ಅಕ್ಟೋಬರ್ 2 ರಂದು ಸಿಟಿ ಗೋಲ್ಡ್ ನ ‘ಕೆವಾ ಬಾಕ್ಸ್’ ಅಧಿಕೃತ ಅನಾವರಣ, ಉದ್ಘಾಟನೆ ಪ್ರಯುಕ್ತ ‘ನಮಸ್ತೇ ಇಂಡಿಯಾ’ ಸಾಂಸ್ಕೃತಿಕ ವೈಶಿಷ್ಟ್ಯ ಕಾರ್ಯಕ್ರಮ - Karavali Times ಅಕ್ಟೋಬರ್ 2 ರಂದು ಸಿಟಿ ಗೋಲ್ಡ್ ನ ‘ಕೆವಾ ಬಾಕ್ಸ್’ ಅಧಿಕೃತ ಅನಾವರಣ, ಉದ್ಘಾಟನೆ ಪ್ರಯುಕ್ತ ‘ನಮಸ್ತೇ ಇಂಡಿಯಾ’ ಸಾಂಸ್ಕೃತಿಕ ವೈಶಿಷ್ಟ್ಯ ಕಾರ್ಯಕ್ರಮ - Karavali Times

728x90

22 September 2022

ಅಕ್ಟೋಬರ್ 2 ರಂದು ಸಿಟಿ ಗೋಲ್ಡ್ ನ ‘ಕೆವಾ ಬಾಕ್ಸ್’ ಅಧಿಕೃತ ಅನಾವರಣ, ಉದ್ಘಾಟನೆ ಪ್ರಯುಕ್ತ ‘ನಮಸ್ತೇ ಇಂಡಿಯಾ’ ಸಾಂಸ್ಕೃತಿಕ ವೈಶಿಷ್ಟ್ಯ ಕಾರ್ಯಕ್ರಮ

ಮಂಗಳೂರು, ಸೆಪ್ಟೆಂಬರ್ 20, 2022 (ಕರಾವಳಿ ಟೈಮ್ಸ್) : ಜುವೆಲ್ಲರಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್ ಇದರ ಅಂಗ ಸಂಸ್ಥೆಯಾದ ಕೆವಾ ಬಾಕ್ಸ್ ಇದರ ಅಧಿಕೃತ ಅನಾವರಣ ಅಕ್ಟೋಬರ್ 2 ರಂದು ನಡೆಯಲಿದೆ. ಸಂಸ್ಥೆಯ ಅಧಿಕೃತ ಅನಾವರಣದ ಅಂಗವಾಗಿ ನಗರದ ನೆಕ್ಸಸ್ ಮಾಲ್ (ಫಿಝಾ ಮಾಲ್) ನಲ್ಲಿ ‘ಸಾಂಸ್ಕೃತಿಕ ವೈಶಿಷ್ಟ ನಮಸ್ತೇ ಇಂಡಿಯಾ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೆವಾ ಬಾಕ್ಸ್ ಸ್ಥಾಪಕ ಸಿಇಒ ಮುಹಮ್ಮದ್ ದಿಲ್‍ಶಾದ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಜೆ 4 ಗಂಟೆಗೆ ಆರಂಭವಾಗುವ ಈ ವಿಶೇಷ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿ ಡೈಸಿ ಶಾ ಭಾಗವಹಿಸಲಿದ್ದಾರೆ. ಖ್ಯಾತ ಸಾಂಸ್ಕೃತಿಕ ತಂಡವಾದ ಹರಿ ಮತ್ತು ಚೇತನಾ ಅವರಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ವೇಳೆ ಭಾರತದ ಫ್ಯಾಶನ್ ಉದ್ಯಮದ ಪ್ರಮುಖ ದಿಗ್ಗಜರಿಂದ ಫ್ಯಾಶನ್ ಶೋ ಕೂಡಾ ಆಯೋಜಿಸಲಾಗಿದೆ ಎಂದರು. 

ವಿಶ್ವದ ಆಭರಣ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ಭಾರತ, ಇಟಲಿ ಮತ್ತು ಟರ್ಕಿಯ ಹಗುರ ಹಾಗೂ ನವನವೀನ ಕಲಾತ್ಮಕತ ವಿನ್ಯಾಸಗಳಿಂದ ರೂಪಿಸಲಾದ ಚಿನ್ನಾಭರಣಗಳ ಅಪಾರ ಸಂಗ್ರಹವನ್ನು ಕೆವಾಬಾಕ್ಸ್ ಹೊಂದಿದೆ. ದುಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾದ ಪ್ರೈಡ್ ಗ್ರೂಪ್‍ನೊಂದಿಗೆ ಸಹಭಾಗಿತ್ವ ಮತ್ತು ಸಿಟಿಗೋಲ್ಡ್ ಮತ್ತು ಡೈಮಂಡ್ಸ್ ಗ್ರೂಪ್‍ನ ಆಶ್ರಯದಲ್ಲಿ ಕೆವಾಬಾಕ್ಸ್ ಆರು ತಿಂಗಳ ಹಿಂದೆ ನೆಕ್ಸಸ್ ಮಾಲ್‍ನಲ್ಲಿ ಕಾರ್ಯಾರಂಭಿಸಿದೆ ಎಂದರು. 

ಫ್ಯಾಶನ್ ಆಭರಣ ಪ್ರಿಯರ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆವಾಬಾಕ್ಸ್ ತನ್ನ ಮಳಿಗೆಗಳನ್ನು ಶೀಘ್ರವೇ ದುಬೈ, ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿ ವಿಸ್ತರಿಸಲು ಮುಂದಾಗಿದೆ. ಮುಂದಿನ ವರ್ಷದಲ್ಲಿ ಭಾರತಾದ್ಯಂತ 50 ಮಳಿಗೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ವೇಗವಾಗಿ ಬೆಳೆಯುತ್ತಿರುವ ನೂತನ ಜುವೆಲ್ಲರಿ ಬ್ರಾಂಡ್ ಆಗಿ ಈಗಾಗಲೇ ಕೆವಾ ಬಾಕ್ಸ್ ಅಂತಾರಾಷ್ಟ್ರೀಯ ಐಕಾನಿಕ್ ಪ್ರಶಸ್ತಿಯನ್ನು ಕೂಡಾ ಪಡೆದಿದೆ ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ನೌಶಾದ್, ಸಂತೋಷ್ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಅಕ್ಟೋಬರ್ 2 ರಂದು ಸಿಟಿ ಗೋಲ್ಡ್ ನ ‘ಕೆವಾ ಬಾಕ್ಸ್’ ಅಧಿಕೃತ ಅನಾವರಣ, ಉದ್ಘಾಟನೆ ಪ್ರಯುಕ್ತ ‘ನಮಸ್ತೇ ಇಂಡಿಯಾ’ ಸಾಂಸ್ಕೃತಿಕ ವೈಶಿಷ್ಟ್ಯ ಕಾರ್ಯಕ್ರಮ Rating: 5 Reviewed By: karavali Times
Scroll to Top