘದ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಗಳಿಂದ ಸಮೂಹ ಮಾಧ್ಯಮದಲ್ಲಿ (ಎರಡನೇ ವರ್ಷ) ಪದವಿ ಪಡೆಯುತ್ತಿದ್ದಾರೆ. “ಬಲೆ ಇಲ್ಲಡೆ ಕುಲ್ಲೊಂದು ಚಾ ಪರ್ಕ”, “ನಂಬಿಕೆದ ಕಲೆ”, “ತುಳು ಭಾಷೆ ಒರಿಪಾಗ ತುಳು ಭಾಷೆ ಬುಲೆಪಾಗ” ಎಂಬ ಕಾರ್ಯಕ್ರಮಗಳನ್ನು ನಡೆಕೊಟ್ಟಿದ್ದಾರೆ. “ಬೊಂಬಾಯಿದ ಲೋಕಲ್”  ಹಾಡು ಸಂಯೋಜನೆ ಮಾಡಿದ  ಚಿನ್ಮಯ್ ರವರು ಮೂಲತಃ ತುಳುವಿನಲ್ಲಿ ಆಂಕರಿಂಗ್, ಯಕ್ಷಗಾನ, ನಾಟಕ ನಟ, ಕವಿ/ ಲೇಖಕರಾಗಿಯೂ ಹೆಸರು ವಾಸಿಯಾಗಿದ್ದಾರೆ. ಬಾಲ್ಯದಿಂದಲೇ ಕಲಾಸ್ತಿಯನ್ನು ಹೊಂದಿದ್ದು, ಕಟೀಲು ಶ್ರೀ ಸದಾನಂದ ಶೆಟ್ಟಿ ಮತ್ತು ಮನೋಜ್ ಕುಮಾರ್ ಹೆಜಮಾಡಿಯವರ ಮಾರ್ಗದರ್ಶನದಲ್ಲಿ ಯಕ್ಷಗಾನ ಕಲಿತು ದೇವಿ ಮಹಾತ್ಮೆ, ಶಬರಿ ಮಲೆ ಅಯ್ಯಪ್ಪ, ಶಾಂಭವಿ ವಿಜಯ, ಕೋಟಿ ಚೆನ್ನಯ, ಮಹಿಷ ಮರ್ದಿನಿ ಹೀಗೆ ಹಲವಾರು ಯಕ್ಷಗಾನಗಳನ್ನು ಪ್ರದರ್ಶಿಸಿದರು. ಉಮೇಶ್ ಹೆಗ್ಡೆ ಕಡ್ತಲ, ಕಿಶೋರ್ ಶೆಟ್ಟಿ ಪಿಲಾರ್, ಡಾ. ತೋನ್ಸೆ ವಿಜಯ್ ಕುಮಾರ್ ಶೆಟ್ಟಿ, ದಯಾನಂದ ಸಾಲಿಯಾನ್ (ಸಾದಯ) ಅವರೊಂದಿಗೆ ಸೇರಿ ಬಿತ್ತಿಲ್ಡು ಲೆತ್ತೆರ್, ಮಂಡೆ ಬೆಚ್ಚ, ದ್ರ್ರೌಪತಿ ವಸ್ತ್ರಾಪಹರಣ, ಜೀವನ, ಮತ್ತು ಇನ್ನೂ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. “ತುಳು ಭಾಷೆ ಒರಿಪಾಗ ತುಳು ಭಾಷೆ ಬುಳೆಪಾಗ” ಎಂಬ ಟ್ಯಾಗ್ ಲೈನ್‍ನೊಂದಿಗೆ ಸಂಸ್ಕೃತಿಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.


(ಯುವ ಸಾಧಕ ಪುರಸ್ಕಾರ : ಹೊರ ರಾಷ್ಟ್ರ)

