ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ರಮೇಶ್ ಜಾರಕಿಹೊಳಿ ಸಹಿತ ಮೂರು ಮಂದಿಗೆ ಕೊಕ್ - Karavali Times ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ರಮೇಶ್ ಜಾರಕಿಹೊಳಿ ಸಹಿತ ಮೂರು ಮಂದಿಗೆ ಕೊಕ್ - Karavali Times

728x90

9 April 2020

ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ರಮೇಶ್ ಜಾರಕಿಹೊಳಿ ಸಹಿತ ಮೂರು ಮಂದಿಗೆ ಕೊಕ್


ಬೆಂಗಳೂರು ನಗರ ಉಸ್ತುವಾರಿಯನ್ನು ತನ್ನಲ್ಲೇ ಉಳಿಸಿಕೊಂಡ ಸಿಎಂ



ಬೆಂಗಳೂರು (ಕರಾವಳಿ ಟೈಮ್ಸ್) : ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದ ರಾಜ್ಯದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರವು ಸೋಂಕು ಹರಡುವುದನ್ನು ತಡೆಯುವಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ವೇಳೆ ಮುಖ್ಯಮಂತ್ರಿ ಯುಡಿಯೂರಪ್ಪ ಅವರು ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಆದರೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಮೂವರು ಸಚಿವರಿಗೆ ಕೋಕ್ ನೀಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ನಗರ ಜಿಲ್ಲಾ ಉಸ್ತವಾರಿಯನ್ನು ವಹಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಶ್ರೀಮಂತ ಪಾಟೀಲ್ ಅವರಿಗೆ ಯಾವುದೇ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಜಿಲ್ಲೆಯ ಜೊತೆಗೆ ಹೆಚ್ಚುವರಿಯಾಗಿ ಧಾರವಾಡ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಪ್ರಭು ಚವ್ಹಾಣ ಅವರಿಗೆ ಹೆಚ್ಚುವರಿ ಜಿಲ್ಲೆಗಳನ್ನು ನೀಡಿಲಾಗಿದೆ. ಆದರೆ ರಮೇಶ್ ಜಾರಕಿಹೊಳಿ ಅಥವಾ ಶ್ರೀಮಂತ ಪಾಟೀಲ್ ಅವರನ್ನು ಕೈಬಿಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಆರೋಗ್ಯ ಸಚಿವ ಶ್ರೀರಾಮುಲುಗೆ ಚಿತ್ರದುರ್ಗದ ಹೊಣೆಗಾರಿಕೆ ನೀಡಿದ್ದು, ಡಿಸಿಎಂ ಅಶ್ವತ್ ನಾರಾಯಣ ಅವರಿಗೆ ಹೆಚ್ಚುವರಿಯಾಗಿ ರಾಮನಗರ ಜಿಲ್ಲೆ ವಹಿಸಲಾಗಿದೆ. ಇನ್ನು ಸಚಿವ ವಿ ಸೋಮಣ್ಣ ಅವರಿಗೆ ಕೊಡಗು ಜಿಲ್ಲೆ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.

ಉಳಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಇಂತಿದೆ


ಬಿ.ಎಸ್. ಯಡಿಯೂರಪ್ಪ - ಬೆಂಗಳೂರು ನಗರ ಜಿಲ್ಲೆ
ಆರ್. ಅಶೋಕ್ - ಬೆಂಗಳೂರು ಗ್ರಾಮಾಂತರ
ಸಿ.ಎಸ್. ಅಶ್ವಥ್ ನಾರಾಯಣ - ರಾಮನಗರ
ಎಸ್. ಸುರೇಶ್ ಕುಮಾರ್ - ಚಾಮರಾಜನಗರ
ವಿ. ಸೋಮಣ್ಣ - ಕೊಡಗು (ಹೆಚ್ಚುವರಿ)
ಲಕ್ಷ್ಣಣ ಸವದಿ - ರಾಯಚೂರು
ಗೋವಿಂದ ಕಾರಜೋಳ - ಬಾಗಲಕೋಟೆ
ಕೆ.ಎಸ್. ಈಶ್ವರಪ್ಪ - ಶಿವಮೊಗ್ಗ
ಜಗದೀಶ್ ಶೆಟ್ಟರ್ - ಬೆಳಗಾವಿ, ಧಾರವಾಡ (ಹೆಚ್ಚುವರಿ)
ಬಿ. ಶ್ರೀರಾಮುಲು - ಚಿತ್ರದುರ್ಗ
ಸಿ.ಟಿ. ರವಿ - ಚಿಕ್ಕಮಗಳೂರು
ಬಸವರಾಜ ಬೊಮ್ಮಾಯಿ - ಹಾವೇರಿ, ಉಡುಪಿ (ಹೆಚ್ಚುವರಿ)
ಕೋಟಾ ಶ್ರೀನಿವಾಸ ಪೂಜಾರಿ - ದಕ್ಷಿಣ ಕನ್ನಡ
ಜೆ.ಸಿ. ಮಾಧುಸ್ವಾಮಿ - ತುಮಕೂರು, ಹಾಸನ (ಹೆಚ್ಚುವರಿ)
ಸಿ.ಸಿ. ಪಾಟೀಲ - ಗದಗ
ಎಚ್. ನಾಗೇಶ್ - ಕೋಲಾರ
ಪ್ರಭು ಚವ್ಹಾಣ - ಬೀದರ್, ಯಾದಗಿರಿ (ಹೆಚ್ಚುವರಿ)
ಶಶಿಕಲಾ ಜೊಲ್ಲೆ - ವಿಜಯಪುರ
ಶಿವರಾಮ್ ಹೆಬ್ಬಾರ್ - ಉತ್ತರ ಕನ್ನಡ
ಎಸ್.ಟಿ. ಸೋಮಶೇಖರ್ - ಮೈಸೂರು
ಕೆ. ಸುಧಾಕರ್ - ಚಿಕ್ಕಬಳ್ಳಾಪುರ
ಕೆ.ಸಿ. ನಾರಾಯಣಗೌಡ - ಮಂಡ್ಯ
ಆನಂದಸಿಂಗ್ - ಬಳ್ಳಾರಿ
ಬೈರತಿ ಬಸವರಾಜ - ದಾವಣಗೆರೆ
ಬಿ.ಸಿ. ಪಾಟೀಲ್ - ಕೊಪ್ಪಳ

ಇದೇ ವೇಳೆ ಸರ್ಕಾರ ಎಲ್ಲ ಜಿಲ್ಲೆಗಳ ಉಸ್ತುವಾರಿಯ ಜವಾಬ್ದಾರಿಯನ್ನು ಐಎಎಸ್ ಅಧಿಕಾರಿಗಳಿಗೆ ನೀಡಿದ್ದು, ಅದರ ವಿವರ ಇಂತಿದೆ :


  • Blogger Comments
  • Facebook Comments

0 comments:

Post a Comment

Item Reviewed: ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ರಮೇಶ್ ಜಾರಕಿಹೊಳಿ ಸಹಿತ ಮೂರು ಮಂದಿಗೆ ಕೊಕ್ Rating: 5 Reviewed By: karavali Times
Scroll to Top