ಜನರನ್ನು ಆತಂಕಕ್ಕೆ ಒಡ್ಡುತ್ತಿರುವ ಪಾಸಿಟಿವ್ ಪ್ರಕರಣಗಳು - Karavali Times ಜನರನ್ನು ಆತಂಕಕ್ಕೆ ಒಡ್ಡುತ್ತಿರುವ ಪಾಸಿಟಿವ್ ಪ್ರಕರಣಗಳು - Karavali Times

728x90

27 April 2020

ಜನರನ್ನು ಆತಂಕಕ್ಕೆ ಒಡ್ಡುತ್ತಿರುವ ಪಾಸಿಟಿವ್ ಪ್ರಕರಣಗಳು


ಡಿ.ಎಸ್.ಐ.ಬಿ. ಪಾಣೆಮಂಗಳೂರು

ಕೋವಿಡ್-19 ಕೊರೊನ ವೈರಸ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು 21 ದಿನಗಳ ಕಾಲ ಜನರ ಹಿತಾಸಕ್ತಿಗಾಗಿ ಲಾಕ್‌ಡೌನ್ ವಿಸ್ತರಣೆ ಮಾಡಿದರು. ವಿಸ್ತರಿಸಿದ ಲಾಕ್‌ಡೌನ್‌ನಲ್ಲಿ ಎಲ್ಲಾ ವೈರಸ್‌ಗಳನ್ನು ನಾಶಗೊಳಿಸಿ ನಮ್ಮ ಕೆಲಸ ಕಾರ್ಯಕ್ಕೆ ಎಂದಿನಂತೆ ನೆಮ್ಮದಿಯಿಂದ ತೆರಳಬಹುದಿತ್ತು. ಆದರೆ, ಮೇ 3ರ ತನಕ ವಿಸ್ತರಣೆಗೊಳ್ಳಲು ನಮ್ಮ ಬೇಜವಾಬ್ದಾರಿಗಳೇ ಕಾರಣ. ನಮ್ಮ ಮೇಲಿನ ಕಾಳಜಿಯಿಂದ ಸರಕಾರ ಲಾಕ್‌ಡೌನ್‌ ವಿಸ್ತರಣೆ ಮಾಡಿತು. ನಾವುಗಳು ಮಾತ್ರ ಯಾವುದನ್ನೂ ಲೆಕ್ಕಿಸದೆ ನಾವು ನಡೆದದ್ದೆ ದಾರಿ ಎಂಬಂತೆ ಕೆಲವರು ಅವರ ಪಾಡಿಗೆ ಬೀದಿಗೆ ಇಳಿದಿರುವುದರಿಂದ ಮತ್ತಷ್ಟು ವೈರಸ್‌ಗಳು ಸೃಷ್ಟಿಯಾಗಿ ಜನರನ್ನು ತೊಂದರೆಗೊಳಗಾಗುವಂತೆ ಮಾಡಿತು. ಮೃಗಾಲಯದಲ್ಲಿ ನಮ್ಮ ಜೀವಕ್ಕೆ ಅಪಾಯ ಆಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ಕ್ರೂರ ಪ್ರಾಣಿಗಳ ಸುತ್ತಲೂ ಬೇಲಿಗಳನ್ನು ಹಾಕಿರುತ್ತಾರೆ. ಹಾಗೇಯೆ ಸರಕಾರವು ನಮ್ಮ ಕಾಳಜಿಯಿಂದ ಮನೆಯಿಂದ ಹೊರಬೇಡಿ ವೈರಸ್‌ನಿಂದ ಕಾಪಾಡಿಕೊಳ್ಳಲು  ಎಚ್ಚರಿಕೆಯನ್ನು ಪದೇ ಪದೇ ನೀಡುತ್ತಿದ್ದರು ಕೆಲವೊಂದು ಜನರಿಗೆ ಇನ್ನೂ ಬುದ್ದಿ ಬಂದಿಲ್ಲ.

 ಕೊರೊನ ಜಾತಿ ಧರ್ಮ ಯಾವುದನ್ನು ನೋಡದೆ ಸಿಕ್ಕವರನ್ನು ಬಲಿಪಶು ಮಾಡುತ್ತಿವೆ. ನಾವುಗಳು ಅದರಿಂದ ಪಾರಾಗಲು ನಾವು ಮನೆಯಲ್ಲಿರಬೇಕು ಅಷ್ಟೆ. ದೂರದ ಪ್ರದೇಶದಲ್ಲಿ ಸಾವು ನೋವುಗಳನ್ನು ನಾವು ಪತ್ರಿಕೆಯಲ್ಲಿ ನೋಡಿದರೆ ಇತ್ತೀಚಿಗೆ ನಮ್ಮ ಪ್ರದೇಶದಲ್ಲಿಯೇ ಸುದ್ಧಿಯಾಗುತ್ತಿವೆ.