ರಮಾನಂದ ಎಂ. ಶೆಟ್ಟಿ ಓಮಾನ್ : ಓಮನ್ ರಾಷ್ಟ್ರದ ನಿವಾಸಿ ಮೂಲತಃ ಮೂಡಬಿದ್ರೆಯ ತೊಡಾರಿನ ರಮಾನಂದ ಎಂ ಶೆಟ್ಟಿ ಅವರು ದಿವಂಗತ ಮಹಾಬಲ ಶೆಟ್ಟಿ ಹಾಗೂ ದಿವಂಗತ ಪದ್ಮಾವತಿ ಶೆಟ್ಟಿ ಅವರ ಪುತ್ರರಾಗಿದ್ದಾರೆ. ಮೂಡಬಿದಿರೆಯ ಜೈನ್ ಜ್ಯೂನಿಯರ್ ಕಾಲೇಜಲ್ಲಿ ಶಿಕ್ಷಣ ಮುಗಿಸಿ, ಮುಂಬೈ ಮಹಾನಗರದಲ್ಲಿ ಹೋಟೆಲ್ ಕಾರ್ಮಿಕರಾಗಿ ಕ್ರೀಡೆ, ತುಳು ಯಕ್ಷಗಾನ, ನಾಟಕದಲ್ಲಿ ಅಭಿನಯಿಸುತ್ತಾ, ಮುಂದೆ ಜಲ ವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸಿ, ಲುಫ್ರಾನ್ಸ ಏರ್‍ಲೈನ್ಸ್ ಹೈದ್ರಾಬಾದ್‍ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಹೈದ್ರಾಬಾದ್‍ನಲ್ಲಿ ತುಳು ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರ ದುಬೈನಲ್ಲಿ ನೆಲೆಸಿ, ತುಳು ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕಲಾ ಸೇವೆಯನ್ನು ಯಕ್ಷಮಿತ್ರರು, ಗಮ್ಮತ್ತು ಕಲಾವಿದರು, ರಾಜ ರಾಜೇಶ್ವರಿ ಭಜನಾ ಮಂಡಳಿ, ತೀಯ ಸಮಾಜ, ಕರ್ನಾಟಕ ಸಂಘ ಶಾರ್ಜಾ, ಕರ್ನಾಟಕ ಸಂಘ ದುಬೈ, ವರ ಮಹಾಲಕ್ಷ್ಮಿ ಸಮಿತಿ ದುಬೈ ಇಂಥಾ ಎಲ್ಲ ಸಂಘ-ಸಂಸ್ಥೆಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ದುಬೈಯಿಂದ ಓಮನ್‍ಗೆ ವರ್ಗಾವಣೆಗೊಂಡು, ಓಮನ್ ತುಳುವೆರ್ ಎಂಬ ತುಳು ಕೂಟವನ್ನು ಸ್ಥಾಪಿಸಿ, ಪ್ರಸ್ತುತ ಅಧ್ಯಕ್ಷರಾಗಿ ತುಳು ಭಾಷೆಯನ್ನು ಸಂಸ್ಕøತಿ-ಸಂಸ್ಕಾರದ ಪರಿಚಯವನ್ನು ಓಮನ್ ದೇಶದಲ್ಲಿ ನಿರಂತರವಾಗಿ ಬೆಳೆಸುತ್ತ ಬಂದಿದ್ದಾರೆ. ಓಮಾನ್ ತುಳುವೆರ್ ಮೂಲಕ ಯಕ್ಷಗಾನ, ನಾಟಕ, ಸತ್ಯನಾರಾಯಣ ಪೂಜೆ, ಕ್ರೀಡಾ ಕೂಟ ಅದೇ ರೀತಿಯಾಗಿ ಕೊರೋನಾ ಸಂದರ್ಭದಲ್ಲಿ ನೆರವು, ತುಳು ಲಿಪಿಯನ್ನು ಅಂತರ್ಜಾಲ ಮುಖೇನ 225 ಮಂದಿಗೆ ಕಳುಹಿಸಿದ ಕಾರ್ಯ ಮೆಚ್ಚುವಂತದ್ದು. 


(ಮಾಧ್ಯಮ ಪುರಸ್ಕಾರ)


