ದೇಶದ ವಿವಿಧೆಡೆ ನಡೆದ ಉಪಚುನಾವಣೆಯಲ್ಲಿ ಅಚ್ಚರಿ ಫಲಿತಾಂಶದ ಮೂಲಕ ಮೇಲುಗೈ ಸಾಧಿಸಿದ ಕೈ ಪಾಳಯ : ಬಿಜೆಪಿಗೆ ತೀವ್ರ ಹಿನ್ನಡೆ - Karavali Times ದೇಶದ ವಿವಿಧೆಡೆ ನಡೆದ ಉಪಚುನಾವಣೆಯಲ್ಲಿ ಅಚ್ಚರಿ ಫಲಿತಾಂಶದ ಮೂಲಕ ಮೇಲುಗೈ ಸಾಧಿಸಿದ ಕೈ ಪಾಳಯ : ಬಿಜೆಪಿಗೆ ತೀವ್ರ ಹಿನ್ನಡೆ - Karavali Times

728x90

2 March 2023

ದೇಶದ ವಿವಿಧೆಡೆ ನಡೆದ ಉಪಚುನಾವಣೆಯಲ್ಲಿ ಅಚ್ಚರಿ ಫಲಿತಾಂಶದ ಮೂಲಕ ಮೇಲುಗೈ ಸಾಧಿಸಿದ ಕೈ ಪಾಳಯ : ಬಿಜೆಪಿಗೆ ತೀವ್ರ ಹಿನ್ನಡೆ

ನವದೆಹಲಿ, ಮಾರ್ಚ್ 03, 2023 (ಕರಾವಳಿ ಟೈಮ್ಸ್) : ದೇಶದ ನಾಲ್ಕು ರಾಜ್ಯಗಳ ಐದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಮೂರು ಕಡೆ ಗೆದ್ದು ಬೀಗಿರುವ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ. ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. 

ಮಹಾರಾಷ್ಟ್ರದ ಕಸ್ಬಾ ಉಪಚುನಾವಣೆಯಲ್ಲಿ ಅಘಾಡಿ ಕೂಟದ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸುವ ಮೂಲಕ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಕಳೆದ 25 ವರ್ಷಗಳಿಂದ ಬಿಜೆಪಿ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರವನ್ನು ಇದೀಗ ಕಾಂಗ್ರೆಸ್ ಗೆದ್ದುಕೊಂಡಿದೆ. ಚಿಂದ್ವಾಡವನ್ನು ಮಾತ್ರ ಬಿಜೆಪಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. 

ಪಶ್ಚಿಮ ಬಂಗಾಳದ ಸಾಗರ್ ದಿಘೀ ಕ್ಷೇತ್ರದಲ್ಲೂ ಕೂಡಾ ಅಚ್ಚರಿಯ ಫಲಿತಾಂಶ ಹೊರ ಬಂದಿದೆ. ಟಿಎಂಸಿ-ಬಿಜೆಪಿ ನಡುವಿನ ಕಾದಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ 22,980 ಮತಗಳ ಅಂತರದಿಂದ ಅದ್ಭುತ ಗೆಲುವು ಸಾಧಿಸಿದ್ದಾರೆ. 1972ರ ಬಳಿಕ ಈ ಕ್ಷೇತ್ರವನ್ನು ಮೊದಲ ಬಾರಿಗೆ ಗೆದ್ದುಕೊಂಡಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಶೂನ್ಯ ಸಂಪಾದನೆ ಮಾಡಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹವಾಗಿದೆ. 

ತಮಿಳುನಾಡಿನ ಈರೋಡ್ ಪೂರ್ವ ಕ್ಷೇತ್ರದಲ್ಲೂ ಡಿಎಂಕೆ ಬೆಂಬಲಿತ ಕಾಂಗ್ರೆಸ್ ಅಧ್ಯಕ್ಷ ಇವಿಕೆ ಇಳಂಗೋವನ್ 48 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಎಐಎಡಿಎಂಕೆ ಅಭ್ಯರ್ಥಿ ಹೀನಾಯ ಸೋಲು ಅನುಭವಿಸಿದ್ದಾರೆ. ಇಳಂಗೋವನ್ ಪರವಾಗಿ ಸ್ಟಾಲಿನ್ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದರು. 

ಅರುಣಾಚಲದಲ್ಲಿ ಒಂದು ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಜಾರ್ಖಂಡ್‍ನಲ್ಲಿ ಕಾಂಗ್ರೆಸ್ ವಿರುದ್ಧ ಜಾರ್ಖಂಡ್ ಸ್ಟುಡೆಂಟ್ಸ್ ಯೂನಿಯನ್ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದೇಶದ ವಿವಿಧೆಡೆ ನಡೆದ ಉಪಚುನಾವಣೆಯಲ್ಲಿ ಅಚ್ಚರಿ ಫಲಿತಾಂಶದ ಮೂಲಕ ಮೇಲುಗೈ ಸಾಧಿಸಿದ ಕೈ ಪಾಳಯ : ಬಿಜೆಪಿಗೆ ತೀವ್ರ ಹಿನ್ನಡೆ Rating: 5 Reviewed By: karavali Times
Scroll to Top