ಬಂಟ್ವಾಳ : ನೂತನ ತಹಶೀಲ್ದಾರ್ ಆಗಿ ಎಸ್.ಬಿ. ಕೂಡಲಗಿ ಅಧಿಕಾರ ಸ್ವೀಕಾರ - Karavali Times ಬಂಟ್ವಾಳ : ನೂತನ ತಹಶೀಲ್ದಾರ್ ಆಗಿ ಎಸ್.ಬಿ. ಕೂಡಲಗಿ ಅಧಿಕಾರ ಸ್ವೀಕಾರ - Karavali Times

728x90

2 March 2023

ಬಂಟ್ವಾಳ : ನೂತನ ತಹಶೀಲ್ದಾರ್ ಆಗಿ ಎಸ್.ಬಿ. ಕೂಡಲಗಿ ಅಧಿಕಾರ ಸ್ವೀಕಾರ

ಬಂಟ್ವಾಳ, ಮಾರ್ಚ್ 02, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ನೂತನ ತಹಶೀಲ್ದಾರ್ ಆಗಿ ಎಸ್ ಬಿ ಕೂಡಲಗಿ ಅವರನ್ನು ನೇಮಿಸಿ ರಾಜ್ಯ ಸರಕಾರ ಅದೇಶಿಸಿದೆ. 

ಬಂಟ್ವಾಳ ತಹಶಿಲ್ದಾರ್ ಹುದ್ದೆಯನ್ನು ಪ್ರಭಾರ ನೆಲೆಯಲ್ಲಿ ನಿಭಾಯಿಸುತ್ತಿದ್ದ ದಯಾನಂದ ಅವರನ್ನು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾಯಿಸಲಾಗಿದ್ದು, ಖಾಲಿ ಬಿದ್ದಿರುವ ಬಂಟ್ವಾಳ ತಾಲೂಕು ತಹಶೀಲ್ದಾರ್ ಹುದ್ದೆಗೆ ಗ್ರೇಡ್-1 ಹಂತದ ಅಧಿಕಾರಿ ಕೂಡಲಗಿ ಅವರನ್ನು ನೇಮಿಸಲಾಗಿದೆ. ಎಸ್ ಬಿ ಕೂಡಲಗಿ ಅವರು ಗುರುವಾರ ನಿರ್ಗಮಿತ ತಹಶೀಲ್ದಾರ್ ಅವರಿಂದ ಅಧಿಕಾರ ಸ್ವೀಕರಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ನೂತನ ತಹಶೀಲ್ದಾರ್ ಆಗಿ ಎಸ್.ಬಿ. ಕೂಡಲಗಿ ಅಧಿಕಾರ ಸ್ವೀಕಾರ Rating: 5 Reviewed By: karavali Times
Scroll to Top