ಶಶಿ ಬಂಡಿಮಾರ್ (“ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆ) : ಮಂಗಳೂರು ಸಮಾಚಾರ ಪತ್ರಿಕೆ ರಾಜ್ಯದ ಮೊದಲ ಪತ್ರಿಕೆಯಾಗಿ ಮಂಗಳೂರಿನಿಂದ ಆರಂಭಗೊಂಡಂತೆ ಅದೇ ತುಳುನಾಡಿನಲ್ಲಿ ತುಳು ಪತ್ರಿಕಾ ಇತಿಹಾಸದಲ್ಲಿ ಅತಿ ದೊಡ್ಡ ಕ್ರಾಂತಿ ಮಾಡಿದ ಪತ್ರಿಕೆ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಪ್ರಧಾನ ಸಂಪಾದಕರಾದ ಶಶಿ ಬಂಡಿಮಾರ್ ಎಂಜಿನಿಯರ್ ಪದವಿ ಪಡೆದರೂ ಸಹ ತುಳು ಭಾಷೆ ಸಂಸ್ಕøತಿ-ಸಂಸ್ಕಾರವನ್ನು ಮಾಧ್ಯಮ ಕ್ಷೇತ್ರದ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದವರು. ಪತ್ರಿಕೆಯನ್ನು ಅದರೊಂದಿಗೆ ತುಳು ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ವಿಶಿಷ್ಟ ರೀತಿಯಲ್ಲಿ ಪಸರಿಸಿದವರು. ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯು ದೂರದ ಮುಂಬೈ, ಕೊಪ್ಪ, ಕಾರ್ಕಳ, ಉಡುಪಿ, ಮಂಗಳೂರು, ಪುತ್ತೂರು, ಮುಲ್ಕಿ, ಮೂಡಬಿದ್ರೆ, ಬಂಟ್ವಾಳ, ಬೆಳ್ತಂಗಡಿ ಮತ್ತಿತರ ಪ್ರದೇಶದಲ್ಲಿ ಕಚೇರಿಯನ್ನು ನಿರ್ಮಿಸಿಕೊಂಡು ನೂರಾರು ಮಂದಿಗೆ ಉದ್ಯೋಗವನ್ನು ನೀಡಿ ಪತ್ರಿಕೆಯೊಂದಿಗೆ ಮುಲ್ಕಿಯಲ್ಲಿ ತುಳು ಸಮ್ಮೇಳನವನ್ನು ಸಂಯೋಜಿಸಿ ಬೇರೆ ಬೇರೆ ಕಡೆಗಳಲ್ಲಿ ತುಳು ಸಂಸ್ಕøತಿಯ ಕಾರ್ಯಕ್ರಮಗಳಿಗೆ ಮುಕ್ತ ನೆರವನ್ನು ನೀಡುವ ಪತ್ರಿಕೆಯ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ತುಳುನಾಡ ಸ್ವಾತಂತ್ರ್ಯೋತ್ಸವದ ಪೆÇಂರ್ಬಾಟ, ತುಳು ಸಾಹಿತ್ಯ ಸಮ್ಮೇಳನ, ತುಳು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಜಾಗೃತಿ ಮೂಡಿಸುವ, ತುಳುವಿನ ಮಣ್ಣಿನ ಗುಣ ವಿಶೇಷತೆ, ಸಂಸ್ಕøತಿ, ಭಾಷಾ ಜ್ಞಾನವನ್ನು ವೃದ್ಧಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ತುಳುನಾಡಿನ ಸಾಧಕರನ್ನು ಪರಿಚಯಿಸುವ ದೇಶ ವಿದೇಶದಲ್ಲಿಯೂ ಈ ಪತ್ರಿಕೆಗೆ ಚಂದಾದಾರರಿರುವುದು ವಿಶೇಷವಾಗಿದೆ.


(ಮಾಧ್ಯಮ ಪುರಸ್ಕಾರ : ಹೊರ ರಾಜ್ಯ)

