ಸುಜೀರ್ : ಗಾಂಜಾ ಸೇವಿಸಿ ಸಾರ್ವಜನಿಕವಾಗಿ ಅನುಚಿತ ವರ್ತಿಸುತ್ತಿದ್ದ ಆರೋಪಿ ಪೊಲೀಸ್ ಬಲೆಗೆ - Karavali Times ಸುಜೀರ್ : ಗಾಂಜಾ ಸೇವಿಸಿ ಸಾರ್ವಜನಿಕವಾಗಿ ಅನುಚಿತ ವರ್ತಿಸುತ್ತಿದ್ದ ಆರೋಪಿ ಪೊಲೀಸ್ ಬಲೆಗೆ - Karavali Times

728x90

6 February 2023

ಸುಜೀರ್ : ಗಾಂಜಾ ಸೇವಿಸಿ ಸಾರ್ವಜನಿಕವಾಗಿ ಅನುಚಿತ ವರ್ತಿಸುತ್ತಿದ್ದ ಆರೋಪಿ ಪೊಲೀಸ್ ಬಲೆಗೆ

ಬಂಟ್ವಾಳ, ಫೆಬ್ರವರಿ 07, 2023 (ಕರಾವಳಿ ಟೈಮ್ಸ್) : ಪುದು ಗ್ರಾಮದ ಸುಜೀರ್ ಶಾಲಾ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದಲ್ಲಿ ಸುಜೀರ್ ಬದಿಗುಡ್ಡೆ ನಿವಾಸಿ ಉಮರ್ ಫಾರೂಕ್ ಎಂಬವರ ಪುತ್ರ ಶರ್ಫುದ್ದೀನ್ ((27) ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸೋಮವಾರ (ಫೆ 6) ಬಂಧಿಸಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟ ಹಿನ್ನಲೆಯಲ್ಲಿ ಆತನ ವಿರುದ್ದ ಠಾಣಾ ಅಪರಾಧ ಕ್ರಮಾಂಕ 9/2023 ಕಲಂ 27 (ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಜೀರ್ : ಗಾಂಜಾ ಸೇವಿಸಿ ಸಾರ್ವಜನಿಕವಾಗಿ ಅನುಚಿತ ವರ್ತಿಸುತ್ತಿದ್ದ ಆರೋಪಿ ಪೊಲೀಸ್ ಬಲೆಗೆ Rating: 5 Reviewed By: karavali Times
Scroll to Top