ಮಾರ್ಚ್ 19-20 ರಂದು ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-7 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ - Karavali Times ಮಾರ್ಚ್ 19-20 ರಂದು ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-7 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ - Karavali Times

728x90

16 March 2023

ಮಾರ್ಚ್ 19-20 ರಂದು ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-7 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ, ಮಾರ್ಚ್ 17, 2023 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಲ್ಪಡುವ ಸ್ಥಳೀಯ 6 ತಂಡಗಳ ನಿಗದಿತ ಓವರ್ ಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಸೀಸನ್-7 ಕೂಟವು ಮಾರ್ಚ್ 19 ರಂದು ಭಾನುವಾರ ಹಾಗೂ 20 ರಂದು ಸೋಮವಾರ ಆಲಡ್ಕ ಮೈದಾನದಲ್ಲಿ ನಡೆಯಲಿದೆ. 

ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 12 ಸಾವಿರ ರೂಪಾಯಿ ನಗದು ಹಾಗೂ ಭೂಯಾ ಟ್ರೋಫಿ ನೀಡಲಾಗುವುದು ಅಲ್ಲದೆ ವೈಯುಕ್ತಿಕ ಬಹುಮನಗಳಾದ ಉತ್ತಮ ದಾಂಡುಗಾರ, ದಾಳಿಗಾರ, ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಸಂಚಾಲಕ ಶಫೀಕ್ ಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರ್ಚ್ 19-20 ರಂದು ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-7 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ Rating: 5 Reviewed By: karavali Times
Scroll to Top