ಶ್ರೀ ರೋನ್ಸ್ ಬಂಟ್ವಾಳ್, ಮುಂಬೈ : ಮುಂಬೈ ಪ್ರತಿಷ್ಠಿತ “ಪತ್ರಕಾರ್ ರತ್ನ” ಬಿರುದು ಪಡೆದಿರುವ ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರು ಈಗಾಗಲೇ “ಕರ್ನಾಟಕ ಮಾಧ್ಯಮ ಅಕಾಡೆಮಿ 2014-ಪ್ರಶಸ್ತಿ” ಪಡೆದ ಹೊರನಾಡ ಏಕೈಕ ಪತ್ರಕರ್ತ. ದಾಯ್ದಿವಲ್ರ್ಡ್ ಡಾಟ್.ಕಾಂ, ಕೆಮ್ಮಣ್ಣು ಡಾಟ್.ಕಾಂ, ಕೆನರಾ ನ್ಯೂಸ್ ಡಾಟ್ ಕಾಂ, ಬೆಳ್ಳಿ ವಿಶನ್ ಡಾಟ್ ಕಾಮ್, ಮುಂತಾದ ಜಗತ್ಪ್ರಸಿದ್ಧ ಅಂತರ್ಜಾಲಾ ಮಾಧ್ಯಮಗಳ ಮಹಾರಾಷ್ಟ್ರ ರಾಜ್ಯದ ಬ್ಯೂರೊ ಚೀಫ್, ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಸ್ತುತ ಟೈಮ್ಸ್ ಆಫ್ ಇಂಡಿಯಾದ ವಿಜಯ ಕರ್ನಾಟಕ ನಿಯೋಜಿತ ಪತ್ರಿಕೆಗಳ ಮುಂಬೈ ಪ್ರಾದೇಶಿಕ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹತ್ತಾರು ಕನ್ನಡ ಕೊಂಕಣಿ ವಾರ ಪತ್ರಿಕೆಗಳು, ಇಂಗ್ಲಿಷ್ ಸಾಪ್ತಾಹಿಕಗಳು, ಪಾಕ್ಷಿಕ ಮತ್ತು ಅನೇಕ ಮಾಸಿಕಗಳ ಅಧಿಕೃತ ವರದಿಗಾರರಾಗಿ ರಾಷ್ಟ್ರವನ್ನೇ ಪ್ರತಿನಿಧಿಸುತ್ತಿರುವ ಅಪರೂಪದ ಪತ್ರಕರ್ತರಾಗಿದ್ದಾರೆ. ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಮಂಗಳೂರಿನ ಬಜಪೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಕಲಿತು, ಮುಂಬೈಗೆ ವ್ಯಂಗ್ಯ ಚಿತ್ರಕಾರನಾಗಿ ಪತ್ರಿಕೋದ್ಯಮದ ಕೃಷಿ ಆರಂಭಿಸಿದರು. ತುಳು ಕನ್ನಡಿಗ, ಇಡೀ ಕರ್ನಾಟಕ ಜನತೆ ಸಮುದಾಯದ ಆತ್ಮೀಯ ರೂವಾರಿಯಾಗಿ ಪ್ರಸಿದ್ಧರು. ಕ.ಪ.ಸ.ಮ. ಇದರ ಅಧ್ಯಕ್ಷರಾಗಿದ್ದಾರೆ. ಹಲವಾರು ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ. ಮುಂಬಯಿನಲ್ಲಿ ಎರಡು ರಾಷ್ಟ್ರೀಯ ಪತ್ರಕರ್ತರ ಆಧಿವೇಶನಗಳನ್ನು ಸಮರ್ಪಕ ಹಾಗೂ ಯಶಸ್ವಿಯಾಗಿ ನಡೆಸಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿ, ಸಮಾಜ ಸೇವಕರಾಗಿಯೂ ಪರೋಕ್ಷವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಅಖಿಲ ಭಾರತ ತುಳು ಒಕ್ಕೂಟದ ಕಾರ್ಯದರ್ಶಿ, ಪ್ರಪ್ರಥಮ ವಿಶ್ವ ತುಳುವೆರೆ ಪರ್ಬ, ವಿಶ್ವ ತುಳುವೆರೆ ಪರ್ಬದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 


(ಸಂಘಟನಾ ಪುರಸ್ಕಾರ)


