ಕಲಬುರಗಿಯಲ್ಲಿ ಕೋವಿಡ್ ಸೋಂಕಿಗೆ 4ನೇ ಬಲಿ : ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೇರಿಕೆ - Karavali Times ಕಲಬುರಗಿಯಲ್ಲಿ ಕೋವಿಡ್ ಸೋಂಕಿಗೆ 4ನೇ ಬಲಿ : ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೇರಿಕೆ - Karavali Times

728x90

20 April 2020

ಕಲಬುರಗಿಯಲ್ಲಿ ಕೋವಿಡ್ ಸೋಂಕಿಗೆ 4ನೇ ಬಲಿ : ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೇರಿಕೆ



ಬೆಂಗಳೂರು (ಕರಾವಳಿ ಟೈಮ್ಸ್) : ಕಲಬುರ್ಗಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಸೋಮವಾರ ಬೆಳಿಗ್ಗೆ 80 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತ ಮೃತರ ಸಂಖ್ಯೆ 4ಕ್ಕೇರಿದ್ದು, ರಾಜ್ಯದಲ್ಲಿ ಒಟ್ಟು ಕೊರೋನಾಗೆ ಬಲಿಯಾದವರ ಸಂಖ್ಯೆ 17ಕ್ಕೇರಿದೆ.

ಮೂರು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಅವರ ವರದಿ ಬಂದಿದ್ದು, ಕೋವಿಡ್-19 ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಮಾರ್ಚ್ 9 ರಂದು ನಗರದ ಕೆ.ಎನ್.ಝಡ್. ಫಂಕ್ಷನ್ ಹಾಲ್ ಬಳಿಯ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕಿ ಅವರು ಕೋವಿಡ್‍ಗೆ ಮೊದಲ ಬಲಿಯಾಗಿದ್ದರು. 80 ವರ್ಷದ ವೃದ್ಧನಂತೆ ಸಿದ್ದಿಕಿ ಅವರ ವೈದ್ಯಕೀಯ ವರದಿಯೂ ಅವರು ಸಾವಿಗೀಡಾದ ನಂತರವೇ ಬಂದಿತ್ತು.  ಎಪ್ರಿಲ್ 7 ರಂದು 65 ವರ್ಷದ ಹಣ್ಣಿನ ವ್ಯಾಪಾರಿ, ಎಪ್ರಿಲ್ 13 ರಂದು 55 ವರ್ಷದ ಬಟ್ಟೆ ವ್ಯಾಪಾರಿ ಈ ಸೋಂಕಿಗೆ ಬಲಿಯಾಗಿದ್ದಾರೆ.
  • Blogger Comments
  • Facebook Comments

0 comments:

Post a comment

Item Reviewed: ಕಲಬುರಗಿಯಲ್ಲಿ ಕೋವಿಡ್ ಸೋಂಕಿಗೆ 4ನೇ ಬಲಿ : ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೇರಿಕೆ Rating: 5 Reviewed By: karavali Times
Scroll to Top