ರಾಷ್ಟ್ರಪತಿ ಭವನಕ್ಕೂ ತಟ್ಟಿದ ಕೋವಿಡ್-19 ಭೀತಿ : ಪರಿಸರದ 125 ಕುಟುಂಬಕ್ಕೆ ಹೋಂ ಕ್ವಾರಂಟೈನ್ - Karavali Times ರಾಷ್ಟ್ರಪತಿ ಭವನಕ್ಕೂ ತಟ್ಟಿದ ಕೋವಿಡ್-19 ಭೀತಿ : ಪರಿಸರದ 125 ಕುಟುಂಬಕ್ಕೆ ಹೋಂ ಕ್ವಾರಂಟೈನ್ - Karavali Times

728x90

20 April 2020

ರಾಷ್ಟ್ರಪತಿ ಭವನಕ್ಕೂ ತಟ್ಟಿದ ಕೋವಿಡ್-19 ಭೀತಿ : ಪರಿಸರದ 125 ಕುಟುಂಬಕ್ಕೆ ಹೋಂ ಕ್ವಾರಂಟೈನ್ನವದೆಹಲಿ (ಕರಾವಳಿ ಟೈಮ್ಸ್) : ವಿಶ್ವಕ್ಕೇ ಕಂಟಕವಾಗಿ ಪರಿಣಮಿಸಿರುವ ಮಹಾಮಾರಿ ಕೋವಿಡ್-19 ಭೀತಿ ದೆಹಲಿಯ ರಾಷ್ಟ್ರಪತಿ ಭವನಕ್ಕೂ ತಟ್ಟಿದೆ. ಭವನದ ಕಾಂಪ್ಲೆಕ್ಸ್‍ನಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕಿರುವ ಹಿನ್ನಲೆಯಲ್ಲಿ ಸುತ್ತಮುತ್ತಲ 125 ಕುಟುಂಬವನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಕೊರೊನಾ ಪಾಸಿಟಿವ್ ಬಂದಿರುವ ಮಹಿಳೆ ರಾಷ್ಟ್ರಪತಿ ಭವನದಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿರುವ ವ್ಯಕ್ತಿಯ ಸಂಬಂಧಿಯಾಗಿದ್ದಾರೆ. ಇತ್ತೀಚೆಗೆ ಮಹಿಳೆಯ ಸೊಸೆ ಹಾಗೂ ತಾಯಿ ಕೋವಿಡ್-19ಗೆ ಬಲಿಯಾಗಿದ್ದರು. ಈ ಸಂದರ್ಭ ಕುಟುಂಬದವರೆಲ್ಲ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಸದ್ಯ ಮಹಿಳೆಯ ಕುಟುಂಬದವರಿಗೆ ಕೊರೊನಾ ನೆಗೆಟಿವ್ ಎಂಬುದಾಗಿ ವರದಿ ಬಂದಿದ್ದು, ಎಲ್ಲರನ್ನೂ ಐಸೋಲೇಷನ್‍ನಲ್ಲಿಡಲಾಗಿದೆ.

ಸೊಸೆಗೂ ಕೊರೊನಾ ಪಾಸಿಟಿವ್ ಎಂಬುದಾಗಿ ಸೋಮವಾರ ವರದಿ ಬಂದಿದೆ. ಈಕೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆಲ್ಲ ನೆಗೆಟಿವ್ ಎಂಬುದಾಗಿ ವರದಿ ಬಂದಿದೆ. ಸದ್ಯ ರಾಷ್ಟ್ರಪತಿ ಭವನದ ಸುತ್ತಮುತ್ತ ಇರೋ 125 ಮನೆಗಳ ಸದಸ್ಯರನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದ್ದು, ಒಂದೇ ಬ್ಲಾಕ್‍ನಲ್ಲಿರುವ 25 ಮನೆಗಳನ್ನು ಕಟ್ಟುನಿಟ್ಟಾಗಿ ಪ್ರತ್ಯೇಕಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ರಾಷ್ಟ್ರಪತಿ ಭವನಕ್ಕೂ ತಟ್ಟಿದ ಕೋವಿಡ್-19 ಭೀತಿ : ಪರಿಸರದ 125 ಕುಟುಂಬಕ್ಕೆ ಹೋಂ ಕ್ವಾರಂಟೈನ್ Rating: 5 Reviewed By: karavali Times
Scroll to Top