ಜೈ ತುಳುನಾಡ್ (ರಿ.) : ಜೈ ತುಳುನಾಡ್ (ರಿ.) ಸಂಘವು ತುಳು ಲಿಪಿಯ ಅನಾವರಣದೊಂದಿಗೆ ಸಂಘಟಿತರಾಗಿ, ಅನೇಕ ಗ್ರಾಮೀಣ ಭಾಗದ ಊರಿಗಳಲ್ಲಿ ತುಳು ಲಿಪಿಯ ನಾಮಫಲಕವನ್ನು ಅಳವಡಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿತು. ಮೊಟ್ಟ ಮೊದಲ ಪ್ರಯತ್ನ ಯಶಸ್ಸಾಗಿತ್ತು.  ತುಳುನಾಡಿನ ಅರಾಧನೆ, ಸಂಸ್ಕøತಿಯ ಅವಹೇಳನಗಳನ್ನು, ನಿಂದನೆಗಳನ್ನು ಖಂಡಿಸುತ್ತಾ ಆಚಾರ-ವಿಚಾರಗಳಿಗೆ ಬೆಂಬಲಿಸುತ್ತಾ ಹೋರಾಟದೊಂದಿಗೆ ಯುವ ಸಮುದಾಯದ ಸಂಘಟನಾ ಶಕ್ತಿಯನ್ನು ವೃದ್ಧಿಸಿಕೊಂಡಿದೆ. ಜನಜಾಗೃತಿ ಅಭಿಯಾನವನ್ನು ಸ್ಥಾಪನಾ ದಿನದಿಂದಲೇ ಆರಂಭಿಸಿದೆ. ತುಳುನಾಡಿನ ಅನೇಕ ಆಚರಣೆಗಳನ್ನು, ಪರಂಪರೆಯನ್ನು ಉಳಿಸಿ ಬೆಳೆಸುತ್ತಿದೆ, ನಶಿಸುತ್ತಿರುವ ಸಾಂಪ್ರದಾಯ ಕಲೆಗಳಿಗೆ ಆಸರೆಯಾಗಿ ಬೆಳೆದಿದೆ.  ನೇತ್ರಾವತಿ ನದಿ ತಿರುವು ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ತುಳು ಭಾಷೆ ಸಂವಿಧಾನಕ್ಕೆ ಸೇರುವ ಮೊದಲು ರಾಜ್ಯದ ಅಧಿಕೃತ ಭಾಷೆಯಾಗಿ ಮಾಡಲು ಟ್ವಿಟರ್  ಅಭಿಯಾನ, ತುಳು ಬರವು-ಕಂಪ್ಯೂಟರ್ ಘಾಂಟ್ ತುಳು ಲಿಪಿಯನ್ನು ಕಂಪ್ಯೂಟರ್, ಮೊಬೈಲ್‍ನಲ್ಲಿ ಬರೆಯಬಹುದಾದಂತಹ ತುಳು ಅಕಾಡೆಮಿ ಅಂಗಿಕೃತ ಯೂನಿಕೋಡ್ ಲಿಪಿಗೆ ಘಾಂಟ್ ತಯಾರಿಸಿ ಸಾಕಷ್ಟು ಜನರು ನಾಮಫಲಕ, ಆಮಂತ್ರಣ ಪತ್ರಿಕೆ, ಪೋಸ್ಪರ್, ಬ್ಯಾನರ್ ಮಾಡಲು ಅನುಕೂಲವಾಗುವಂತೆ ಮಾಡಿದೆ. 300ಕ್ಕೂ ಹೆಚ್ಚು ತುಳು ಲಿಪಿ ಕಲಿಸಬಲ್ಲಂತಹ ಶಿಕ್ಷಕರನ್ನು ತಯಾರು ಮಾಡಿದೆ. ಆನ್ ಲೈನ್, ಆಫ್‍ಲೈನ್ ಮೂಲಕ 20,000ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ರೂಪಿಸಿದೆ. ಈ ಕೆಲಸ ನಿರಂತರವಾಗಿ ಇಂದಿಗೂ ನಡೆಯುತ್ತಿದೆ. ಸಂಘ-ಸಂಸ್ಥೆ, ಕಛೇರಿ, ಭವನ, ಮಂದಿರ, ಚರ್ಚ್, ಮಸೀದಿ, ಶಾಲೆ, ತಂಗುದಾಣ, ಮನೆಯ ಹೆಸರು, ವಾಹನದಲ್ಲಿ ಹೆಸರು ಊರಿನ ಹೆಸರು ಲಿಪಿಯಲ್ಲಿ ಇರಬೇಕೆಂಬ ಆಶಯದೊಂದಿಗೆ ಜನಜಾಗೃತಿ ನಡೆಸಿದೆ.


