ಬಗಡಕಜೆಕಾರು : ಮದ್ಯಪಾನ ನಡೆಸಲು ಅನುವು ಮಾಡಿಕೊಟ್ಟ ಆರೋಪದಲ್ಲಿ ಪಂಚಾಯತ್ ಸದಸ್ಯೆ ಪೊಲೀಸ್ ವಶಕ್ಕೆ - Karavali Times ಬಗಡಕಜೆಕಾರು : ಮದ್ಯಪಾನ ನಡೆಸಲು ಅನುವು ಮಾಡಿಕೊಟ್ಟ ಆರೋಪದಲ್ಲಿ ಪಂಚಾಯತ್ ಸದಸ್ಯೆ ಪೊಲೀಸ್ ವಶಕ್ಕೆ - Karavali Times

728x90

25 April 2020

ಬಗಡಕಜೆಕಾರು : ಮದ್ಯಪಾನ ನಡೆಸಲು ಅನುವು ಮಾಡಿಕೊಟ್ಟ ಆರೋಪದಲ್ಲಿ ಪಂಚಾಯತ್ ಸದಸ್ಯೆ ಪೊಲೀಸ್ ವಶಕ್ಕೆ



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬಡಗಕಜೆಕಾರು ಗ್ರಾಮದ ಮಾಡ ಎಂಬಲ್ಲಿ ಬಾಲಕೃಷ್ಣ ಪ್ರಭು ಎಂಬವರ ದಿನಸಿ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೂಂಜಾಲಕಟ್ಟೆ ಪೆÇಲೀಸರು ಮಧ್ಯ ಸೇವನೆ ಮಾಡಲು ಅನುವು ಮಾಡಿಕೊಟ್ಟ ಆರೋಪಿತೆ ಬಡಗಕಜೆಕಾರು ಗ್ರಾಮದ ಪಾರೊಟ್ಟು ನಿವಾಸಿ ಶ್ರೀಮತಿ ಶೋಭಾ (42) ಹಾಗೂ ಮಧ್ಯ ಸೇವನೆ ಮಾಡಲು ಬಂದಿದ್ದ ಆರೋಪಿ, ಅದೇ ಪರಿಸರದ ನಿವಾಸಿ ಸಂದೇಶ ಅಲಿಯಾಸ್ ಮುನ್ನ (31) ವರ್ಷ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟ ಆರೋಪದಲ್ಲಿ ಬಂಧಿತರಾದ ಶೋಭಾ ಬಿಜೆಪಿ ಬೆಂಬಲಿತ ಬಡಗಕಜೆಕಾರು ಗ್ರಾ ಪಂ ಸದಸ್ಯೆ ಎಂದು ಹೇಳಲಾಗಿದೆ.

ಬಂಧಿತರಿಂದ 90 ಎಂಎಲ್ ಮೈಸೂರು ಲ್ಯಾನ್ಸರ್ ವಿಸ್ಕಿ ಮಧ್ಯ ತುಂಬಿದ 4 ಸ್ಯಾಚೆಟ್‍ಗಳು, ಅರ್ಧ ಮಧ್ಯ ಉಳಿದ ಮೈಸೂರು ಲ್ಯಾನ್ಸರ್ ವಿಸ್ಕಿ 180 ಎಂಎಲ್‍ನ 1 ಬಾಟಲಿ, 1 ಗಾಜಿನ ಗ್ಲಾಸು ಹಾಗೂ ಪ್ಲಾಸ್ಟಿಕ್ ಚೀಲವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಕಲಂ 15(ಎ), 32(3) ಕೆಇ ಕಾಯ್ದೆಯಂತೆÉ ಪ್ರಕರಣ ದಾಖಲಾಗಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಬಗಡಕಜೆಕಾರು : ಮದ್ಯಪಾನ ನಡೆಸಲು ಅನುವು ಮಾಡಿಕೊಟ್ಟ ಆರೋಪದಲ್ಲಿ ಪಂಚಾಯತ್ ಸದಸ್ಯೆ ಪೊಲೀಸ್ ವಶಕ್ಕೆ Rating: 5 Reviewed By: karavali Times
Scroll to Top