  ಹೌದು ಬುದ್ದಿವಂತರ ಜಿಲ್ಲೆ ಎಂದೇ ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಕೇಳುತ್ತಿವೆ. ಪಾಸಿಟಿವ್ ಕಾಣಿಸಿಕೊಂಡ ಪುಟ್ಟ ಮಗುವೊಂದು ಗುಣಮುಖವಾದ ಸಂತೋಷದ ಹಿಂದೆಯೇ ಮಹಿಳೆಯೊಬ್ಬರು ಮೃತಪಟ್ಟು ಜನರ ನಡುವೆ ಆತಂಕದ ವಾತಾವರಣ ನಿರ್ಮಾಣವಾಯಿತು. ಅದರ ಹಿಂದೆಯೇ ಇನ್ನೊಂದು ಮಹಿಳೆಯು ಮೃತಪಟ್ಟಾಗ ಜನರ ಉಸಿರು ಕಟ್ಟುವಂತೆ ಮಾಡಿತು. ದಿನದಿಂದ ದಿನಕ್ಕೆ ಒಂದೊಂದು ಪಾಸಿಟಿವ್ ಪ್ರಕರಣಗಳು ಕೇಳುತ್ತಿರುವಾಗ ಜನತೆಗೆ ಸ್ವಲ್ಪ ಮಟ್ಟಿನ ಜ್ಞಾನ ಬಂದಿದೆ ಆದರೂ ಕೆಲವರು ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ತುಂಬಾ ಖೇದಕರ. ನಾವುಗಳು ನಮ್ಮ ಸ್ವತಃ ಬುದ್ದಿ ಉಪಯೋಗಿಸಿ ನಮಗಲ್ಲದಿದ್ದರು ನಮ್ಮ ಕುಟುಂಬಕ್ಕಾಗಿ, ನಮ್ಮ ಸುತ್ತಮುತ್ತಲಿನ ಜನರಿಗಾಗಿ, ನಮ್ಮ ದೇಶಕ್ಕಾಗಿ ಜೀವ ಉಳಿಸಲು ನಾವುಗಳು ಮನೆಯಲ್ಲಿಯೇ ಉಳಿದು ಎಲ್ಲರನ್ನೂ ಕಾಪಾಡಬೇಕಾಗಿದೆ. ಇಲ್ಲದಿದ್ದರೆ ಅಮೇರಿಕಾ, ಚೀನಾ ಇನ್ನಿತರ ದೇಶದಲ್ಲಿ ನಡೆದ ಪರಿಸ್ಥಿತಿಯನ್ನು ನಾವು ಕೂಡ ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ನಾವು ಮನೆಯಲ್ಲಿ ಸರಿಯಾಗಿ ಉಳಿಯುವ ತನಕ ಈ ಲಾಕ್‌ಡೌನ್ ವಿಸ್ತರಣೆಯಾಗುತ್ತಲೇ ಇರುತ್ತದೆ. ಇದರಿಂದ ನಾವು ಹೊರಬರಬೇಕಾದರೆ ಸ್ವಲ್ಪ ದಿನದ ಮಟ್ಟಿಗೆ ಆದರೂ ಮನೆಯಲ್ಲಿ ಉಳಿಯಬೇಕು. ಮೈದಾನದಲ್ಲಿ ಆಟವಾಡಲು ಗುಂಪು ಗುಂಪು ಸೇರಿ ಪರಸ್ಪರ ಬೆರೆಯುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ಪರಿಜ್ಞಾನ ನಮಗೆ ಇರಲೇಬೇಕು. ಅಷ್ಟು ಕೂಡ ನಮಗೆ ತಿಳುವಳಿಕೆ ಇಲ್ಲದಿದ್ದರೆ ಬುದ್ದಿವಂತರ ಜಿಲ್ಲೆಯಲ್ಲಿ ಜೀವಿಸುವುದಕ್ಕೆ ಅರ್ಥವಿಲ್ಲ. 
  • Blogger Comments
  • Facebook Comments

0 comments:

Post a Comment

Item Reviewed: ಜನರನ್ನು ಆತಂಕಕ್ಕೆ ಒಡ್ಡುತ್ತಿರುವ ಪಾಸಿಟಿವ್ ಪ್ರಕರಣಗಳು Rating: 5 Reviewed By: karavali Times
Scroll to Top