(ಸಂಘಟನಾ ಪುರಸ್ಕಾರ : ಹೊರ ರಾಜ್ಯ)


ತುಳು ಕೂಟ ಫೌಂಡೇಶನ್ (ರಿ) ನಾಲಸೋಪಾರ, ಮುಂಬೈ : ತುಳು ಕನ್ನಡಿಗರು ಉದರ ಪೋಷಣೆಗಾಗಿ ಜನ್ಮ ಭೂಮಿಯನ್ನು ಬಿಟ್ಟು ಕರ್ಮಭೂಮಿ ಮಹಾರಾಷ್ಟ್ರದ ವಸಾಯಿ ನಾಲಸೋಪಾರ ವಿರಾರ್ ಪರಿಸರದಲ್ಲಿ ನೆಲೆ ನಿಂತವರು, ತುಳು ಕನ್ನಡಿಗರು ನಮ್ಮ ನಾಡಿನ ಕಲೆ, ನೆಲೆ, ಆರಾಧನೆ ಹಾಗೂ ಸಂಸ್ಕøತಿಯನ್ನು ಅನುಷ್ಠಾನಗೊಳಿಸಿ  ಉಳಿಸುವ ಪ್ರಯತ್ನ ಮಾಡಲು ಈ ಸಂಸ್ಥೆಯನ್ನು ವಸಾಯಿ ನಾಲಸೋಪಾರ ವಿರಾರ್ ಪರಿಸರದ ಜನಸ್ನೇಹಿ,  ಅತೀ ನೆಚ್ಚಿನ, ಜನಪರ ಸಂಸ್ಥೆ ತುಳು ಕೂಟ ಫೌಂಡೇಶನ್ (ರಿ) ನಾಲಸೋಪಾರ ಇದೀಗ ಮನೆ ಮಾತಾಗಿದೆ. ಉದಾರ ದಾನಿಗಳ ಸಹಕಾರ ಹಾಗೂ ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹಲವು ಮಹಿಳೆಯರಿಗೆ ಆರ್ಥಿಕ ನಿಧಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದೆ. ಕೊರೋನಾ ಮಹಾಮಾರಿಯ ಸಮಯದಲ್ಲಿ ಸಂಕಷ್ಟದಲ್ಲಿದ್ದ 3650 ಬಡ ಕುಟುಂಬಗಳಿಗೆ ಸರಿ ಸುಮಾರು 16 ಲಕ್ಷ ರೂಪಾಯಿಯ ಆಹಾರ ಸಾಮಗ್ರಿಗಳನ್ನು ಅವರವರ ಮನೆಗಳಿಗೆ ತಲುಪಿಸಿದ್ದಾರೆ. ಹಲವು ಗಣ್ಯ ವ್ಯಕ್ತಿಗಳನ್ನು ವಿಶೇಷವಾಗಿ ಗೌರವಿಸಿದೆ. ಜೊತೆಗೆ ಸುಮಾರು 150 ಸದÀಸ್ಯರಿಗೆ ತುಳು ಲಿಪಿ ಕಲಿಸುವ ವಿಶೇಷ ತರಭೇತಿಯನ್ನು ನೀಡಿದ್ದಾರೆ. ಸಂಸ್ಥೆಯಲ್ಲಿ ಸರಿ ಸುಮಾರು 1200 ಸದಸ್ಯರು ನೋಂದಾಯಿಸಲ್ಪಟ್ಟಿದ್ದು ತುಳುವಿನ ಏಳಿಗೆ ಮತ್ತು ಉಳಿವಿಗಾಗಿ ಶ್ರಮಿಸುತ್ತಿದೆ. 


(ಸಂಘಟನಾ ಪುರಸ್ಕಾರ : ಹೊರ ರಾಷ್ಟ್ರ)


