ಮಾಡಾವು ದಫ್ ಸ್ಪರ್ಧೆ : ಕೃಷ್ಣಾಪುರ ಲಜ್‍ನತುಲ್ ಅನ್ಸಾರಿಯಾ ತಂಡಕ್ಕೆ ಪ್ರಥಮ ಸ್ಥಾನ - Karavali Times ಮಾಡಾವು ದಫ್ ಸ್ಪರ್ಧೆ : ಕೃಷ್ಣಾಪುರ ಲಜ್‍ನತುಲ್ ಅನ್ಸಾರಿಯಾ ತಂಡಕ್ಕೆ ಪ್ರಥಮ ಸ್ಥಾನ - Karavali Times

728x90

11 January 2023

ಮಾಡಾವು ದಫ್ ಸ್ಪರ್ಧೆ : ಕೃಷ್ಣಾಪುರ ಲಜ್‍ನತುಲ್ ಅನ್ಸಾರಿಯಾ ತಂಡಕ್ಕೆ ಪ್ರಥಮ ಸ್ಥಾನ

ಪುತ್ತೂರು, ಜನವರಿ 12, 2023 (ಕರಾವಳಿ ಟೈಮ್ಸ್) : ಎಸ್ಕೆಎಸ್‍ಎಸ್‍ಎಫ್  ಮಾಡಾವು ಶಾಖೆ ಇದರ ಆಶ್ರಯದಲ್ಲಿ ಸೌಹಾರ್ದ ಸಂಗಮದ ಪ್ರಯುಕ್ತ ಮಾಡಾವು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಸುರತ್ಕಲ್-ಕೃಷ್ಣಾಪುರದ ಲಜ್ ನತುಲ್ ಅನ್ಸಾರಿಯಾ ದಫ್ ತಂಡ, ಉಳ್ಳಾಲ-ಅಳೇಕಲದ ಅನ್ನಜಾತ್ ದಫ್ ತಂಡ ಹಾಗೂ ಶಿರ್ವ-ಮಂಚಕಲ್ ಅಲ್-ಅಮೀನ್ ದಫ್ ತಂಡ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಕಟಪಾಡಿ-ಮಣಿಪುರ ದಫ್ ತಂಡದ ಹಾಡುಗಾರರು ಉತ್ತಮ ಹಾಡುಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.


ಮಾಡಾವು ಜುಮಾ ಮಸೀದಿ ಖತೀಬ್ ಮುಹಮ್ಮದ್ ರಫೀಕ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು.  ಸಯ್ಯಿದ್ ಸರ್ಫುದ್ದೀನ್ ತಂಙಳ್ ಸಾಲ್ಮರ ಪ್ರಾರ್ಥನೆಗೈದರು. ದಫ್ ಸ್ವಾಗತ ಸಮಿತಿ ಅಧ್ಯಕ್ಷ ಪುತ್ತುಂಞÂ ಮಾಡಾವುಕಟ್ಟೆ ಅಧ್ಯಕ್ಷತೆ ವಹಿಸಿದ್ದರು.


ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸದಾಶಿವ ರೈ ದಂಬೆಕಾನ, ಬಿಜೆಎಂ ಗೌರವಾಧ್ಯಕ್ಷ ಎಂ ಇಬ್ರಾಹಿಂ ಹಾಜಿ, ಅಧ್ಯಕ್ಷ ಪಿ ಎಂ ಅಬ್ದುಲ್ ಖಾದರ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಹಾಜಿ ಮಹಮೂದ್ ಪಿ ವೈ, ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನದ ಕಾರ್ಯದರ್ಶಿ ಗೋಪಾಲಕೃಷ್ಣ ಪೂಜಾರಿ, ಕೆಯ್ಯೂರು ಸೇವಾ ಸಹಕಾರಿ ಬ್ಯಾಂಕ್ ಮಾಜಿ ಪ್ರಬಂಧಕ ಸದಾಶಿವ ಭಟ್, ಕೆದಂಬಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ, ಮಾಡಾವು ಗೌಸಿಯಾ ಯಂಗ್ ಮೆನ್ಸ್ ಎಸೋಸಿಯೇಶನ್ ಗೌರವಾಧ್ಯಕ್ಷ ಎಂ ಹುಸೈನಾರ್ ಸಂತೋಷ್, ಅಧ್ಯಕ್ಷ ಹಾರಿಸ್ ಪಾತುಂಜ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಕ್ಯಾಂಪೆÇ್ಕೀ, ಮಾಡಾವು ಮಸೀದಿ ಉಪಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಫ್ಯಾಮಿಲಿ, ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಕೆ ಜಯರಾಮ ರೈ, ಕೆಯ್ಯೂರು ಗ್ರಾ ಪಂ ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಎ ಕೆ ಅಬ್ದುಲ್ ಖಾದರ್ ಮೇರ್ಲ, ಮಾಜಿ ಸದಸ್ಯರಾದ ಮೋಹನ್ ರೈ ಬೇರಿಕೆ, ಶಿವರಾಮ ರೈ ಕಜೆ, ಪ್ರಾಂಶುಪಾಲ ಇಸ್ಮಾಯಿಲ್ ಮಾಸ್ಟರ್, ಉಪ ಪ್ರಾಂಶುಪಾಲ ಕೆ ಎಸ್ ವಿನೋದ್ ಕುಮಾರ್, ಇಬ್ರಾಹಿಂ ಹಾಜಿ ಫ್ಯಾಮಿಲಿ, ಜಮಾಲ್ ಮಣಿಮಜಲ್, ಎಸ್ ಕೆ ಝೈನುದ್ದೀನ್ ಮಾಡಾವು (ದುಬೈ), ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ, ಕುಂಬ್ರ ವಲಯಾಧ್ಯಕ್ಷ ಕರೀಂ ದಾರಿಮಿ, ತಿಂಗಳಾಡಿ ಕ್ಲಸ್ಟರ್ ಅಧ್ಯಕ್ಷ ಇಬ್ರಾಹಿಂ ಹಾಜಿ, ಮಾಡಾವು ಶಾಖಾದ್ಯಕ್ಷ ನಿಜಾಮುದ್ದೀನ್ ಹೋನೆಸ್ಟ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಟಿ ಎಂ, ಕೋಶಾಧಿಕಾರಿ ರಫೀಕ್ ದಟ್ಟ, ಇಸ್ಮಾಯಿಲ್ ಅಸ್ಲಮಿ ಕಟ್ಟತ್ತಾರು, ಬಶೀರ್ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್, ಶಾಫಿ ಕಣಿಯಾರ್, ಬಿ ಕೆ ಹನೀಫ್ ಮುಸ್ಲಿಯಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸ್ವಾಗತ ಸಮಿತಿ ಕನ್ವೀನರ್ ಇಬ್ರಾಹಿಂ ಅಯ್ಯನಕಟ್ಟೆ ಸ್ವಾಗತಿಸಿ, ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಅಧ್ಯಾಪಕ ಎಸ್ ಎಂ ಇಬ್ರಾಹಿಂ ಮಾಸ್ಟರ್ ಪ್ರಸ್ತಾವನೆಗೈದರು. ನೌಫಲ್ ಕುಡ್ತಮುಗೇರು ಹಾಗೂ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮಾಡಾವು ದಫ್ ಸ್ಪರ್ಧೆ : ಕೃಷ್ಣಾಪುರ ಲಜ್‍ನತುಲ್ ಅನ್ಸಾರಿಯಾ ತಂಡಕ್ಕೆ ಪ್ರಥಮ ಸ್ಥಾನ Rating: 5 Reviewed By: karavali Times
Scroll to Top