ಕಾರ್ಮಿಕ ವಿರೋಧಿ ಬಿಜೆಪಿಯನ್ನು ಕರ್ನಾಟಕದಿಂದ ತೊಲಗಿಸಿ : ಕಾಮ್ರೇಡ್ ಶಂಕರ್ ಕರೆ - Karavali Times ಕಾರ್ಮಿಕ ವಿರೋಧಿ ಬಿಜೆಪಿಯನ್ನು ಕರ್ನಾಟಕದಿಂದ ತೊಲಗಿಸಿ : ಕಾಮ್ರೇಡ್ ಶಂಕರ್ ಕರೆ - Karavali Times

728x90

4 May 2023

ಕಾರ್ಮಿಕ ವಿರೋಧಿ ಬಿಜೆಪಿಯನ್ನು ಕರ್ನಾಟಕದಿಂದ ತೊಲಗಿಸಿ : ಕಾಮ್ರೇಡ್ ಶಂಕರ್ ಕರೆ

ಬಂಟ್ವಾಳ, ಮೇ 05, 2023 (ಕರಾವಳಿ ಟೈಮ್ಸ್) : ಇಂದು ಕಾರ್ಮಿಕ ವರ್ಗ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ನಮ್ಮನ್ನಾಳುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರದ ನೀತಿಗಳು ಕಾರ್ಮಿಕ ವಿರೋಧಿಯಾಗಿರುವುದೇ ಇದಕ್ಕೆ ಕಾರಣ. ಈ ಕಾರಣಕ್ಕಾಗಿ ರಾಜ್ಯ ಬಿಜೆಪಿ ಸರಕಾರವನ್ನು ಸೋಲಿಸಿ ಸಂವಿಧಾನ-ಪ್ರಜಾಪ್ರಭುತ್ವವನ್ನು ಉಳಿಸುವಂತೆ ಎಐಸಿಸಿಟಿಯು ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಿಪಿಐಎಂಎಲ್ (ಲಿಬರೇಷನ್) ಕೇಂದ್ರ ಸಮಿತಿ ಸದಸ್ಯ ಕಾಮ್ರೇಡ್ ಶಂಕರ್ ರಾಜ್ಯದ ಜನತೆಗೆ ಕರೆ ನೀಡಿದರು. 

ಗುರುವಾರ ಬಿ ಸಿ ರೋಡಿನಲ್ಲಿ ನಡೆದ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎಐಸಿಸಿಟಿಯು) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಸರಕಾರವು ಕಾರ್ಮಿಕರ ಪಾಲಿಗೆ ಮರಣ ಶಾಸನವನ್ನು ಬರೆದಿಡುತ್ತಿದೆ. ಹಿಂದೆಂದೂ ಇಲ್ಲದಂತಹ ಭ್ರಷ್ಟಾಚಾರ, ಬೆಲೆ ಏರಿಕೆ, ಶೈಕ್ಷಣಿಕ, ವೈದ್ಯಕೀಯ ಮೂಲ ಸೌಕರ್ಯಗಳ ನಾಶ, ಯುವಜನರ ಬದುಕಿಗೆ ಮಾರಕವಾಗಿರುವ ನಿರುದ್ಯೋಗ, ಮಹಿಳೆಯರ ಮೇಲೆ, ಅಲ್ಪಸಂಖ್ಯಾತರ ಮೇಲಿನ ದಾಳಿ ಇವುಗಳಿಂದ ಜನತೆ ತತ್ತರಿಸಿದ್ದಾರೆ. ಈ ಪರಿಸ್ಥಿತಿ ತಂದ ಬಿಜೆಪಿ ಸರಕಾರವನ್ನು ಮಣಿಸಲೇಬೇಕಾದ ಅನಿವಾರ್ಯತೆ ಕಾರ್ಮಿಕ ವರ್ಗದ ಮುಂದಿದೆ ಎಂದರಲ್ಲದೆ ಸಿಪಿಐಎಂಎಲ್ ಪಕ್ಷದಿಂದ ಕೋಮುವಾದ ಸೋಲಿಸಿ ಕರ್ನಾಟಕ ಉಳಿಸಿ ಪ್ರಜಾಪ್ರಭುತ್ವ ಸಂವಿದಾನ ರಕ್ಷಿಸಲು ಅಭಿಯಾನ ಕೈಗೊಳ್ಳಲಾಗಿದೆ ಎಂದರು. 

ಸಭೆಯಲ್ಲಿ ಎಐಸಿಸಿಟಿಯು ಜಿಲ್ಲಾದ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಕೆ ಇ ಮೋಹನ್, ನ್ಯಾಯವಾದಿ ತುಳಸೀದಾಸ್ ವಿಟ್ಲ, ಪ್ರಮುಖ ಸತೀಶ್ ಕುಮಾರ್ ಮಂಗಳೂರು ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕಾರ್ಮಿಕ ವಿರೋಧಿ ಬಿಜೆಪಿಯನ್ನು ಕರ್ನಾಟಕದಿಂದ ತೊಲಗಿಸಿ : ಕಾಮ್ರೇಡ್ ಶಂಕರ್ ಕರೆ Rating: 5 Reviewed By: karavali Times
Scroll to Top