ತುಳು ಕೂಟ ಕತಾರ್ : ಕತಾರ್ ರಾಜ್ಯದಲ್ಲಿ ತುಳು ಸಮುದಾಯವನ್ನು ಸಂಘಟಿಸಲು, 1999 ರಲ್ಲಿ ಕತಾರ್‍ನಲ್ಲಿನ ಭಾರತೀಯ ರಾಯಭಾರಿ ಹೆಚ್.ಇ.ಆರ್.ಎಲ್. ನಾರಾಯಣನ್ ಅವರ ವಿಶೇಷ ಆಸಕ್ತಿಯಿಂದ ತುಳು ಕೂಟ ಹುಟ್ಟಿಕೊಂಡಿತು. ತುಳುವರ ಕಲ್ಯಾಣ ಚಟುವಟಿಕೆ ಸೇರಿದಂತೆ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಯೋಜನೆಗಳನ್ನು ಶ್ರೇಷ್ಠ ಸಂಸ್ಕೃತಿಯನ್ನು ಉತ್ತೇಜಿಸಲು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಮತ್ತು ಪೆÇ್ರೀತ್ಸಾಹಿಸುವುದರ ಜೊತೆಗೆ ತುಳುನಾಡಿನ ಕಲಾವಿದರಿಗೆ ಅಂತರರಾಷ್ಟ್ರೀಯ ಮಾನ್ಯತೆಗಾಗಿ ಕತಾರ್‍ನಲ್ಲಿ ಪ್ರದರ್ಶನ ನೀಡಲು ಅವಕಾಶವನ್ನು ನೀಡಿದೆ. ತುಳುವರಲ್ಲಿ ವಿಶೇಷವಾಗಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನ್ವೇಷಿಸಲು ಟ್ಯಾಲೆಂಟ್ ಸರ್ಚ್, ಚಿತ್ರಕಲೆ ಸ್ಪರ್ಧೆ, ತುಳುವರಿಗೆ ಪಿಕ್ನಿಕ್, ತುಳು ಪರ್ಬ, ನೃತ್ಯ ಸ್ಪರ್ಧೆ, ಕ್ರೀಡಾಕೂಟ, ಯೋಗ, ತುಳುನಾಡಿನ ಖಾದ್ಯಗಳು, ಗಣ್ಯ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ, ತುಳು ಚಿತ್ರರಂಗ-ರಂಗಭೂಮಿ ಕಲಾವಿದರಿಂದ ಮನರಂಜನೆ ಕಾರ್ಯಕ್ರಮ, ತುರ್ತು ರಕ್ತದಾನ, ಆರೋಗ್ಯ ಶಿಬಿರ, ಯಕ್ಷಗಾನ-ನಾಟಕ ಪ್ರದರ್ಶನ, ದೇಶೀಯ ಕ್ರೀಡೆಗಳ ಸಂಯೋಜನೆ, ತುಳುನಾಡಿನ ವಿಶೇಷ ಸಾಧಕರನ್ನ ಆಹ್ವಾನಿಸಿ ಕಾರ್ಯಕ್ರಮ ಸಂಯೋಜನೆ, ಕತಾರ್‍ನಲ್ಲಿನ ಭಾರತೀಯರಿಗೆ ವಿಶೇಷ ನೆರವು, ಭಾರತದಲ್ಲಿನ ಅನೇಕ ದುರ್ಘಟನೆಯಿಂದ ಸಂತ್ರಸ್ತರಾದವರಿಗೆ ವಿಶೇಷ ನೆರವು, ಭಾರತಕ್ಕೆ ವಿಮಾನಯಾನದಲ್ಲಿ ಗೊಂದಲ ಇದ್ದಲ್ಲಿ ಅಥವಾ ಅಗತ್ಯತೆಯ ಬಗ್ಗೆ ಜಾಗೃತಿ ಹಾಗೂ ಮನವಿಯ ಸ್ಪಂದನೆಯ ಮೂಲಕ ಸೌಹಾರ್ದತೆಯಿಂದ ಪರಿಹಾರ ನಡೆಸಿದೆ. ಸರ್ವ-ಧರ್ಮ ಬಾಂಧವರು ಕತಾರ್‍ನ ತುಳು ಕೂಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷವಾಗಿದೆ.

ಈ ಎಲ್ಲಾ ಸಾಧಕರನ್ನು ಗುರುತಿಸಿ ತುಳು ಸಾಹಿತ್ಯ ಅಕಾಡೆಮಿಯ ಈ ಬಾರಿಯ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್, ಸದಸ್ಯರುಗಳಾದ ಲೀಲಾಕ್ಷ  ಕರ್ಕೇರ, ಶ್ರೀಮತಿ ಕಾಂತಿ ಶೆಟ್ಟಿ, ಬೆಂಗಳೂರು, ನಾಗೇಶ್ ಕುಲಾಲ್, ಕುಳಾಯಿ, ನರೇಂದ್ರ ಕೆರೆಕಾಡು ಹಾಗೂ ರಿಜಿಸ್ಟ್ರಾರ್ ಕವಿತಾ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 2021ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕøತರು ಹಾಗೂ ಪುಸ್ತಕ ಬಹುಮಾನ ವಿಜೇತರ ಪಟ್ಟಿ ಪ್ರಕಟಿಸಿದ ತುಳು ಸಾಹಿತ್ಯ ಅಕಾಡೆಮಿ Rating: 5 Reviewed By: karavali Times
Scroll to Top